October 5, 2024

ಸಂವಿಧಾನ ರಚಿಸಿದ ಭಾರತ ರತ್ನ ಅಂಬೇಡ್ಕರ್ ರವರನ್ನೇ ಲೋಕಸಭೆಗೆ ಕಾಲಿಡಲು ಬಿಡದಂತೆ ಅವಮಾನಿಸಿದ ಕಾಂಗ್ರೆಸ್ಸಿಗೆ ಸಾಯುವ ತನಕ ದಲಿತರು ಮತ ಹಾಕಬಾರದು ಎಂದು ಮಾಜಿ ಸಚಿವ, ಸಂವಿಧಾನ ತಜ್ಞ, ಎನ್. ಮಹೇಶ್ ತಿಳಿಸಿದರು.

ಅವರು ಮೂಡಿಗೆರೆ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಹಮ್ಮಿಕೊಂಡಿದ್ದ ಸಂವಿಧಾನ ಮತ್ತು ಡಾಕ್ಟರ್ ಬಿ.ಆರ್.  ಅಂಬೇಡ್ಕರ್ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲೇ ಕಾಂಗ್ರೆಸ್ ಪಕ್ಷ ವಯಸ್ಕ ಮತದಾನವನ್ನು ವಿರೋಧಿಸಿದರು ಕೂಡ ಎಲ್ಲಾ ಜಾತಿ ಮತ ಲಿಂಗ ಭೇದ ರಕ್ತಪಾತ ಇಲ್ಲದೆ ಎಲ್ಲರು ಮತದಾನ ಅಳವಡಿಸಬೇಕು ಎಂದು ಬ್ರಿಟಿಷರರಿಗೆ ಆಗ್ರಹಪಡಿಸಿದ ನಂತರ ಸಂವಿಧಾನದಲ್ಲಿ ಲಿಖಿತವಾಗಿ ಬರೆದು ಕಾರಣದಿಂದಲೇ ಇಂದು ದೇಶದಲ್ಲಿ ಅಸ್ಪೃಶ್ಯತೆ ಕಿತ್ತೊಗೆಯಲು ಕಾರಣವಾಯಿತು. ಇವರು ಎಲ್ಲಾ ಮಹಿಳೆಯರಿಗೂ ಸಮಾನತೆ ಇರಬೇಕು ಎಂದು ಬಿಲ್ ಮಂಡನೆ ಮಾಡಿದರೆ ಇದನ್ನು ವಿರೋಧಿಸಿ  ಅಲ್ಪಸಂಖ್ಯಾತ ಮಹಿಳೆಯರು ಶೋಷಣೆಗೆ ಒಳಗಾಗಲು ಕಾರಣರಾದರು.

ಕಾಂಗ್ರೆಸಿಗರ ದೇಶವಿರೋಧಿ ನೀತಿಯನ್ನು ವಿರೋಧಿಸಿದ್ದರಿಂದಲೇ  ಗಣರಾಜ್ಯದ ನಂತರ ನಡೆದ ಪ್ರಥಮ ಚುನಾವಣೆಯಲ್ಲಿ ಸ್ವತಃ ನೆಹರು ರವರೆ   ಚುನಾವಣೆಯಲ್ಲಿ ಎರಡು ಬಾರಿ ಅಂಬೇಡ್ಕರ್ ಅವರನ್ನು ಸೋಲಿಸಿದರು. ಲೋಕಸಭೆಗೆ ಕಾಲಿಡದಂತೆ ತಡೆದರು. ಅಲ್ಲದೆ ಬಾಬಾಸಾಹೇಬರು ತೀರಿಕೊಂಡಾಗ ದೆಹಲಿಯಲ್ಲಿ ಅಂತಿಮ ಸಂಸ್ಕಾರಕ್ಕೆ ಒಂದು ಅಡಿ ಜಾಗವನ್ನು ನೀಡದೆ ಮುಂಬೈಗೆ  ಸಾಗಹಾಕಿ, ಅಲ್ಲಿಂದ ಬಾಂದ್ರ ಸಮುದ್ರ ತೀರದಲ್ಲಿ ಅನಾಥ ಶವದಂತೆ ಸಂಸ್ಕಾರ ಮಾಡಲು ಕಾರಣರಾದರು.  ನಂತರ ಅವರ ಎಲ್ಲಾ ಸಿದ್ದಾಂತಗಳನ್ನು ತುರ್ತು ಪರಿಸ್ಥಿತಿ ತಂದು ತಿಲಾಂಜಲಿ ಇಟ್ಟ ಕಾಂಗ್ರೇಸಿಗರು ಇಂದು ದಲಿತರ ಮತಕಾಗಿ ದೇಶದಲ್ಲಿ ಸಂವಿಧಾನ ಬದಲಾವಣೆ ಮಾಡಲಾಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.

ಆದರೆ ಇಂದು ಮಾನ್ಯ ಮೋದಿಯವರೆ ಭಾರತದಲ್ಲಿ ಅಂಬೇಡ್ಕರ್ ರವರೆ ಮತ್ತೊಮ್ಮೆ ಹುಟ್ಟಿ ಬಂದರು ಸಂವಿಧಾನವನ್ನು ಬದಲಿಸಲು ಸಾಧ್ಯವಿಲ್ಲ  ಎಂದಿದ್ದಾರೆ ಅಲ್ಲದೆ ಅಂಬೇಡ್ಕರ್ ರವರು ಹುಟ್ಟಿದ, ಪರಿನಿರ್ವಾಣ ಹೊಂದಿದ, ಓದಿದ, ಬೌಧ ಧರ್ಮಕ್ಕೆ ದೀಕ್ಷೆ ಪಡೆದ ಮತ್ತು ಅಂತಿಮ ಸಂಸ್ಕಾರ ಮಾಡಿದ ಐದು ಪಂಚತೀರ್ಥಗಳನ್ನು ಅಭಿವೃದ್ಧಿ ಮಾಡಿ ದಲಿತರ  ಹಿರಿಮೆಯನ್ನು ಹೆಚ್ಚಿಸಿದ್ದಾರೆ.

ಸ್ವಚ್ಛ ಭಾರತ್ ಹೆಸರಲ್ಲಿ 10 ಕೋಟಿ ಶೌಚಾಲಯ, ಉಜ್ವಲ ಗ್ಯಾಸ್ ನೀಡಿದ್ದು ಇದು ಅತಿ ಹೆಚ್ಚು ದಲಿತ ಮಹಿಳೆಯರಿಗೆ ಉಪಯೋಗವಾಗಿದೆ.

ಪ್ರಪಂಚದ ಪ್ರಜಾಪ್ರಭುತ್ವದ ತಾಯಿ ಭಾರತವಾಗಿರಲು ಅಂಬೇಡ್ಕರ್ ರವರೆ ಕಾರಣ ಎಂದಿದ್ದಾರೆ. ಅಂತಹ ಸಂವಿದಾನವನ್ನು ಉಳಿಸಲು ದಲಿತರು ಅಂಬೆಡ್ಕರ್ ಜಯಂತಿಯಂದು ನಾವು ಸಾಯುವ ತನಕ ಕಾಂಗ್ರೆಸ್‌ ಮತ ಹಾಕುವುದಿಲ್ಲ ಎಂದು ಶಪತ ಮಾಡುವಂತೆ ಕರೆ ನೀಡಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ