October 5, 2024

ಚಿಕ್ಕಮಗಳೂರು ಕಸ್ತೂರಿ ಬಾ ಸದನದ ಸಾಂತ್ವನ ಕೇಂದ್ರದಲ್ಲಿ ಕಳೆದ ವರ್ಷದ ಸೆಪ್ಟೆಂಬರ್ ಮಾಹೆಯಿಂದ ಪ್ರಸಕ್ತ ವರ್ಷದ ಜನವರಿ 31 ರವರೆಗೆ ಒಟ್ಟು 68 ಪ್ರಕರಣಗಳು ದಾಖಲಾಗಿದ್ದು 45 ಪ್ರಕರಣಗಳನ್ನು ರಾಜಿ ಮೂಲಕ ಸಂದಾನ ಮಾಡಲಾಗಿದೆ ಎಂದು ಕಸ್ತೂರಿ ಬಾ ಸದನದ ಕಾರ್ಯದರ್ಶಿ ಮೋಹಿನಿ ಸಿದ್ದೇಗೌಡ ತಿಳಿಸಿದರು.

ಚಿಕ್ಕಮಗಳೂರು  ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಮ್ಮ ಸಂಸ್ಥೆಯ ಆಶ್ರಯದಲ್ಲಿ ಸಾಂತ್ವನ ಕೇಂದ್ರ, ಸ್ವಾಧಾರ ಕೇಂದ್ರ ಮತ್ತು ಕುಟುಂಬ ಸಲಹಾ ಕೇಂದ್ರಗಳನ್ನು ನಡೆಸುತ್ತಿದ್ದು ಮಹಿಳಾ ದೌರ್ಜನ್ಯ, ವರದಕ್ಷಿಣೆ ಹಾಗೂ ಪತಿ-ಪತ್ನಿ ಸಮಸ್ಯೆಗಳನ್ನು ಸಮಾಲೋಚನೆ ಮೂಲಕ ಪರಿಹರಿಸಲಾಗುತ್ತಿದೆ ಎಂದು ಹೇಳಿದರು.

ಸಾಂತ್ವನ ಕೇಂದ್ರದಲ್ಲಿ ದಿನಾಂಕ 1.10.2023 ರಿಂದ 31.3.2024ರ ವರೆಗೆ ಈ ಕೇಂದ್ರದಲ್ಲಿ ಒಟ್ಟು 68 ವಿವಿಧ ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 56 ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. 12 ಪ್ರಕರಣಗಳು ಬಾಕಿ ಇವೆ ಎಂದರು.

ಕುಟುಂಬ ಕಲಹಕ್ಕೆ ಸಂಬಂಧಿಸಿದಂತೆ 52, ಅನೈತಿಕ ಸಂಬಂಧದ 4, ಬಹುಪತ್ನಿತ್ವ 2 ಸೇರಿದಂತೆ 68 ಪ್ರಕರಣಗಳ ಪೈಕಿ 45 ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಇತ್ಯರ್ಥಗೊಳಿಸಲಾಗಿದೆ. 1 ಪ್ರಕರಣವನ್ನು ನ್ಯಾಯಾಲಯಕ್ಕೆ ಕಳುಹಿಸಲಾಗಿದೆ. ಸಕಾರಣವಿಲ್ಲದ 10 ಪ್ರಕರಣಗಳನ್ನು ಕೈಬಿಡಲಾಗಿದ್ದು 12 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂದು ಹೇಳಿದರು.

ಸ್ವಾಧಾರ ಕೇಂದ್ರಕ್ಕೆ 58 ಪ್ರಕರಣಗಳು ನೊಂದಣಿ ಆಗಿದು. 48 ಪ್ರಕರಣಗಳಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಿ ವಾಪಸ್ ಕಳುಹಿಸಲಾಗಿದೆ. 8 ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 10 ಪ್ರಕರಣಗಳು ಬಾಕಿ ಇವೆ ಎಂದು ವಿವರಿಸಿದರು.

ಸ್ವಾಧಾರ ಕೇಂದ್ರದಲ್ಲಿ ದಾಖಲಾಗಿರುವ ಪ್ರಕರಣಗಳ ಪೈಕಿ ಕೌಟುಂಬಿಕ ಸಮಸ್ಯೆಯ 22 ಪ್ರಕರಣಗಳು, 2 ಪ್ರಕರಣ ನಿರಾಶ್ರಿತರು, 1 ಪೋಕ್ಸೋ ಪ್ರಕರಣ, 13 ಕಾಣೆಯಾದ ಪ್ರಕರಣ, 1 ವಿಚ್ಛೇದನ ಕೇಸು ದಾಖಲಾಗಿದ್ದು ಎಲ್ಲಾ ಕೇಸುಗಳನ್ನು ಇತ್ಯರ್ಥ ಪಡಿಸಿ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿಸಿದರು.

ಕಸ್ತೂರಿ ಬಾ ಸದನದ ಕೌಟುಂಬಿಕ ಸಲಹಾ ಕೇಂದ್ರದಲ್ಲಿ ಏಪ್ರಿಲ್ 2023 ರಿಂದ 2024ರ ಮಾರ್ಚ್ ಅಂತ್ಯದವರೆಗೆ 69 ಪ್ರಕರಣಗಳು ನೊಂದಣಿ ಆಗಿದ್ದು 27 ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. 22 ಪ್ರಕರಣಗಳು ಬಾಕಿ ಇವೆ ಎಂದರು.

ಈ ಕೇಂದ್ರದಲ್ಲಿ ವರದಕ್ಷಿಣೆ 2 ಪ್ರಕರಣಗಳು, ದಾಂಪತ್ಯ ವಿರಸದ 18 ಕೇಸುಗಳು, ಅತ್ತೆ, ಮಾವ, ನಾದಿನಿ ಕುಟುಂಬ ತೊಂದರೆಯ 7 ಪ್ರಕರಣಗಳು, ಬಹುಪತ್ನಿತ್ವದ 5 ಪ್ರಕರಣ, 1 ಪ್ರೇಮ ಪ್ರಕರಣ ಸೇರಿದಂತೆ 49 ಪ್ರಕರಣಗಳು ದಾಖಲಾಗಿದ್ದು 12 ಪ್ರಕರಣಗಳನ್ನು ರಾಜಿ ಮೂಲಕ ಸರಿಪಡಿಸಲಾಗಿದೆ. 3 ಪ್ರಕರಣಗಳನ್ನು ನ್ಯಾಯಾಲಯಕ್ಕೆ ಕಳುಹಿಸಲಾಗಿದೆ. 22 ಪ್ರಕರಣಗಳು ಬಾಕಿ ಇವೆ ಎಂದು ಮಾಹಿತಿ ನೀಡಿದರು.

ತಮ್ಮ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ 3 ಕೇಂದ್ರಗಳಲ್ಲಿ ಕೌಟುಂಬಿಕ ತೊಂದರೆ ಸೇರಿದಂತೆ ಅನೇಕ ರೀತಿಯ ಶೋಷಣೆ ಇತ್ಯಾದಿಗಳ ತೊಂದರೆ ಆದ ಮಹಿಳೆಯರಿಗೆ ರಕ್ಷಣೆ ಮತ್ತು ಪರಿಹಾರ ಒದಗಿಸುತ್ತಿದ್ದು ಸ್ವಾಧಾರ ಸಂಸ್ಥೆಗೆ ಸರ್ಕಾರದಿಂದ ಬರಬೇಕಾದ 17 ಲಕ್ಷ ರೂ ಬಾಕಿ ಇರುವುದಾಗಿ ತಿಳಿಸಿದರು.

ತಮ್ಮ ಸಂಸ್ಥೆಯೊಂದಿಗೆ ಪೋಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ  ಸಹಾಯ ಮಾಡುತ್ತಿದ್ದು ಮುಂದೆಯೂ ಹೆಚ್ಚಿನ ನೆರವು ನೀಡುವಂತೆ ಮನವಿ ಮಾಡಿದರು.

ಠಿ ಪತ್ರಿಕಾಗೋಷ್ಠಿಯಲ್ಲಿ ಕಸ್ತೂರಿ ಬಾ ಸದನ ಅಧ್ಯಕ್ಷೆ ಯಮುನ ಚನ್ನಬಸಪ್ಪ ಶೆಟ್ಟಿ, ಸದಸ್ಯರುಗಳಾದ ಪಾರ್ವತಿ ಬಸವರಾಜ್, ಗೀತಾ ಚಂದ್ರಶೇಖರ್, ವಕೀಲರಾದ ಅರುಂಧತಿ ಮತ್ತಿತರರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ