October 5, 2024

ಮೂಡಿಗೆರೆಯಲ್ಲಿ ಸಾಂಪ್ರದಾಯಿಕ ಹಸಿ ಹೂ ಕರಗ ಮಹೋತ್ಸವಕ್ಕೆ ಶ್ರದ್ದಾ ಭಕ್ತಿಯಿಂದ ಚಾಲನೆ ನೀಡಲಾಯಿತು.

ಮೂಡಿಗೆರೆ ಪಟ್ಟಣದ ಕೆಆರ್ ರಸ್ತೆಯಲ್ಲಿರುವ ಶ್ರೀಲೋಕದ ಮಾರಮ್ಮ ನವರ ಮಂಟಪದಲ್ಲಿ ಕರಗ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಕರಗ ಉತ್ಸವ ಪ್ರಯುಕ್ತ ಕರುಮಾತ್ತಮ್ಮ, ಮಧುರೆ ವೀರ, ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

7 ದಿನಗಳ ವ್ರತದಲ್ಲಿದ್ದ ಕುಮಾರರು ಅರಿಶಿನ ವಸ್ತ್ರದಿಂದ ದೇವಿಯ ಕಂಕಣ ಕಟ್ಟುವ ಮೂಲಕ 3 ದಿನಗಳ ಸಾಂಪ್ರದಾಯಿಕ ದೇವತಾ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಹಸಿ ಹೂ ಕರಗವನ್ನು ಹೊತ್ತು ಮೂಡಿಗೆರೆ ಪಟ್ಟಣದ ಪ್ರಮುಖ ಬೀದಿ ಮತ್ತು ಬಿಳಗುಳ, ಹಳೆಮೂಡಿಗೆರೆ, ಗಂಗನಮಕ್ಕಿ,ಲೋಕವಳ್ಳಿ,ಕುರುಕ್ಕ್ಮಕ್ಕಿ,ಛತ್ರಮೈಧಾನ, ಮಾರ್ಕೆಟ್ ರಸ್ತೆ ಸಂಚರಿಸಿ ಭಕ್ತಾದಿಗಳಿಂದ ಪೂಜೆ ಸ್ವೀಕರಿಸಲಾಗುವುದು.

ಭಾನುವಾರ ಮಧ್ಯಾಹ್ನ ದೇವಿಗೆ ವಿಶೇಷ ಪೂಜೆ ನಂತರ ಅಂಬಲಿ ಪಾನಕ ಪ್ರಸಾದ ವಿತರಿಸಿ, ರಾತ್ರಿ 8.30 ಕ್ಕೆ ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಅಧ್ಯಕ್ಷರಾದ ಮುನಿಸ್ವಾಮಿ, ಖಜಾಂಚಿ ವೇಲಾಯುಧ, ಪ್ರಧಾನ ಕಾರ್ಯದರ್ಶಿ ಶರವಣ, ಪ್ರಧಾನ ಅರ್ಚಕರಾದ ಶೇಖರ್, ರಾಜ, ಸಹಕಾರ್ಯದರ್ಶಿ ಗಳಾದ ಹರೀಶ್, ಮಹೇಶ್, ನಾಗರಾಜ್, ಮಣಿ, ಕುಮಾರ, ಉತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ