October 5, 2024

ಮೋದಿಯ ಮೋಡಿ ಮಾತಿಗೆ ಮಾರು ಹೋಗಿದ್ದ ಜನರಿಗೆ ಮೋದಿ ಸರಕಾರ ಕಾರ್ಪೋರೇಟ್ ಪರವಾದ ಡೋಂಗಿ ಸರಕಾರವೆಂದು ಜನರಿಗೆ ಅರ್ಥವಾಗಿದೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.

ಅವರು ಮಂಗಳವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 10 ವರ್ಷದಲ್ಲಿ ಅದಾನಿ, ಅಂಬಾನಿಯಂತಹ ಕಾರ್ಪೋರೇಟ್ ಮಾಲೀಕರ ಪರವಾಗಿ ಕೆಲಸ ಮಾಡಿದ ಮೋದಿ ಸರಕಾರ ಜನಪರವಾದ ಒಂದೇ ಒಂದು ಯೋಜನೆ ರೂಪಿಸಿಲ್ಲ. ವರ್ಷದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆಂದವರು ವಿಮಾನ, ರೈಲ್ವೆ ಸೇರಿದಂತೆ ಪಂಚರತ್ನವನ್ನು ಕಾರ್ಪೋರೇಟ್ ಕಂಪನಿಗೆ ಮಾರಾಟ ಮಾಡಿ, ಇರುವ ಉದ್ಯೋಗವನ್ನೇ ಕಿತ್ತುಕೊಂಡಿದ್ದಾರೆ. ಉಜ್ವಲ ಯೋಜನೆಯಲ್ಲಿ ಉಚಿತ ಗ್ಯಾಸ್ ನೀಡಲಾಗಿದೆ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಆದರೆ ರೀಫಿಲ್ ತುಂಬಲು ಸಾಧ್ಯವಾಗದೇ ಗ್ಯಾಸ್ ಸಿಲೆಂಡರ್ ಮೂಲೆಗೆ ಎಸೆದಿರುವುದು ಇವರ ಕಣ್ಣಿಗೆ ಕಾಣಿಸಿಲ್ಲವೇ?

ಎಸ್.ಎಂ.ಕೃಷ್ಣ ಜಾರಿಗೊಳಿಸಿದ ಯಶಸ್ವಿನಿ ಯೋಜನೆಯನ್ನೇ ಬದಲಾಯಿಸಿ ಆಯುಷ್ಮಾನ್ ಭಾರತ ಮಾಡಿದ್ದಾರೆ. ಅದನ್ನು ಪಡೆಯಬೇಕೆಂದರೆ ಪರದಾಡುವಂತೆ ಮಾಡಿದ್ದಾರೆ. ಹಾಗಾದರೆ ಇವರ ಅಭಿವೃದ್ಧಿ ಸಾಧನೆಯಾದರೂ ಏನೆಂದು ಪ್ರಶ್ನಿಸಿದರು. ಸುಳ್ಳು ಜಾಹಿರಾತು ನೀಡುವ ಮೂಲಕ ಮತ್ತೊಮ್ಮೆ ಜನರನ್ನು ದಿಕ್ಕು ತಪ್ಪಿಸಲು ಸಾಧ್ಯವಿಲ್ಲ. 40 ಪರ್ಸಂಟೇಜ್ ಎಂದು ಬಿರುದು ಪಡೆದಿದ್ದು ಬಿಜೆಪಿ. ಏನೂ ಅಭಿವೃಧ್ಧಿ ಮಾಡದೇ ಈಗ ಬರೀ ಟ್ರೈಲರ್ ದೇಕಾ ಹೆ. ಪಿಚ್ಚರ್ ಅಬಿ ಬಾಕಿ ಹೆ ಎಂದು ಹೇಳುತ್ತಿದ್ದಾರೆ. ಈಗಾಗಲೇ ಟ್ರೈಲರ್ ನೀಡಿಯೇ ಸಾಕಾಗಿದೆ ಇನ್ನು ಪಿಚ್ಚರ್ ಬಿಡುಗಡೆಯಾದರೆ ದೇಶದ ಕಥೆಯೇ ಮುಗಿದಂತೆ.

ನೇಹಾ ಕೊಲೆ ಪ್ರಕರಣದ ಹೆಸರಿನಲ್ಲಿ ನೀಚ ರಾಜಕಾರಣ ಮಾಡಲು ಮುಂದಾಗಿದ್ದಾರೆ. ಮುರುಳಿ ಮನೋಹರ್ ಮಗಳು ಹಾಗೂ ಅಡ್ವಾನಿ ಮಗಳು ಮುಸ್ಲಿಂ ಪುರುಷರನ್ನು ಮದುವೆಯಾಗಿದ್ದು ಗೊತ್ತಿಲ್ಲವೇ? ಕೇವಲ ಮತಕ್ಕಾಗಿ ಜಾತಿ, ಧರ್ಮದ ನಡುವೆ ವಿಷ ಬೀಜ ಬಿತ್ತುವುದೇ ಇವರ ಸಾಧನೆಯಾಗಿದೆ. ಈಗ ಹಿಂದೂಗಳ ಮಾಂಗಲ್ಯ ಕಿತ್ತು ಮುಸ್ಲಿಂಮರಿಗೆ ಕೊಡುತ್ತಾರೆಂದು ಅಪ ಪ್ರಚಾರ ಮಾಡುತ್ತಾ ಪ್ರಚೋಧನಕಾರಿ ಭಾಷಣ ಮಾಡುತ್ತಿದ್ದಾರೆ. ಓರ್ವ ಮಹಿಳೆಯಿಂದ ಮಾಂಗಲ್ಯ ಕಿತ್ತು ಕೊಡಲು ಸಾಧ್ಯವೇ ಎಂಬ ಸಾಮಾನ್ಯ ಪರಿಜ್ಞಾನ ಮೋದಿ ಅವರಿಗೆ ಇಲ್ಲದಂತಾಗಿದೆ ಎಂದು ಟೀಕಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ