October 5, 2024

ಟಿ20 ವಿಶ್ವಕಪ್ ನ ಸೂಪರ್ 8ರ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಸೋಲಿಸಿ ಅಫ್ಘಾನಿಸ್ತಾನ ತಂಡವು ಸೆಮಿಫೈನಲ್ ಪ್ರವೇಶಿಸಿದೆ. ಈ ಮೂಲಕ   ಅಫ್ಘಾನಿಸ್ತಾನ ತಂಡವು ಮೊದಲ ಬಾರಿಗೆ ಟಿ20 ಸೆಮಿಫೈನಲ್ ಪ್ರವೇಶಿಸಿದ ಇತಿಹಾಸ ಸೃಷ್ಟಿಸಿದೆ.

ಮೊದಲು ಬ್ಯಾಟಿಂಗ್ ನಡೆಸಿದ್ದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 115 ರನ್ ದಾಖಲಿಸಿತ್ತು. ಮಳೆ ಭಾದಿತ ಪಂದ್ಯದಲ್ಲಿ ಡಕ್‌ ವರ್ಥ್‌ ಲೂಯಿಸ್ ನಿಯಮದ ಪ್ರಕಾರ ಬಾಂಗ್ಲಾದೇಶ ರನ್ ರೇಟ್ ಆಧಾರದಲ್ಲಿ ಸೆಮಿಫೈನಲ್ ಪ್ರವೇಶಿಸಬೇಕಿದ್ದಿದ್ದರೆ ಈ ಗುರಿಯನ್ನು 12.1 ಓವರ್‌ಗಳಲ್ಲಿ ತಲುಪಬೇಕಿತ್ತು. ಬಾಂಗ್ಲಾದೇಶವು 17.5 ಓವರ್‌ಗಳಲ್ಲಿ ಕೇವಲ 105 ರನ್‌ ಗಳಿಸುವಷ್ಟರಲ್ಲಿ ಅಲೌಟ್ ಆಯಿತು. 8 ರನ್‌ನಿಂದ ಸೋಲುವುದರೊಂದಿಗೆ ಸೆಮಿಫೈನಲ್ ಅವಕಾಶ ಕೈತಪ್ಪಿಸಿಕೊಂಡಿತು.

ಈ ಫಲಿತಾಂಶದೊಂದಿಗೆ ಆಸ್ಟ್ರೇಲಿಯಾ ತಂಡವು ಸೆಮಿಫೈನಲ್ ತಲುಪುವ ಕ್ಷೀಣ ಅವಕಾಶವೂ ಕಮರಿ ಹೋಯಿತು. ಸೂಪರ್ 8ರ ಹಂತದಲ್ಲಿ ಭಾರತ ಮತ್ತು ಅಫ್ಘಾನ್ ವಿರುದ್ಧ ಸೋಲನುಭವಿಸಿದ್ದ ಆಸ್ಟ್ರೇಲಿಯಾ ಪಂದ್ಯಾವಳಿಯ ಸೆಮಿಫೈನಲ್ ತಲುಪುವ ಅವಕಾಶ ಕಳೆದುಕೊಂಡಿದೆ.

ಸೆಮಿಫೈನಲ್ ಕಾಳಗ : ಭಾರತಕ್ಕೆ ಇಂಗ್ಲೇಂಡ್ ಎದುರಾಳಿ :

ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಗಳು ಗುರುವಾರ ನಡೆಯಲಿವೆ. ಮೊದಲ ಸೆಮಿಫೈನಲ್ ನಲ್ಲಿ ದಕ್ಷಿಣ ಆಪ್ರಿಕಾ ತಂಡವನ್ನು ಅಪ್ಘಾನಿಸ್ತಾನ ಎದುರಿಸಲಿದ್ದು, ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಭಾರತ ಮತ್ತು ಇಂಗ್ಲೇಂಡ್ ತಂಡಗಳು ಮುಖಾಮುಖಿಯಾಗಲಿವೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ