October 5, 2024

ಸ್ವಚ್ಚಂಧ ಪರಿಸರವನ್ನು ಸವಿಯಲು ಆಗಮಿಸುವ ಪ್ರವಾಸಿಗರು ಹಾಗೂ ಪರ್ವತರೋಹಿಗಳಿಗೆ ಅನುಕೂಲವಾಗಲು ಕಡಿಮೆ ಮೊತ್ತದಲ್ಲಿ ಮೂಲಸೌಕರ್ಯದ ವ್ಯವಸ್ಥೆ ಕಲ್ಪಿಸಲು ಮುಂದಾಗುತ್ತಿದೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷ ಹೆಚ್.ರವಿಕುಮಾರ್ ಹೇಳಿದರು.

ನಗರದ ಭುವನೇಂದ್ರ ವಿದ್ಯಾಸಂಸ್ಥೆಯಲ್ಲಿ ಯೂತ್ ಹಾಸ್ಟೆಲ್ಸ್ ಅಸೊಸಿಯೇಷನ್ ಆಫ್ ಇಂಡಿ ಯಾದ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಸರ್ವ ಸದಸ್ಯರ ಮಹಾಸಭೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಹಾಸ್ಟೆಲ್ ನಿರ್ಮಾಣದ ಉದ್ದೇಶದಿಂದ ಜಿಲ್ಲಾಡಳಿತವು ಅಸೋಸಿಯೇಷನ್ ನಾಲ್ಕು ದಶಕಗಳ ಹಿಂದೆ ಒಂದು ಎಕರೆ ಭೂಮಿಯನ್ನು ಜಿ.ಪಂ. ಸಮೀಪ ಮಂಜೂರುಗೊಳಿಸಿದೆ. ಹಿಂದಿನ ಸಮಿತಿ ತಟಸ್ಥಗೊಂಡ ಹಿನ್ನೆಲೆಯಲ್ಲಿ ನೂತನ ಘಟಕ ಸ್ಥಾಪಿಸಲಾಗಿದೆ. ಪ್ರಸ್ತುತ ರಾಷ್ಟ್ರೀಯ ಸಂಸ್ಥೆಯು 5 ಲಕ್ಷ ರೂ. ದೇಣಿಗೆ ನೀಡಿ ಅಭಿವೃಧ್ದಿಗೆ ಮುಂದಾಗುತ್ತಿದೆ ಎಂದರು.

ನಿವೇಶನದ ಸುತ್ತಮುತ್ತಲು ಕಾಂಪೌಂಡ್ ನಿರ್ಮಿಸುವ ಜೊತೆಗೆ ಪರ್ವತರೋಹಿಗಳಿಗೆ ತಂಗುವ ಸಲುವಾಗಿ ಗುಣಮಟ್ಟದ ಶೌಚಾಲಯ, ಟೆಂಟ್‌ಗಳನ್ನು ವ್ಯವಸ್ಥೆ ಕಲ್ಪಿಸುವ ಗುರಿ ಹೊಂದಿದೆ ಎಂದ ಅವರು ನೂತನ ಘಟಕವು ಮುತುವರ್ಜಿ ವಹಿಸುವ ಮೂಲಕ ಪ್ರವಾಸಿಗರ ಶ್ರೇಯೋಭಿವೃದ್ದಿ ಹಾಗೂ ಅಸೋಸಿ ಯೇಷನ್ ಬೆಳವಣಿಗೆಗೆ ಸಹಕರಿಸಬೇಕು ಎಂದರು.

ವಾರಕ್ಕೇರಡು ದಿನಗಳಲ್ಲಿ ಪ್ರವಾಸಿಗರು ತಂಗಲು ಸ್ಥಳವಿಲ್ಲದೇ ಪರದಾಡುವ ಸ್ಥಿತಿ ಜಿಲ್ಲೆಯಲ್ಲಿ ಎದುರಾಗಿದೆ. ಕೆಲವು ಸ್ಟೇಹೋಮ್‌ಗಳು ಅಧಿಕ ಮೊತ್ತದ ಶುಲ್ಕವನ್ನು ವಸೂಲಿ ಮಾಡುತ್ತಿವೆ. ಹಾಗಾಗಿ ಅಸೋ ಸಿಯೇಷನ್ ಸ್ಥಳೀಯ ಹೋಟೆಲ್‌ಗಳ ಸಹಭಾಗಿತ್ವದ ಮೇರೆಗೆ ಪ್ರವಾಸಿಗರನ್ನು ಅನುಕೂಲಕ್ಕೆ ಮುಂದಾಗು ತ್ತಿದ್ದು ಸಂಸ್ಥೆಯ ಸದಸ್ಯತ್ವ ಪಡೆದುಕೊಂಡವರಿಗೆ ರಿಯಾಯಿತಿ ದರದಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ವೈ.ಹೆಚ್.ಎ. ಸಂಸ್ಥೆಯ ರಾಜ್ಯಾಧ್ಯಕ್ಷ ಡಾ. ಎಲ್.ಕೆ.ರಾಜೀವ್ ಮಾತನಾಡಿ ನ್ಯಾಷನಲ್ ರಸ್ತೆಗೆ ಹೊಂದಿಕೊಂಡಿರುವ ನಿವೇಶನವು ಪ್ರವಾಸಿಗರಿಗೆ ಸೆಳೆಯುವುದರಲ್ಲಿ ಸಂಶಯವಿಲ್ಲ. ವಾರದ ರಜೆಗಳಲ್ಲಿ ಆಗಮಿಸುವವರಿಗೆ ಅಸೋಸಿಯೇಷನ್‌ನಿಂದ ಸಕಲ ಸೌಕರ್ಯದ ವ್ಯವಸ್ಥೆ ಕಲ್ಪಿಸಿದರೆ ಪ್ರವಾಸಿಗರು ಹಾಗೂ ಜಿಲ್ಲಾ ಘ ಟಕವು ಬೆಳವಣಿಗೆ ಹೊಂದಲು ಸಹಕಾರಿ ಎಂದರು.

ನೂತನ ಅಧ್ಯಕ್ಷ ಹೆಚ್.ಎಂ.ನಾರಾಯಣ ಮಾತನಾಡಿ ರಾಷ್ಟ್ರೀಯ ಹಾಗೂ ರಾಜ್ಯ ಅಸೋಸಿಯೇ ಷನ್ ಸಹಕಾರದಿಂದ ಜಿಲ್ಲಾ ಘಟಕಕ್ಕೆ ದೇಣಿಗೆ ಲಭಿಸಿದೆ. ಮುಂಬರುವ ದಿನಗಳಲ್ಲಿ ನೂತನ ಕಟ್ಟಡ ನಿರ್ಮಿ ಸುವ ಜೊತೆಗೆ ತರಬೇತಿ ಕೇಂದ್ರ, ಹೋಟೆಲ್, ತಂಗಲು ಕೊಠಡಿಗಳನ್ನು ನಿರ್ಮಿಸುವ ಜೊತೆಗೆ ನೂರಕ್ಕೆ ಹೆಚ್ಚು ಸದಸ್ಯತ್ವ ನೊಂದಾಯಿಸುವ ಗುರಿ ಹೊಂದಿದ್ದು ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

ಇದೇ ವೇಳೆ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್‌ಗೆ ನೂತನ ಅಧ್ಯಕ್ಷರಾಗಿ ಹೆಚ್.ಎಂ.ನಾರಾ ಯಣ, ಛೇರ್‌ಮ್ಯಾನ್ ಸಿ.ಆರ್.ಶಿವಾನಂದ, ಖಜಾಂಚಿ ಜಿ.ಎಸ್.ಚೇತನ್, ಕಾರ್ಯದರ್ಶಿ ಬಿ.ಹೆಚ್,ಅಲ್ತಾಫ್ ರೆಹಮಾನ್, ಸಂಘಟನಾ ಕಾರ್ಯದರ್ಶಿ ಎಂ.ಎಸ್.ನಟರಾಜ್, ನಿರ್ದೇಶಕರುಗಳಾಗಿ ಎಸ್.ಎನ್.ಸಚ್ಚಿದಾ ನಂದ, ಬಿ.ಎಂ.ಕುಮಾರ್, ಜಿ.ಅರವಿಂದ್, ಇ.ಎಂ.ಮಧುಸೂದನ್, ಕೆ.ವಿಶ್ವನಾಥ್ ಸೇರಿದಂತೆ 18 ಮಂದಿ ಯನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಸೋಸಿಯೇಷನ್ ರಾಜ್ಯ ಕಾರ್ಯದರ್ಶಿ ಡಾ.ಅರವಿಂದ ಗೋಪಾಲ್, ಛೇರ್ ಮನ್ ಎಸ್.ಎಸ್.ಪ್ರಸನ್ನ, ಮುಖ್ಯ ಸಂಚಾಲಕರಾದ ಡಿ.ಪಾರ್ಥನಾಥ್, ಹೆಚ್.ಎಸ್.ಮಂಜಪ್ಪ, ಮುಖಂಡ ರುಗಳಾದ ಡಾ.ಸಾರಗೋಡು ಕೌಶಿಕ್, ಹೆಚ್.ಆರ್.ಚಂದ್ರೇಗೌಡ, ಬಿ.ಎಸ್.ನಾಗೇಶ್‌ಕುಮಾರ್, ಸಿ.ಎಸ್. ಅಭಿನೇತ್ರಿ, ವಿಲಿಯಂ ಪೆರೇರಾ ಮತ್ತಿತರರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ