October 5, 2024

ಜನಪದ ಎಂದರೆ ಜನರು. ತಮ್ಮ ಬದುಕಿಗೆ ಹಿಂದಿನಿಂದಲೂ ಹಾಡು, ನೃತ್ಯ, ವಾಧ್ಯ, ವೃತ್ತಿ ಪ್ರವೃತ್ತಿ, ಆಚಾರ, ವಿಚಾರ, ನೀತಿ, ನಡೆ, ನುಡಿ, ಗಾದೆ ತಮ್ಮ ಬದುಕನ್ನು ಹಸನಗೊಳಿಸುವ ಬಗ್ಗೆ ಬಾಯಿಂದ ಬಾಯಿಗೆ ಹರಡಿಕೊಂಡು ಬೆಳೆದಿರುವ ಸಂಸ್ಕøತಿಯೇ ಜಾನಪದ. ಇದು ಮಾನವನ ಸಾಂಸ್ಕøತಿಕ ಪರಂಪರೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಲ್ಲದೇ ಮೌಖಿಕ ಸಂಸ್ಕೃತಿ ಶ್ರೀಮಂತವಾಗಿರುವುದು ನಮ್ಮ ಭಾಗ್ಯ. ಇದನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸ ಆಗಬೇಕಿದೆ ಬೇಲೂರು ಸ.ಪ್ರಾ.ಶಾ. ಪ್ರಾಂಶುಪಾಲ ಡಾ.ಎಚ್.ಎಂ.ಮಹೇಶ್ ಹೇಳಿದರು.

ಅವರು ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಜಾನಪದ ಪ್ರಕಾರಗಳ ಪ್ರದರ್ಶನ ಗೋಷ್ಠಿಯಲ್ಲಿ ಅವರು “ಜನಪದ-ಜಾನಪದ” ವಿಷಯ ಮಂಡಿಸಿ ಮಾತನಾಡಿದರು.

ನಮ್ಮ ಪೂರ್ಮಿಕರು ಅಪಾರವಾದ ಜೀವನಾನುಭವಗಳನ್ನು ಹಾಡಿನ ರೂಪದಲ್ಲಿ ಸೃಷ್ಟಿಸಿ ಅದನ್ನು ತಲೆಮಾರಿನಿಂದ ತಲೆಮಾರಿಗೆ ಮೌಖಿಕವಾಗಿ ಪಸರಿಸುತ್ತಾ ಬಂದಿದ್ದಾರೆ. ಜನಪದರ ಬದುಕಿನ ಒಟ್ಟು ಸಾರವೇ ಜಾನಪದವಾಗಿದೆ. ಜಾನಪದ ಬದುಕಿನ ನೈತಿಕ ಮೌಲ್ಯಗಳ ಆಗರವಾಗಿದ್ದು, ಸಮಾಜದಲ್ಲಿ ಯಾವುದೂ ಅತಿರೇಕಕ್ಕೆ ಹೋಗದಂತೆ, ಹಾದಿ ತಪ್ಪದಂತೆ ಜನರನ್ನು ಜೀವನಪ್ರೀತಿಯೆಡೆಗೆ ಸೆಳೆದಿದೆ ಎಂದರು.

ಹಾಸನದ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಅವರು “ಜನಪದರಲ್ಲಿ ಜೀವನ ಮೌಲ್ಯಗಳು” ವಿಷಯ ಮಂಡಿಸಿ ಮಾತನಾಡಿ, ಜನಪದರಿಗೆ ಯೋಚನೆ ಮಾಡಿ ಮಾತನಾಡುವ ಪ್ರಜ್ಷೆ ಇತ್ತು. ಸರಳತೆ, ನೋವನ್ನು ಅಪ್ಪಿಕೊಳ್ಳುತ್ತಿದ್ದರು. ಹಾಗಾಗಿ ಅವರು ಸದಾ ನಲಿವಿನಲ್ಲಿಯೇ ಬದುಕುತ್ತಿದ್ದರು. ಅಂತಹ ಜೀವನ ನಡೆಸಲು ಆಧುನಿಕರಿಂದ ಸಾಧ್ಯವಾಗುತ್ತಿಲ್ಲ. ಕನ್ನಡ ಶಿಷ್ಟ ಸಾಹಿತ್ಯದ ಮೊದಲ ಕೃತಿ ಕವಿರಾಜ್ಯ ಮಾರ್ಗ ನಮಗೆ ಸಿಕ್ಕಿದ್ದರಿಂದ ಕಳೆದುಕೊಂಡ ಸತ್ಯ ಅರಿವಾಗಿದೆ. ಹಿಂದೆ ಭೂಮಿಯ ಮಣ್ಣು ಬಾಯಿಗೆ ಹಾಕಿ ತಿನ್ನುವಷ್ಟು ಶುದ್ಧವಾಗಿತ್ತು. ಆದರೆ ಈಗ ಮಣ್ಣಿನ ಮೇಲೆ ಬರಿ ಕಾಲಿನಲ್ಲಿ ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ಮಲೀನ ಮಾಡಿದ್ದೇವೆ. ಆಧುನಿಕತೆ ಭರಾಟೆಯಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸುತ್ತಿಲ್ಲ. ಇದು ಜನಪದರ ಮೌಲ್ಯಗಳಿಗೆ ತದ್ವಿರುದ್ದವಾಗಿದೆ ಎಂದು ಹೇಳಿದರು.

ರಾಜ್ಯ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಜಾನಪದ ಎಸ್.ಬಾಲಾಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಮತ್ತು ಜಾನಪದ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಈ ಎರಡನ್ನೂ ತಿಳಿದುಕೊಳ್ಳುವ ಪರಂಪರೆ ಇದೆ ಹೊರತು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಆಗಬೇಕಿದೆ. ರಾಜ್ಯದಲ್ಲಿ 12 ಲಕ್ಷಕ್ಕೂ ಹೆಚ್ಚು ಬಡಕಟ್ಟು ಜನಾಂಗದ ಕಲಾವಿದರಿದ್ದಾರೆ. ಇವರಿಗೆ ನೆಲೆಯಿಲ್ಲ. ಸೂತ್ರದ ಮತ್ತು ತೊದಲು ಗೊಂಬೆ ಮಾರಾಟಕ್ಕೆ ಇಟ್ಟಿದ್ದಾರೆ. ಹಾಗಾಗಿ ಬುಡಕಟ್ಟು ಅಕಾಡೆಮಿ ಪ್ರಾರಂಭ ಮಾಡಬೇಕಿದೆ ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷ ಹಳೆಕೋಟೆ ರಮೇಶ್, ಜಾಲ್ಮರ ಸುಬ್ಬರಾವ್, ಎಸ್.ಎಸ್.ವೆಂಕಟೇಶ್, ಬಕ್ಕಿ ರವೀಂದ್ರ, ರುಕ್ಮಿಣಿ, ಶಿಲ್ಪಾ, ತಿಮ್ಮೇಗೌಡ, ಭೊಜೇಗೌಡ ಆಲ್ದೂರು, ಎಂ.ಎಸ್.ಲೋಕೇಶಪ್ಪ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ