October 5, 2024

ಮೂಡಿಗೆರೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕ ಕುಡಿಯುವ ನೀರಿನ ಅನುಕೂಲಕ್ಕಾಗಿ ರೋಟರಿ ಸಂಸ್ಥೆ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ.

ಬುಧವಾರ ಮೂಡಿಗೆರೆ ರೋಟರಿಗೆ ಅಧಿಕೃತ ಭೇಟಿನೀಡಿದ್ದ ರೋಟರಿ ಜಿಲ್ಲಾ ಗವರ್ನರ್ ಬಿ.ಸಿ. ಗೀತಾ ಅವರ  ಸಮ್ಮುಖದಲ್ಲಿ ರೋಟರಿ ಸಂಸ್ಥೆ ವತಿಯಿಂದ ಎಸ್.ಸೋಹನ್‍ರಾಜ್ ನೆನಪಿಗಾಗಿ ಪಟ್ಟಣದ ಸರಕಾರಿ ಬಸ್ ನಿಲ್ದಾಣದಲ್ಲಿ 1 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಘಟಕ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಯಿತು.

ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೂಡಿಗೆರೆ ರೋಟರಿ ಅಧ್ಯಕ್ಷ ಕೆ.ಎಲ್.ಎಸ್. ತೇಜಸ್ವಿ ಮಾತನಾಡಿ ರಾಜ್ಯದೆಲ್ಲೆಡೆ ಬರ ಆವರಿಸಿಕೊಂಡಿದೆ. ಶುದ್ಧ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಯಾಣಿಕರು ಶುದ್ಧ ಕುಡಿಯುವ ನೀರನ್ನು ಹಣ ಕೊಟ್ಟು ಕುಡಿಯುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಎಸ್.ಸೋಹನ್‍ರಾಜ್ ನೆನಪಿಗಾಗಿ ಲಲಿತಾ ಎಸ್.ಭವರ್ ಲಾಲ್ ಜೈನ್ ಅವರು ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದ್ದು, ಬಸ್ ನಿಲ್ದಾಣದಲ್ಲಿ ನೀರಿನ ಘಟಕಕ್ಕೆ ಚಾಲನೆ ನಿಡಲಾಗಿದೆ. ಇದನ್ನು ಪ್ರಯಾಣಿಕರು ಹಾಗೂ ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ರೋಟರಿ ಕಾರ್ಯದರ್ಶಿ ಸಚಿನ್, ಕೆ.ಎಸ್‍.ಆರ್ ಟಿ.ಸಿ. ಡಿಪೊ ವ್ಯವಸ್ಥಾಪಕ ಮಂಜುನಾಥ್, ರೋಟರಿ ಜಿಲ್ಲಾ ಉಪಗವರ್ನರ್ ವಿನೋದ್‍ಕುಮಾರ್, ವಿವೇಕ್ ಪುಣ್ಯಮೂರ್ತಿ, ಪ್ರಸಾದ್ ಹೆಚ್.ಎನ್., ನರೇಂದ್ರಶೆಟ್ಟಿ, ಬಿ.ಸಿ.ಅಶ್ಚಥ್, ರಂಜಿತ್, ಸುಧಾಕರ್, ಡಾ.ಪ್ರದೀಪ್, ದಿನೇಶ್, ಶೈಲೇಶ್, ಜೀವನ್ ಕಲಾಮೆ, ಶೈಲೇಶ್ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ