October 5, 2024

ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ನಾವು ತೋರುವ ನಿರ್ಲಕ್ಷ್ಯ ಮುಂದಿನ ದಿನಗಳಲ್ಲಿ ಭಾಷೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಬಗ್ಗೆ ಸರ್ಕಾರಗಳು ಎಚ್ಚೆತ್ತು ಕನ್ನಡ ಶಾಲೆಗಳನ್ನು ಉಳಿಸುವ ಕಾರ್ಯ ಮಾಡಬೇಕು ಎಂದು ಮೂಡಬಿದರೆ ಆಳ್ವಾಸ್ ವಿದ್ಯಾಸಂಸ್ಥೆ ಮುಖ್ಯಸ್ಥ ಡಾ.ಮೋ ಹನ್ ಆಳ್ವ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಅಡ್ಯಂತಾಯ ರಂಗ ಮಂದಿರದ ಕವಿ ಲಕ್ಷ್ಮೀಶ ವೇದಿಕೆಯಲ್ಲಿ ಏರ್ಪಡಿಸಿದ್ದ 19ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾ ಡಿದರು.

ಕನ್ನಡ ಭಾಷೆ ಇಲ್ಲದೇ ಹೋದರೆ ಯಾವುದೇ ಸಾಹಿತ್ಯ, ಸಂಸ್ಕೃತಿ, ಕಲಾ ಪ್ರಕಾರ ಗಟ್ಟಿ ಉಳಿಯುವುದಿಲ್ಲ. ಇತಿಹಾಸ ನೋಡಿದರೆ ಹಳೆಗನ್ನ ಡದಿಂದ ಹೊಸಗನ್ನಡವರೆಗೆ ಭಾಷೆ, ಸಾಹಿತ್ಯ ಎಲ್ಲವೂ ಬದಲಾವಣೆ ಗೊಳ್ಳುತ್ತಾ ನಡೆದುಕೊಂಡು ಬಂದಿದೆ. ಅಲ್ಲದೇ ನವೋದಯ, ಪ್ರಗತಿಶೀಲ, ನವ್ಯ ಬಂಡಾಯ ಸಾಹಿತ್ಯ ಸಮ್ಮೇಳನ ಪ್ರಾರಂಭವಾಯಿತು. ಕನ್ನಡ ಮಾಧ್ಯ ಮ ಶಾಲೆ ಕೂಡ ಬೇಕಾದಷ್ಟು ನಮ್ಮ ನಾಡಿನಲ್ಲಿ ಕಟ್ಟಿದರು. ಆದರೆ ಕಾಲ ಬದಲಾದಂತೆ ಕನ್ನಡ ಮಾಧ್ಯಮ ಶಾಲೆಗಳು ನಶಿಸಿಹೋಗುತ್ತಿದೆ ಎಂದು ಹೇಳಿದರು.

ಒಂ ದು ಶಾಲೆಗೆ ಓರ್ವ ಕನ್ನಡ ಶಿಕ್ಷಕಿ ಸಿಗುವುದೇ ಕಷ್ಟವಾಗಿದೆ. ಇಂಗ್ಲೀಷ್ ಭಾಷೆ ಅನೇಕ ದೇಶದ ಮೇಲೆ ಸವಾ ರಿ ಮಾಡಿದೆ. ಆದರೆ ಅನೇಕ ಹೊರ ದೇಶದಲ್ಲಿ ಉನ್ನತ ಶಿಕ್ಷಣ ಆ ದೇಶದ ಮೂಲ ಭಾಷೆಯಲ್ಲಿಯೇ ನಡೆ ಯುತ್ತಿದೆ. ಇದು ನಮ್ಮ ದೇಶದಲ್ಲೂ ಆಗಬೇಕು. ರಾಜ್ಯದಲ್ಲಿರುವ ಎಲ್ಲಾ ಪ್ರಾದೇಶಿಕ ಭಾಷೆ ಸೋಲಬಾರದು. ಈಗಾಗಲೇ ಕನ್ನಡ ಭಾಷೆ ಮುಂದೆ ಕೊಂಡೊಯ್ಯುವಲ್ಲಿ ಆಳುವ ಸರಕಾರ ಗಳು ವಿಫಲವಾಗಿದೆ. ಇನ್ನಾದರೂ ಖಾಸಗಿ ಶಾಲೆಗೆ ಮೀರಿಸುವಂತಹ ಕನ್ನಡ ಮಾಧ್ಯಮ ಶಾಲೆ ಕಟ್ಟಬೇಕು. ಆಗ ಮಾತ್ರ ಮುಂದಿನ ಪೀಳಿಗೆ ಕನ್ನಡ ಭಾಷೆಯ ತೇರನ್ನು ಎಳೆಯಲು ಸಾಧ್ಯ ಎಂದು ಹೇಳಿದರು.

ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಅವರು ಹೇಮಾಂತರಂಗ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಬೇರೆ ಜಿಲ್ಲೆಯಲ್ಲಿ ಕಾಣದಂತಹ ವೈಶಿಷ್ಟತೆ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಇಲ್ಲಿ ಶೃಂಗೇರಿ ಶ್ರೀ ಶಾರದೆ, ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ, ಬಾಬಾ ಬುಡ ನ್‌ಗಿರಿ, ದತ್ತಪೀಠ, ಜೈನರ ಕ್ಷೇತ್ರ ಸೇರಿ ದಂತೆ ಪೌರಾಣಿಕ, ಐತಿಹಾಸಿಕವಾಗಿ ಹೆಸರುವಾಸಿಯಾಗಿದೆ. ಅಲ್ಲದೇ ಋಷಿ ಗಳಿಗೆ ಆಶ್ರಯ ನೀಡಿದ ತಾಣವಾಗಿದೆ. ಇಂತಹ ಪುಣ್ಯ ಭೂಮಿಯಲ್ಲಿ ತನ್ನ ಅವದಿಯಲ್ಲಿ ಅಖಿಲ ಭಾರತ ಸಮ್ಮೇ ಳನ ನಡೆಸಲಾಗುವುದು ಎಂದು ಹೇಳಿ ದರು.

ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಕ್ನನಡ ಅರಿವು ಹಾಗೂ ಆತ್ಮಾಭಿಮಾನದ ಭಾಷೆಯಾಗಬೇಕು. ಕನ್ನಡ ಭಾಷೆ ಬಗ್ಗೆ ನಿರ್ಲಕ್ಷ್ಯ ಮಾಡಿ ದರೆ ಪಾಪ ಮಾಡಿದ ಹಾಗೆ. ಇಲ್ಲಿನ ಕನ್ನಡಿಗರು ಹೊರ ದೇಶದಲ್ಲಿ ಕನ್ನಡ ಕೂಟಗಳನ್ನು ಕಟ್ಟಿದ್ದಾರೆ. ಆದರೆ ಇಲ್ಲಿ ಸಾಧ್ಯವಾಗದಿರುವುದು ದುರಂತ. ಕನ್ನಡ ಭಾಷೆ ಉಳಿಸುವ ಇಚ್ಚಾಸಕ್ತಿ ಕನ್ನಡಿಗರಲ್ಲಿ ಮೂಡಬೇಕೆಂದು ಹೇಳಿ ದರು.

ಇದಕ್ಕೂ ಮುನ್ನ ಸಮ್ಮೇಳನಾಧ್ಯಕ್ಷ ಹಳೆಕೋಟೆ ರಮೇಶ್ ಅವರನ್ನು ದಿವ್ಯರಥದಲ್ಲಿ ಕುಳ್ಳಿರಿಸಿ, ವಿವಿಧ ವಾಧ್ಯ ಮತ್ತು ಕಲಾತಂಡಗಳು ಪಟ್ಟ ಣದ ಪ್ರಮುಖ ರಸ್ತೆಯಲ್ಲಿ ಮೆರವಣಿ ನಡೆಸಲಾಯಿತು.

ಸಮ್ಮೇಳನದಲ್ಲಿ ಮೈಸೂರು ಕ.ಸಾ.ಪ. ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮತ್ತು ಸಾಹಿತಿ ಸತ್ಯನ್ ಅವರಿಗೆ ಕನ್ನಡ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮ್ಮೇಳನದಲ್ಲಿ ಜಿಲ್ಲೆಯ ಉದಯೋನ್ಮುಖ ಸಾಹಿತಿಗಳ 6 ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಸಮ್ಮೇಳನದ ಸ್ಮರಣ ಸಂಚಿಕೆ ಹೇಮಾಂಗಣ ಬಿಡಗಡೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮ್ಮೇಳನಾಧ್ಯಕ್ಷ ಹಳೆಕೋಟೆ ರಮೇಶ್ ವಹಿಸಿದ್ದರು, ಕಸಾಪ ಜಿಲ್ಲಾ ಧ್ಯಕ್ಷ ಸೂರಿ ಶ್ರೀನಿವಾಸ್, ತಾಲೂಕು ಅಧ್ಯಕ್ಷ ಎಚ್.ಎಂ.ಶಾಂತಕುಮಾರ್,  ಕಾರ್ಯಾಧ್ಯಕ್ಷ ಬಿ.ಎಸ್. ಜಯರಾಂ, ಕೋಶಾಧ್ಯಕ್ಷ ಜೆ.ಎಸ್. ರಘು, ಉಪಾಧ್ಯಕ್ಷ ಕೆ. ಮಂಚೇಗೌಡ, ಪ್ರಧಾನ ಸಂಚಾಲಕ ಗಣೇಶ್ ಮಗ್ಗಲಮಕ್ಕಿ, ಶ್ರೀಮತಿ ನಿರ್ಮಲ ಮಂಚೇಗೌಡ, ಎಸ್.ಎಸ್. ವೆಂಕಟೇಶ್, ಜಿಲ್ಲಾ ಕ.ಸಾ.ಪ. ಮತ್ತು ಮಹಿಳಾ ಘಟಕದ ಅಧ್ಯಕ್ಷರು ಪದಾಧಿಕಾರಿಗಳು, ವಿವಿಧ ತಾಲೂಕಿನ ಕಸಾಪ ಅಧ್ಯಕ್ಷರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ