October 5, 2024

ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ 19 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡನೆ ಮತ್ತು ಸ್ವಾಗತ ಸಮಿತಿ ವಿಸರ್ಜನೆಯ ಸಭೆ ಬುಧವಾರ ಮೂಡಿಗೆರೆ ಜೇಸಿ ಭವನದಲ್ಲಿ ನೆರವೇರಿತು.

ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಬಿ.ಎಸ್.ಜಯರಾಂ ರವರ ನೇತ್ರತ್ವದಲ್ಲಿ ಸಭೆ ನಡೆಯಿತು. ಸ್ವಾಗತ ಸಮಿತಿಯ ಪ್ರದಾನ ಸಂಚಾಲಕರಾದ ಮಗ್ಗಲಮಕ್ಕಿಗಣೇಶ್ ಪ್ರಸ್ತಾವಿಕ ನುಡಿಯನ್ನು ನುಡಿದರು.

ಕೋಶದ್ಯಕ್ಷರಾದ ಜೆ.ಎಸ್.ರಘು ಸಮ್ಮೇಳನದ ಲೆಕ್ಕಪತ್ರ ಮಂಡನೆ ಮಾಡಿ ಸಭೆಯ ಅನುಮೊದನೆ ಪಡೆದರು.

ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಿ.ಎಸ್.ಜಯರಾಂ ರವರು ಮಾತನಾಡಿ ಜಿಲ್ಲಾ ಸಮ್ಮೇಳನವನ್ನು ಮೂಡಿಗೆರೆ ಯಶಸ್ವಿಯಾಗಿ ನೆರವೇರಿಸಲಾಗಿದ್ದು, ಜಿಲ್ಲೆಯ ಸಾಹಿತ್ಯ ಅಭಿಮಾನಿಗಳು ಸಂಭ್ರಮದಿಂದ ಪಾಲ್ಗೊಂಡಿದ್ದರು. ಸಮ್ಮೇಳನವನ್ನು ಯಶಸ್ವಿಯಾಗಿ ನೆರವೇರಿಸಲು ಮೂಡಿಗೆರೆ ತಾಲ್ಲೂಕಿನ ಅನೇಕ ಮಹನೀಯರು ಸಹಕಾರ ನೀಡಿರುತ್ತಾರೆ ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸ್ವಾಗತ ಸಮಿತಿಯ ಪ್ರದಾನ ಕಾರ್ಯದರ್ಶಿ ಕಸಾಪ ಜಿಲ್ಲಾ ಅಧ್ಯಕ್ಷರಾದ ಸೂರಿ ಶ್ರೀನಿವಾಸ್ ಮಾತನಾಡಿ ; ಜಿಲ್ಲೆಯಲ್ಲಿ  ಸಾಹಿತ್ಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಕೊಂಡೊಯ್ಯಲಾಗುತ್ತಿದೆ. ಮಹಿಳಾ ಘಟಕಗಳನ್ನು ಪ್ರಾರಂಭಿಸಿ ಮಹಿಳೆಯರು ಸಾಹಿತ್ಯ ಚಟುವಟಿಕೆಗಳಲ್ಲಿ ಆಸಕ್ತಿದಾಯಕವಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಕಸಾಪ ತಾಲೂಕು ಅದ್ಯಕ್ಷರಾದ ಶಾಂತಕುಮಾರ್. ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಕೆ. ಮಂಚೆಗೌಡ. ದೀಪಕ್ ದೊಡ್ಡಯ್ಯ ಜಿಲ್ಲಾ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್. ಜಿಲ್ಲಾ ಸಂಚಾಲಕರಾದ ವಿಶಾಲನಾಗರಾಜ್. ಜಿಲ್ಲಾ ಸಂಘಟನ ಕಾರ್ಯದರ್ಶಿ ಬಕ್ಕಿಮಂಜು. ತಾಲೂಕ್ ಕಸಾಪ ಕಾರ್ಯದರ್ಶಿ. ಪ್ರಕಾಶ್.ಅರ್. ಬಾಳೂರು ಹೊಬಳಿ ಅದ್ಯಕ್ಷರಾದ ರವಿಪಟೇಲ್. ಕಸಬಾ ಹೊಬಳಿ ಅದ್ಯಕ್ಷರಾದ ನಾಗರಾಜ್.ಎಂ.ಎಸ್. ತಾಲೂಕು ಮಹಿಳಾ ಅದ್ಯಕ್ಷೆ, ಅನಿತಜಗದೀಪ್. ಬ್ರಿಜೇಶ್ ಕಡಿದಾಳ್.. ಹಾ.ಬಾ.ನಾಗೇಶ್. ಮದೀಶ್. ಹಸೈನಾರ್ ಬಿಳಗುಳ. ಬಾನುಮತಿ. ಚಂದ್ರಾವತಿ. ಹೊರಟ್ಟಿರಘು. ಹರಿಶ್.ಟಿ. ಅಂಬಾವತಿ. ಹರಿಣಾಕ್ಷಿ ಮುಂತಾದವರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ