October 5, 2024

ಅನುಕಂಪದ ಆಧಾರದ ಮೂಲಕ ಕೆಲಸ ಪಡೆಯಲು ಅರ್ಜಿ ಸಲ್ಲಿಸಿದ್ದ ಮಹಿಳೆಯೋರ್ವರ ಬಳಿ ಹಣಕ್ಕೆ ಬೇಡಿಕೆ ಇಟ್ಟು ಹಣ ಪಡೆದಿರುವುದು ಹಾಗೂ ಕರ್ತವ್ಯ ಲೋಪ ಎಸಗಿದ್ದ ಆರೋಪದ ಹಿನ್ನೆಲೆಯಲ್ಲಿ ಬಿಇಒ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕ ಬಶೀರ್ ಅಹಮ್ಮದ್‌ರನ್ನು ಅಮಾನತುಗೊಳಿಸಿ ಡಿಡಿಪಿಐ ಆದೇಶಿಸಿದ್ದಾರೆ.

ಅನುಕಂಪದ ಆಧಾರದಲ್ಲಿ ಸರಕಾರಿ ಹುದ್ದೆ ಪಡೆಯಲು ಅರ್ಜಿ ಸಲ್ಲಿಸಿದ್ದ ಮಹಿಳೆಯಿಂದ ಕಳೆದ ವರ್ಷ ಡಿ.27ರಂದು ಮೂಡಿಗೆರೆ ಬಿಇಒ ಹೇಮಂತರಾಜ್ ಅವರು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿನಡೆಸಿ ಬಿಇಒ ಅವರನ್ನು ಬಂಧಿಸಿದ್ದರು.

ಇದೇ ಕೆಲಸಕ್ಕೆ ಡಿ ದರ್ಜೆ ಸಹಾಯಕ ಬಶೀರ್ ಎಂಬವರು ಮಹಿಳೆಯ ಪತಿ ಮೃತಪಟ್ಟ ಸಂದರ್ಭದಲ್ಲಿ ಶವ ಸಂಸ್ಕಾರಕ್ಕೆ ಸಿಗುವ ಪರಿಹಾರಧನ 10 ಸಾವಿರ ಹಣದಲ್ಲಿ 3 ಸಾವಿರ, ಅನುಕಂಪದ ಆಧಾರದಲ್ಲಿ ಕೆಲಸ ಪಡೆಯಲು ಅರ್ಜಿ ಸಲ್ಲಿಸಿದ ಬಳಿಕ 13 ಸಾವಿರ, ಪೆನ್‌ಷನ್‌ಗಾಗಿ 6 ಸಾವಿರ ಬೇಡಿಕೆ ಇಟ್ಟಿದ್ದ.

ಅನುಕಂಪದ ಕೆಲಸ ಹಾಗೂ ಇತರ ಕೆಲಸ ಮಾಡಿಕೊಡಲು ಮಹಿಳೆಯಿಂದ ಒಟ್ಟು ೨೪ ಸಾವಿರ ಹಣವನ್ನು ಬಶೀರ್ ಅಹಮ್ಮದ್ ಅವರು ತನ್ನ ಪತ್ನಿಯ ಅಕೌಂಟ್‌ಗೆ ಫೋನ್ ಪೇ ಮಾಡಿಸಿಕೊಂಡಿದ್ದರು. ಈ ಆರೋಪದ ಜತೆಗೆ ಬಿಇಒ ಕಚೇರಿಗೆ ಸರಿಯಾಗಿ ಆಗಮಿಸಿದೇ ಕರ್ತವ್ಯ ಲೋಪ ಎಸಗಿದ್ದ ಆರೋಪಗಳು ತನಿಖೆ ವೇಳೆ ಸಾಭೀತಾದ ಕಾರಣಕ್ಕೆ ಬಶೀರ್ ಅವರನ್ನು ಸೋಮವಾರ ಅಮಾನತು ಮಾಡಿ ಡಿಡಿಪಿಐ ಆದೇಶಿಸಿದ್ದಾರೆ.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ