October 5, 2024

ಮೂಡಿಗೆರೆ ಬಿ.ಜೆ.ಪಿ. ಕಛೇರಿಯಲ್ಲಿ ಇಂದು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಮನ್ವಯ ಸಭೆ ನಡೆಯಿತು.

ರಾಜ್ಯದಲ್ಲಿ ಈ ಎರಡೂ ಪಕ್ಷಗಳು ಲೋಕಸಭಾ ಚುನಾವಣೆಗೆ ಹೊಂದಾಣಿಕೆ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಎರಡೂ ಪಕ್ಷಗಳ ನಡುವೆ ಸಮನ್ವಯತೆ ಸಾಧಿಸಲು ಈ ಸಭೆ ಹಮ್ಮಿಕೊಳ್ಳಲಾಗಿತ್ತು.

ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ  ದೇಶಕ್ಕೆ ಮೋದಿ ಮತ್ತು ಅವರ ಅಡಳಿತ ಬೇಕು. ಈ ಮೂಲಕ ಭಾರತ ವಿಶ್ವಗುರು ಆಗಬೇಕೆಂಬುದು ಜೆಡಿಎಸ್ ನ ನಿಲುವಾಗಿದೆ. ಈ ಕಾರಣದಿಂದ ಮ್ಯೆತ್ರಿಯನ್ನು ಎಲ್ಲಾ ಕಾರ್ಯಕರ್ತರು ಗೌರವಿಸಿ ಲೋಕಸಭೆಯಲ್ಲಿ ಪ್ರಚಂಡ ಗೆಲುವನ್ನು ದಾಖಲಿಸಲು ಒಮ್ಮತದಿಂದ ಶ್ರಮಿಸಬೇಕೆಂದು   ಹೇಳಿದರು.

ನಮ್ಮ ಮುಂದಿನ ಪೀಳಿಗೆಗಾಗಿ ದೇಶ  ಉಳಿಯಬೇಕು. ಇದನ್ನು ಸಾಕಾರಗೊಳಿಸಲು ಕಳೆದ 10  ವರ್ಷದಿಂದ ಪ್ರಧಾನಿ ನರೇಂದ್ರ ಮೋದಿ ಅವರು  ಹಗಲು ರಾತ್ರಿ ಎನ್ನದೆ ಶ್ರಮಿಸಿದ್ದಾರೆ.  ಅವರ ಜೊತೆ ಕೈಜೋಡಿಸುವುದು ನಮ್ಮ ನಿಮ್ಮೆಲ್ಲರ ಹೊಣೆಯಾಗಿದೆ. ಇದನ್ನು ರಾಜ್ಯಮಟ್ಟದಲ್ಲಿ ಜೆಡಿಎಸ್ ಪ್ರಮುಖರು ಮನಗಂಡಿದ್ದು, ಮೈತ್ರಿ ಯಶಸ್ವಿಯಾಗಲು ಎಲ್ಲಾ ಬೂತ್ ಮಟ್ಟದಲ್ಲೂ ಸಮನ್ವಯದಿಂದ ಕೆಲಸ ಮಾಡಬೇಕು. ರಾಜ್ಯದಲ್ಲಿ ಕುಮಾರಣ್ಣನ ಆಡಳಿತ ರೈತರ ಸಾಲ ಮನ್ನಾ, ದೇವೆಗೌಡರ ದೇಶ ಅಭಿವೃದ್ಧಿ ಚಿಂತನೆ ಎಲ್ಲವನ್ನೂ ಮನೆ ಮನೆಗೆ ತೆರಳಿ ತಿಳಿಸಲಾಗುವುದು.  ಅಲ್ಲದೆ ಕೋಟ ಶ್ರೀನಿವಾಸ ಪೂಜಾರಿ ಅವರು ಮಂತ್ರಿಯಾಗಿದ್ದಾಗ ಭ್ರμÁ್ಟಚಾರ ರಹಿತ ಆಡಳಿತ ನೀಡಿದ್ದಾರೆ. ಅಲ್ಲದೇ ಅವರಿಗೆ ಸ್ಥಳೀಯ ಸಮಸ್ಯೆ ಬಗ್ಗೆ ಅರಿವಿದೆ.  ಅವರನ್ನು ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ  ಗೆಲ್ಲಿಸೋಣ  ಎಂದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ  ರವಿಂದ್ರ ಬೆಳವಾಡಿ ಮಾತನಾಡಿ, ಬಿಜೆಪಿ ಜೆಡಿಎಸ್ ಹೊಂದಾಣಿಕೆ ಶಾಶ್ವತವಾದದ್ದು. ಯಾವುದೇ ಗೊಂದಲ ನಮ್ಮಲ್ಲಿ ಇರಬಾರದು. ದೇವೆಗೌಡರ ಸಲಹೆ ಸೂಚನೆಯನ್ನು ಮೋದಿ ಅವರು ಪಡೆದು ಪಾಲಿಸುತ್ತಿದ್ದರು. ಅವರು ತಮ್ಮ ಇಳಿ ವಯಸ್ಸಿನಲ್ಲೂ  ದೇಶದ ಸೇವೆ ಹೋರಾಟ ಮತ್ತು ಕಾಯಕ ಎಲ್ಲರಿಗೂ ಮಾದರಿ. ದೇವೆಗೌಡರ ಬದ್ದತೆ ಹಾಗು ಶ್ರಮ ಸರಕಾರಕ್ಕೆ ಇರಲೇಬೇಕು ಎಂಬುದೆ ಮೋದಿ ಆಶಯವಾಗಿದೆ.   ಅಲ್ಲದೆ  ನಮ್ಮ ಅಭ್ಯರ್ಥಿಯ ಕಾರ್ಯ ಮನೆ ಮನೆಗು ಮುಟ್ಟಿಸಬೇಕು. ಈ ಚುನಾವಣೆ  ದೇಶದ ಭವಿಷ್ಯದ ಉಳಿವಾಗಿದ್ದು,  ಇಲ್ಲಿಂದ ಲೋಕಸಭಾ ಸದಸ್ಯರನ್ನು ಕಳಿಸುವ ಮೂಲಕ ದೇವೆಗೌಡರ ಕೋಡುಗೆಯನ್ನು ಮೋದಿಜಿಗೆ ನೀಡೋಣ ಎಂದರು

ಜಿಲ್ಲಾ ಕಾರ್ಯದರ್ಶಿ ಜೆ.ಎಸ್.ರಘು, ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ. ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ,   ಮುಖಂಡರಾದ ಹಳಸೆ ಶಿವಣ್ಣ, ಎಂ.ಎಲ್. ಕಲ್ಲೇಶ್, ಕೇಶವ ಕೆಂಜಿಗೆ, ದೀಪಕ್ ದೊಡ್ಡಯ್ಯ,  ಡಿ.ಎಸ್.ಸುರೇಂದ್ರ, ಜೆ.ಎಸ್.ರಘು, ಕೆ.ಸಿ.ರತನ್, ರವಿ ಬಸರಳ್ಳಿ,   ಕವೀಶ್, ಬಿ.ಎನ್. ಜಯಂತ್,  ಸುದರ್ಶನ್, ಜ್ವಾಲನಯ್ಯ, ಭರತ್ ಬಾಳೂರು, ಲೋಹಿತ್, ದೇವರಾಜು   ಮತ್ತಿತರರಿದ್ದರು

ದಶಕಗಳ ನಂತರ ಮಾತೃಪಕ್ಷದ ಮೆಟ್ಟಿಲೇರಿದ ರಂಜನ್ ಅಜಿತ್

ಪ್ರಸ್ತುತ ಜೆ.ಡಿ.ಎಸ್. ಜಿಲ್ಲಾಧ್ಯಕ್ಷರಾಗಿರುವ ರಂಜನ್ ಅಜಿತ್ ಕುಮಾರ್ ಅವರು ದಶಕಗಳ ನಂತರ ತನ್ನ ಮಾತೃಪಕ್ಷ ಬಿ.ಜೆ.ಪಿ. ಕಛೇರಿಯ ಮೆಟ್ಟಿಲೇರಿದ್ದಾರೆ. ಸರಿಸುಮಾರು 15 ವರ್ಷಗಳ ನಂತರ ರಂಜನ್ ಅಜಿತ್ ಕುಮಾರ್ ಅವರು ಬಿ.ಜೆ.ಪಿ. ಪಕ್ಷದ ಕಛೇರಿಗೆ ಎಂಟ್ರಿ ಕೊಟ್ಟಿದ್ದಾರೆ. ತನ್ನ ರಾಜಕೀಯ ಬದುಕಿನ ಆರಂಭದಿಂದಲೂ ಬಿ.ಜೆ.ಪಿ.ಯಲ್ಲಿದ್ದ ಅಜಿತ್ ನಡುವೆ ಬಿ.ಜೆ.ಪಿ.ಯಿಂದ ದೂರಾಗಿ ಜೆ.ಡಿ.ಎಸ್. ಪಕ್ಷ ಸೇರಿದ್ದರು. ಈಗ ಜೆ.ಡಿ.ಎಸ್. ಜಿಲ್ಲಾಧ್ಯಕ್ಷರಾಗಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಇದೀಗ ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಅನಿವಾರ್ಯವಾಗಿ ಒಂದಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದಾರೆ.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ