October 5, 2024

ಮೂಡಿಗೆರೆ ಪಟ್ಟಣದಿಂದ ಮಾಕೋಹನಳ್ಳಿ, ಗೆಂಡೇಹಳ್ಳಿ ಕಡೆಗೆ ತೆರಳುವ ರಸ್ತೆ ಪಕ್ಕದಲ್ಲಿರುವ ತೋಟವೊಂದರಲ್ಲಿ ಒಣಗಿದ ಮರಗಳು ಅಪಾಯಕಾರಿಯಾಗಿ ಬಾಗಿದ್ದು, ಅನಾಹುತ ಸಂಭವಿಸುವ ಮುನ್ನ ಮರಗಳ ತೆರವಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಾಕೋನಹಳ್ಳಿ ರಸ್ತೆಯ ಘಟ್ಟದಹಳ್ಳಿ ಹರೀಶ್ ಗೌಡ ಎಂಬುವವರ ಮನೆಯ ಸಮೀಪ ಕಾಫಿ ಎಸ್ಟೇಟ್ ವೊಂದರಲ್ಲಿ ಅಕ್ಕಪಕ್ಕದಲ್ಲಿಯೇ ಇರುವ ನಾಲ್ಕು ಮರಗಳು ಒಣಗಿ ನಿಂತಿವೆ. ಅವು ರಸ್ತೆಯ ಕಡೆಗೆ ವಾಲಿವೆ. ರಸ್ತೆಯ ತಿರುವಿನಲ್ಲೇ ಈ ಮರಗಳು ಇವೆ.

ಈ ರಸ್ತೆ ರಾಜ್ಯ ಹೆದ್ದಾರಿಯಾದ್ದರಿಂದ ಪ್ರತಿದಿನ ನೂರಾರು ವಾಹನಗಳು ಹಗಲು ರಾತ್ರಿ ಸಂಚರಿಸುತ್ತವೆ. ಮಳೆಗಾಲ ಪ್ರಾರಂಭವಾಗಿದ್ದು, ಗಾಳಿ ಮಳೆ ಈ ಭಾಗದಲ್ಲಿ ಹೆಚ್ಚು ಇರುತ್ತದೆ. ಶಾಲಾ ಮಕ್ಕಳು, ಸಾರ್ವಜನಿಕರು ತಿರುಗಾಡುವ ರಸ್ತೆ. ಗಾಳಿ ಮಳೆ  ಬಂದರೆ ಈ ಒಣಗಿದ ಮರಗಳು ಬೀಳೋದು ಪಕ್ಕ. ಈ ಮರಗಳು ವಾಹನಗಳ ಮೇಲೆ,  ಮನುಷ್ಯರ ಮೇಲೆ ಬಿದ್ದರೆ ಸಾವು ಗ್ಯಾರಂಟಿ.

ಮಲೆನಾಡು ಭಾಗದಲ್ಲಿ ಅನೇಕ ಕಡೆ ರಸ್ತೆಯಂಚಿನಲ್ಲಿ ಒಣಗಿದ ಮರಗಳು ರಸ್ತೆಗೆ ಬಾಗಿದ್ದು, ಅಪಾಯಕಾರಿ ಸ್ಥಿತಿಯಲ್ಲಿ ಇವೆ. ಕೆಲವು ಕಡೆ ವಿದ್ಯುತ್ ಲೈನ್ ಕೂಡ ಇಂತಹ ಮರದ ಸಮೀಪ ಹಾದುಹೋಗಿವೆ. ಇದರಿಂದ ಇನ್ನಷ್ಟು ಅಪಾಯ ಸಂಭವಿಸುವ ಸಾಧ್ಯತೆ ಇದೆ.

ಇಂತಹ ಸನ್ನಿವೇಶ ಸೃಷ್ಟಿಯಾಗಿರುವ ಕಡೆ  ತೋಟದ ಮಾಲೀಕರು ಕೂಡಲೇ ಈ ಮರಗಳನ್ನು ಸುರಕ್ಷಿತವಾಗಿ ಕಡಿದು ತೆರವುಗೊಳಿಸಬೇಕು. ಈ ಬಗ್ಗೆ ಅರಣ್ಯ ಮತ್ತು ಪೊಲೀಸ್ ಇಲಾಖೆ ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ