October 5, 2024

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಳೆದ ಬಾರಿ 18 ಸ್ಥಾನದಲ್ಲಿದ್ದ ಚಿಕ್ಕಮಗಳೂರು ಜಿಲ್ಲೆಯು ಈ ಬಾರಿ ಶೇ.86.15 ಫಲಿತಾಂಶದೊಂದಿಗೆ 10ನೇ ಸ್ಥಾನ ಗಳಿಸಿದೆ.

ಈ ಬಾರಿ ಪರೀಕ್ಷೆ ಬರೆದಿದ್ದ 12180 ವಿದ್ಯಾರ್ಥಿಗಳ ಪೈಕಿ 10577 ಮಂದಿ ತೇರ್ಗಡೆ ಹೊಂದಿದ್ದಾರೆ. ಒಟ್ಟು 6016 ಬಾಲಕರು ಪರೀಕ್ಷೆ ಬರೆದಿದ್ದು, 4996 ಮಂದಿ ಉತ್ತೀರ್ಣರಾಗುವ ಮೂಲಕ ಶೇ. 83.05 ಫಲಿತಾಂಶ ತಂದುಕೊಟ್ಟಿದ್ದಾರೆ. 6164 ಬಾಲಕಿಯರು ಪರೀಕ್ಷೆ ಬರೆದಿದ್ದು, 5591 ಮಂದಿ ತೇರ್ಗಡೆ ಹೊಂದುವ ಮೂಲಕ ಶೇ.90.70 ಫಲಿತಾಂಶ ತಂದುಕೊಟ್ಟಿದ್ದಾರೆ.

7362 ಗ್ರಾಮೀಣ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ. 3215 ನಗರ ಪ್ರದೇಶದ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಒಟ್ಟು 6116 ಸರ್ಕಾರಿ ಶಾಲೆಯ ಮಕ್ಕಳು ಪರೀಕ್ಷೆ ಬರೆದಿದ್ದು, 5316 ಮಕ್ಕಳು ತೇರ್ಗಡೆ ಹೊಂದಿ ಶೇ.86.92 ಫಲಿತಾಂಶ ದೊರಕಿಸಿದ್ದಾರೆ.

3393 ಅನುದಾನಿತ ಶಾಲಾ ಮಕ್ಕಳು ಪರೀಕ್ಷೆ ಬರೆದಿದ್ದು, 2669 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.78.66 ಫಲಿತಾಂಶ ಗಳಿಸಿದ್ದರೆ, ಅನುದಾನ ರಹಿತ ಖಾಸಗಿ ಶಾಲೆಗಳಿಂದ 2671 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 2592 ಮಂದಿ ತೇರ್ಗಡೆ ಹೊಂದಿ 97.04 ರಷ್ಟು ಫಲಿತಾಂಶ ಗಳಿಸಿಕೊಂಡಿವೆ.

ಹೆಚ್ಚು ಅಂಕಗಳಿಸಿದವರು:

ಚಿಕ್ಕಮಗಳೂರು ಸೇಂಟ್ ಮೇರಿಸ್ ಪ್ರೌಢಶಾಲೆಯ ನಮ್ರತಾ, ಉಪ್ಪಳ್ಳಿ ಮಾಡೆಲ್ ಇಂಗ್ಲೀಷ್ ಶಾಲೆಯ ಎಸ್.ಲಾವಣ್ಯ, ತರೀಕೆರೆಯ ಸಾಯಿ ಇಂಟರ್ ನ್ಯಾಷನಲ್ ಶಾಲೆಯ ಡಿ.ಮೋನಿಷಾ ಅವರು 619 ಅಂಕಗಳನ್ನು ಗಳಿಸಿದ್ದಾರೆ.

ಚಿಕ್ಕಮಗಳೂರು ದಂಟರಮಕ್ಕಿ ಸಂತ ಜೋಸೆಫರ ಬಾಲಕರ ಶಾಲೆಯ ನಿಯೋಲೋ ಕ್ರಿಸ್ಟಲ್ ಲೋಬೋ 618 ಮತ್ತು ಕೊಪ್ಪದ ಬಸರೀಕಟೆ ಸದ್ಗುರು ಪ್ರೌಢಶಾಲೆಯ ಹೆಚ್.ಸಿ.ಅಜಿತ್ 617 ಅಂಕಗಳನ್ನು ಗಳಿಸಿದ್ದಾರೆ.

ಶೇ.100 ಫಲಿತಾಂಶ:

ಜಿಲ್ಲೆಯ ಒಟ್ಟು 100 ಪ್ರೌಢಶಾಲೆಗಳು ಈ ಬಾರಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಗಳಿಸಿಕೊಂಡಿವೆ. ಈ ಪೈಕಿ 48 ಸರ್ಕಾರಿ ಶಾಲೆಗಳು, 9 ಅನುದಾನಿತ ಶಾಲೆಗಳು ಹಾಗು 43 ಅನುದಾನ ರಹಿತ ಶಾಲೆಗಳು ಸೇರಿವೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ