October 5, 2024

ಸಂತ ಅಂತೋನಿಯವರು ಪವಾಡ ಪುರುಷರಾಗಿದ್ದು ಏಸು ಕ್ರಿಸ್ತರ ಅನುಯಾಯಿಯಾಗಿ ಬದುಕಿದರು. ಅವರ ಆದರ್ಶಗಳು ನಮಗೆ ದಾರಿದೀಪವಾಗಬೇಕು ಎಂದು ಬಣಕಲ್ ಬಾಲಿಕ ಮರಿಯ ಚರ್ಚ್ ದರ್ಮಗುರು ಫಾ.ಪ್ರೇಮ್ ಲಾರೆನ್ಸ್ ಡಿಸೋಜ ಹೇಳಿದರು.

ಬಾಳೂರಿನ ಸಂತ ಅಂತೋನಿ ಗವಿ ಉತ್ಸವದ ಪೂಜೆ ಅರ್ಪಿಸಿ ಅವರು ಮಾತನಾಡಿ ಯೇಸು ಕ್ರಿಸ್ತರು ಪ್ರೀತಿ ತ್ಯಾಗಮಯೀ ಜೀವನ ನಡೆಸಿ ಸರ್ವರಿಗೂ ಮಾರ್ಗದರ್ಶಿಯಾದರು. ಅವರ ಆದರ್ಶವನ್ನು ಎಲ್ಲಾ ಸಂತರುಗಳು ಸುವಾರ್ತಾ ಪ್ರಸಾರದ ಮೂಲಕ ಏಸುಕ್ರಿಸ್ತರ ದಾರಿಯಲ್ಲಿ ನಡೆಯಲು ಪ್ರೇರೆಪಿಸಿದರು.
ನಾವು ಕೂಡ ಸನ್ಮಾರ್ಗದಲ್ಲಿ ನಡೆದು ದೇವರ ಮಕ್ಕಳಾಗಿ ಜೀವಿಸಲು ಪ್ರಯತ್ನಿಸಬೇಕು. ಪ್ರೀತಿ, ತ್ಯಾಗ, ವಿಶ್ವಾಸವನ್ನು ನಾವು ಜೀವನದಲ್ಲಿ ಅಳವಡಿಸಿ ಸಂತ ಅಂತೋನಿಯವರಂತೆ ತ್ಯಾಗಮಯೀ ಬದುಕನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಲು ಪ್ರಯತ್ನಿಸೋಣ ಎಂದರು.

ಪೂಜೆಯಲ್ಲಿ ದರ್ಮಗುರು ಫಾ.ಆನಂದ್ ಕ್ಯಾಸ್ತಲಿನೊ, ಫಾ.ಥಾಮಸ್ ಕಲಘಟಗಿ, ರೊನಾಲ್ಡ್ ಡಿಸೋಜ, ರಿಜ್ವಾನ ಹಾಗೂ ಕೊಟ್ಟಿಗೆಹಾರ, ಬಣಕಲ್, ಬಾಳೂರು ದರ್ಮಕೇಂದ್ರದ ಭಕ್ತಾಧಿಗಳು, ಸಾರ್ವಜನಿಕರು ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ