October 5, 2024

ಅನಂತ್ ಎಂ.ಎಸ್.

ಧರ್ಮ, ದೇವರು, ರಾಷ್ಟ್ರೀಯತೆ, ದೇಶಪ್ರೇಮಿಗಳ ಪಕ್ಷ ಎನ್ನುತ್ತಾ ದೇಶದ ಜನರನ್ನು ಭಾವನಾತ್ಮಕವಾಗಿ ಮರಳು ಮಾಡುತ್ತಿರುವ ಬಿಜೆಪಿ ಪಕ್ಷ ಎಂತಹ ಭ್ರಷ್ಟ ರಾಜಕೀಯ ಪಕ್ಷ ಎಂಬುದು ಚುನಾವಣಾ ಬಾಂಡ್ ಹಗರಣದಿಂದ ಬಟಾಬಯಲಾಗಿದೆ. ಇಡಿ, ಐಟಿಯಂತಹ ಸ್ವಾಯತ್ತ ಸಂಸ್ಥೆಗಳ ಮೂಲಕ ಬೃಹತ್ ಗುತ್ತಿಗೆದಾರರು, ಉದ್ಯಮಿಗಳು, ಕಾರ್ಪೋರೆಟ್ ಕಂಪೆನಿಗಳನ್ನು ಬೆದರಿಸಿ ದೇಣಿಗೆ ಹೆಸರಿನಲ್ಲಿ ಹಣ ಸುಲಿಗೆ ಮಾಡುವ ಮೂಲಕ ಬಿಜೆಪಿ ಪಕ್ಷ ಎಂತಹ ಲೂಟಿಕೋರರ ಪಕ್ಷ ಎಂಬುದು ಸಾಭೀತಾಗಿದೆ. ಚುನಾವಣಾ ಬಾಂಡ್ ಹಗರಣದಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲಾಗುವ ಆತಂಕದಿಂದ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ವಿರುದ್ಧ ಅಪಪ್ರಚಾರಕ್ಕಿಳಿದಿದ್ದಾರ ಎಂದು ಚಿಕ್ಕಮಗಳೂರು  ಜಿ.ಪಂ ಮಾಜಿ ಸದಸ್ಯ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ಎಸ್.ಅನಂತ್ ಟೀಕಿಸಿದ್ದಾರೆ.

ಈ ಸಂಬಂಧ  ಪತ್ರಿಕಾ ಹೇಳಿಕೆ ನೀಡಿರುವ ಅವರು, ಚುನಾವಣಾ ಬಾಂಡ್ ಮೂಲಕ ಬಿಜೆಪಿ ಅತೀ ಹೆಚ್ಚು ದೇಣಿಗೆ ಬಂದಿರುವುದನ್ನು ಸಹಿಸಿಕೊಳ್ಳಲಾಗದೇ ಕಾಂಗ್ರೆಸ್ ಪಕ್ಷದ ಮುಖಂಡರು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ರಘು ಜನ್ನಾಪುರ ಆರೋಪಿಸಿದ್ದಾರೆ. ಈ ಆರೋಪ ಹಾಸ್ಯಾಸ್ಪದವಾಗಿದ್ದು, ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ಪಕ್ಷ 8ಸಾವಿರ ಕೋಟಿಗೂ ಹೆಚ್ಚು ಹಣವನ್ನು ಸಂಗ್ರಹಿಸಿದೆ. ರಾಜಕೀಯ ಪಕ್ಷಗಳಿಗೆ ದಾನಿಗಳು ದೇಣಿಗೆ ನೀಡುವುದು ಸಾಮಾನ್ಯ, ಆದರೆ ಬಿಜೆಪಿ ಪಕ್ಷದವರು ಇಂತಹ ದೇಣಿಗೆ ಹಣವನ್ನು ವಾಮಮಾರ್ಗದ ಮೂಲಕ ಪಡೆದಿದ್ದಾರೆ. ಗುತ್ತಿಗೆದಾರರು, ಉದ್ಯಮಿಗಳು, ಕಂಪೆನಿಗಳನ್ನು ಬ್ಲಾಕ್ ಮೇಲ್ ಮಾಡಿ ಕೋಟ್ಯಂತರ ರೂ. ಹಣವನ್ನು ಬಿಜೆಪಿ ಪಡೆದುಕೊಂಡಿದೆ. ಹಲವಾರು ಆರೋಪಗಳನ್ನು ಹೊತ್ತಿರುವ ಗುತ್ತಿಗೆದಾರರು, ಕಂಪೆನಿಗಳ ಮೇಲೆ ಇಡಿ, ಐಟಿಗೆ ದೂರು ನೀಡಿ ನಂತರ ಈ ಸಂಸ್ಥೆಗಳ ಮೂಲಕ ದಾಳಿ ಮಾಡಿಸಿ ಬೆದರಿಸಲಾಗಿದೆ. ಈ ಬೆದರಿಕೆಗೆ ಮಣಿದ ಗುತ್ತಿಗೆದಾರರು, ಉದ್ಯಮಿಗಳು, ಕಂಪೆನಿಗಳು ಬಿಜೆಪಿಯವರು ಕೋಟ್ಯಂತರ ರೂ. ಹಣವನ್ನು ನೀಡಿದ್ದಾರೆ. ಹಣ ನೀಡಿದ ನಂತರ ಈ ಗುತ್ತಿಗೆದಾರರು, ಉದ್ಯಮಿಗಳು, ಕಂಪೆನಿಗಳ ಮೇಲಿನ ದೂರುಗಳನ್ನು ರದ್ದು ಮಾಡಿ ಕ್ಲೀನ್‌ಚಿಟ್ ನೀಡಲಾಗಿದ್ದು, ಬಿಜೆಪಿ ವಾಮಮಾರ್ಗದ ಮೂಲಕ ಕೋಟ್ಯಂತರ ರೂ. ಹಣ ಸಂಗ್ರಹಿಸಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಪ್ರಶ್ನಿಸಿದ್ದಾರೆ.

ಚುನಾವಣಾ ಬಾಂಡ್ ಹಗರಣವನ್ನು ಬಟಾಬಯಲು ಮಾಡಿದ್ದು ಕಾಂಗ್ರೆಸ್ ಅಲ್ಲ, ಸುಪ್ರೀಂಕೋರ್ಟ್ ಈ ಹಗರಣವನ್ನು ಬೆಳಕಿಗೆ ತಂದಿದೆ ಎಂಬುದು ಬಿಜೆಪಿಯವರಿಗೆ ತಿಳಿಯದಿರುವುದನ್ನು ನೋಡಿದರೇ ಬಿಜೆಪಿ ಪಕ್ಷದವರ ಅಜ್ಞಾನ, ಬೌದ್ಧಿಕ ದಿವಾಳಿತನಕ್ಕೆ ಕರುಣೆ ಬರುತ್ತಿದೆ ಎಂದು ಲೇವಡಿ ಮಾಡಿರುವ ಅವರು, ವಿರೋಧ ಪಕ್ಷಗಳ ನಾಯಕರು ಭ್ರಷ್ಟಾಚಾರ ಮಾಡಿದ್ದಾರೆಂದು ಆರೋಪಿಸಿ ಇಡಿ, ಐಟಿ ಮೂಲಕ ದಾಳಿ ಮಾಡಿಸುತ್ತಿದ್ದ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ, ಆರೋಪಿಗಳು ಬಿಜೆಪಿ ಸೇರುತ್ತಿದ್ದಂತೆ ಪ್ರಮಾಣಿಕರೆಂದು ಸರ್ಟಿಫಿಕೆಟ್ ನೀಡುತ್ತಿದ್ದಾರೆ. ದಿಲ್ಲಿ ಸಿಎಂ ಅರವಿಂದ್‌ಕೇಜ್ರಿವಾಲ್ ಅವರು ಬಿಜೆಪಿಯ ದಾಳಿಗೆ ಬಗ್ಗದ ಕಾರಣಕ್ಕೆ ಭ್ರಷ್ಟಾಚಾರದ ಆರೋಪ ಹೊರಿಸಿ ಜೈಲಿನಲ್ಲಿಡಲಾಗಿದೆ. ಇದೇ ಪ್ರಕರಣದಲ್ಲಿ ದಿಲ್ಲಿ ಸರಕಾರದ ಸಚಿವ ಸಂಜಯ್‌ಸಿಂಗ್ ಅವರನ್ನು ಜೈಲಿಗೆ ಅಟ್ಟಿದ್ದ ಮೋದಿ ಸರಕಾರ ಆರೋಪವನ್ನು ಸಾಭೀತು ಮಾಡುವಲ್ಲಿ ವಿಫಲವಾಗಿದೆ. ಸಂಜಯ್‌ಸಿಂಗ್ ಮೇಲಿನ ಆರೋಪ ಸಂಬಂಧ ನ್ಯಾಯಾಲಯ ಕೇಳಿದ ಪ್ರಶ್ನೆಗಳಿಗೆ ಇಡಿ ಅಧಿಕಾರಿಗಳು ಉತ್ತರ ನೀಡಲಾಗದೇ ತಡಬಡಿಸಿದ್ದಾರೆ. ನ್ಯಾಯಾಲಯ ಸಂಜಯ್‌ಸಿಂಗ್ ಅವರಿಗೆ ಜಾಮೀನು ನೀಡಿದ್ದು, ಈ ಘಟನೆಗಳು ಬಿಜೆಪಿಯವರ ರಾಜಕೀಯ ಧ್ವೇಷದ ಭಾಗ ಎಂಬುದು ಸಾಭೀತಾಗಿದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕರು 60ವರ್ಷಗಳಲ್ಲಿ ದೇಶಕ್ಕಾಗಿ ಏನನ್ನೂ ಮಾಡಿಲ್ಲ, ವ್ಯಾಪಕ ಭ್ರಷ್ಟಾಷಾರ ನಡೆಸಿದ್ದಾರೆ, ಸ್ವಿಸ್ ಬ್ಯಾಂಕ್‌ನಲ್ಲಿ ಇರುವ ಹಣ ಕಾಂಗ್ರೆಸ್‌ನವರಿಗೆ ಸೇರಿದ್ದು ಎನ್ನುವ ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಸೇರಿದಂತೆ ಬಿಜೆಪಿಯ ರಾಷ್ಟ್ರ, ರಾಜ್ಯ ಮಟ್ಟದ ನಾಯಕರು ಕಾಂಗ್ರೆಸ್ ಪಕ್ಷದ ನಾಯಕರ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ಇದುವರೆಗೂ ಸಾಭೀತು ಮಾಡಿಲ್ಲ. ಸ್ವಿಸ್ ಬ್ಯಾಂಕ್‌ನಲ್ಲಿರುವ ಹಣವನ್ನು ತಂದು ದೇಶದ ಜನರ ಖಾತೆ ತಲಾ 15ಲಕ್ಷ ಹಾಕುತ್ತೇವೆಂದು ದೇಶದ ಜನರಿಗೆ ಭರವಸೆ ನೀಡಿದ್ದ ಪ್ರಧಾನಿ ಮೋದಿ ಸದ್ಯ ಸ್ವಿಸ್ ಬ್ಯಾಂಕ್‌ನ ಹಣದ ಬಗ್ಗೆ ಮಾತನಾಡದಿರುವುದನ್ನು ಗಮನಿಸಿದರೇ ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣವೆಲ್ಲ ಬಿಜೆಪಿ ನಾಯಕರಿದೇ ಸೇರಿದ್ದೆಂದು ಶಂಕೆ ಮೂಡುತ್ತಿದೆ ಎಂದು ಆರೋಪಿಸಿದ ಅವರು, ಮೋದಿ ಸರಕಾರ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ದೇಶದ ಯುವಕರಿಗೆ 2ಕೋಟಿ ಉದ್ಯೋಗ ನಿಡುವುದಾಗಿ ಭರವಸೆ ನೀಡಿದ್ದರು. 10 ವರ್ಷಗಳ ಆಡಳಿತದಲ್ಲಿ ಮೋದಿ 2ಸಾವಿರ ಉದ್ಯೋಗಗಳನ್ನೂ ಸೃಷ್ಟಿ ಮಾಡಿಲ್ಲ. ಪರಿಣಾಮ ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ.80ರಷ್ಟಿದೆ. ಉದ್ಯೋಗ ಕೇಳಿದ ಯುವಜನರಿಗೆ ಪಕೋಡ ಮಾರಾಟ ಮಾಡುವಂತೆ ಹೇಳಿದ ಪುಣ್ಯಾತ್ಮ ಪ್ರಧಾನಿ ಮೋದಿ ಎಂದು ಅನಂತ್ ಟೀಕಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೂ ಈ ಬಾರಿ ಬಿಜೆಪಿಗೆ ಹೀನಾಯ ಸೋಲಾಗಲಿದೆ. ಇದನ್ನು ಮನಗಂಡಿರುವ ಬಿಜೆಪಿ ನಾಯಕರು ಸರಳ, ಸಜ್ಜನ, ಅಜಾತಶತೃ, ಪ್ರಾಮಾಣಿಕ ವ್ಯಕ್ತಿತ್ವದವರು ಎಂದು ಹೆಸರು ಮಾಡಿರುವ ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ಆರೋಪ ಹೊರಿಸಲು ಯಾವ ಅಸ್ತ್ರವೂ ಸಿಗದ ಕಾರಣಕ್ಕೆ ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕೋಟಶ್ರೀನಿವಾಸ್ ಪೂಜಾರಿ ಬಡವರು, ಸರಳ ಸಜ್ಜನ ಎನ್ನುತ್ತಿದ್ದ ಬಿಜೆಪಿ ನಾಯಕರ ಬಾಯಿಗೆ ಈಗ ಬೀಗ ಬಿದ್ದಿದೆ. ಕೋಟ ಶ್ರೀನಿವಾಸ ಪೂಜಾರಿ ಅವರು ನಾಮಪತ್ರದೊಂದಿಗೆ ಆಸ್ತಿವಿವರ ಸಲ್ಲಿಸಿದ್ದು, ಈ ಅಫಿಡವಿಟ್‌ನಲ್ಲಿ ಕೋಟ ಶ್ರೀನಿವಾಸ ಪೂಜಾರಿ ಎಷ್ಟು ಬಡವರು ಎಂಬುದು ಜಗಜ್ಜಾಹೀರಾಗಿದೆ. ಸುಮಾರು 3ಕೋಟಿಗೂ ಹೆಚ್ಚು ಹಣ, ಚಿನ್ನಾಭರಣ, ಬೆಲೆ ಬಾಳುವ ಮನೆ, ತೋಟ ಹೊಂದಿರುವ ಕೋಟ ಶ್ರೀನಿವಾಸ ಪೂಜಾರಿ ಕೋಟ್ಯಾಂತರ ಆಸ್ತಿ ಹೊಂದಿರುವ ಬಡವ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಮುಂದೆ ಕೋಟ ಶ್ರೀನಿವಾಸ್ ಪೂಜಾರಿ ಸೋಲುತ್ತಾರೆಂದು ಗೊತ್ತಿದ್ದರೂ ಬಿಜೆಪಿಯವರು ಪೂಜಾರಿಯವರನ್ನು ಹರಕೆಯ ಕುರಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿ ಅನಂತ್, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ 10 ವರ್ಷಗಳಲ್ಲಿ ಜಿಲ್ಲೆಗ ನೀಡಿರುವ ಕೊಡುಗೆ ಶೂನ್ಯ ಎಂಬುದನ್ನು ಬಿಜೆಪಿ ನಾಯಕರು, ಕಾರ್ಯಕರ್ತರೇ ಹೇಳಿದ್ದಾರೆ. ಈ ಕಾರಣಕ್ಕೆ ಗೋಬ್ಯಾಕ್ ಚಳವಳಿ ಮಾಡಿ ಶೋಭಾ ಕರಂದ್ಲಾಜೆಗೆ ಇಲ್ಲಿ ಟಿಕೆಟ್ ಸಿಗದಂತೆ ಮಾಡಿದ್ದಾರೆ. ಟಿಕೆಟ್ ಸಿಗದೇ ಪಲಾಯನ ಮಾಡಿರುವ ಶೋಭಾ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದಲ್ಲೂ ಗೋಬ್ಯಾಕ್ ಎಂದಿದ್ದಾರೆ. ಶೋಭಾಗೆ ಟಿಕೆಟ್ ತಪ್ಪಿಸಿ ತಾವು ಟಿಕೆಟ್ ಪಡೆಯುವ ಸಂಚು ಮಾಡಿದ್ದ ಜಿಲ್ಲಾ ನಾಯಕರಿಗೂ ನಿರಾಶೆಯಾಗಿದ್ದು, ಕೋಟ ಶ್ರೀನಿವಾಸ್ ಪೂಜಾರಿ ಸೋಲಿಗೆ ಬಿಜೆಪಿಯವರಲ್ಲಿರುವ ಆಂತರಿಕ ಕಲಹ, ಟಿಕೆಟ್ ಸಿಗದ ನಾಯಕರ ಕುತಂತ್ರಗಳೇ ಸಾಕು ಎಂದು ವ್ಯಂಗ್ಯವಾಡಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 200ಸೀಟು ಬರುವುದೂ ಕಷ್ಟವಿದೆ ಎಂಬುದನ್ನು ಬಿಜೆಪಿಯ ಆಂತರಿಕ ಸಮೀಕ್ಷೆಯೇ ಹೇಳಿದೆ. ದೇಶದಲ್ಲಿರುವುದು ಆರೆಸೆಸ್ ಸರಕಾರವಾಗಿದ್ದು, ಸಂವಿಧಾನ ಬದಲಿಸುವುದು ಈ ಸರಕಾರದ ಗುರಿಯಾಗಿದೆ. ಇದನ್ನು ಬಿಜೆಪಿ ನಾಯಕರು, ಸಂಸದರೇ ಬಹಿರಂಗ ಮಾಡಿದ್ದಾರೆ. ಆರೆಸೆಸ್‌ನ ಹಿಡಜ್ ಅಜೆಂಡಾವನ್ನು ಬಹಿರಂಗ ಮಾಡಿದ ಕಾರಣಕ್ಕೆ ಈ ಸಂಸದರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿಲ್ಲ. ಸಂವಿಧಾನ ಬದಲಿಸುವ ಸಂಚು ಮಾಡಿರುವ ಬಿಜೆಪಿಗೆ ಈ ಬಾರಿ ದೇಶದ ಜನತೆ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ. ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಗಂಟುಮೂಟೆ ಕಟ್ಟಿಕೊಂಡು ಮನೆಯ ದಾರಿ ಹಿಡಿಯುವ ದಿನ ದೂರವಿಲ್ಲ ಎಂದು ಅನಂತ್ ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ