October 5, 2024

ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(NIA) ಓರ್ವ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಬಂಧನಕ್ಕೆ ಒಳಗಾಗಿರುವ ಆರೋಪಿ ಮುಜಾಮಿಲ್ ಶರೀಫ್ ಚಿಕ್ಕಮಗಳೂರು ಮೂಲದವನು ಎಂದು ತಿಳಿದುಬಂದಿದೆ.

ಮಾರ್ಚ್ 1ರಂದು ಬೆಂಗಳೂರಿನ ಹೆಸರಾಂತ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿ ಹಲವರು ಗಂಭೀರ ಗಾಯಗೊಂಡಿದ್ದರು.  ತಲೆಗೆ ಟೋಪಿ ಹಾಕಿಕೊಂಡು ಬಂದಿದ್ದ ಶಂಕಿತ ವ್ಯಕ್ತಿಯೊಬ್ಬ ರಾಮೇಶ್ವರಂ ಕೆಫೆಗೆ ಬೆಳಗ್ಗಿನ ಉಪಹಾರ ಸೇವಿಸಲು ಬಂದವನು ಅಲ್ಲಿ ಬ್ಯಾಗ್ ಒಂದನ್ನು ಇರಿಸಿ ಹೋಗಿದ್ದ. ಆತ ಅಲ್ಲಿಂದ ತೆರಳಿದ ಸುಮಾರು ಒಂದು ಗಂಟೆಯ ನಂತರ ಈ ಬ್ಯಾಗ್ ಒಳಗೆ ಇರಿಸಿದ್ದ ಬಾಂಬ್ ಸ್ಪೋಟವಾಗಿತ್ತು. ಶಂಕಿತನ ಚಲನವಲನ ಸಿ.ಸಿ. ಕ್ಯಾಮರಗಳಲ್ಲಿ ಸೆರೆಯಾಗಿತ್ತು.

ದೇಶವನ್ನೇ ಬೆಚ್ಚಿಬೀಳಿಸಿದ್ದ ಈ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲಾಗಿತ್ತು.

ಪ್ರಕರಣದ ಬೆನ್ನು ಹತ್ತಿದ್ದ NIA ತಂಡ ಆರೋಪಿಗಳ ಜಾಡು ಹಿಡಿದು  ಕರ್ನಾಟಕ, ತಮಿಳುನಾಡು, ಕೇರಳ  ರಾಜ್ಯದ ಹಲವು ಕಡೆ ಶೋಧನೆ ನಡೆಸಿತ್ತು.

ಪ್ರಕರಣದ ಪ್ರಮುಖ ಆರೋಪಿಗಳನ್ನು ಗುರುತಿಸುವಲ್ಲಿ ತನಿಖಾ ತಂಡ ಯಶಸ್ವಿಯಾಗಿದೆ.

ಮುಜಾಮಿಲ್ ಶರೀಫ್ ಬಂಧನಕ್ಕೊಳಗಾಗಿರುವ ಶಂಕಿತ ಉಗ್ರ ಎನ್ನಲಾಗಿದೆ.  ಈತ ಚಿಕ್ಕಮಗಳೂರು ಮೂಲದವನು ಎಂಬುದು ಈಗ ಬಹಿರಂಗವಾಗಿದೆ. ಚಿಕ್ಕಮಗಳೂರಿನ ದುಬೈ ನಗರ ಪ್ರದೇಶದ ವಾಸಿ ಎಂದು ತಿಳಿದುಬಂದಿದೆ. ಚಿಕ್ಕಮಗಳೂರಿನ ಈತ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ ಮತ್ತು ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.

ಚಿಕ್ಕಮಗಳೂರಿಗೂ ಬಂದಿದ್ದ NIA ತಂಡ 

NIA ತಂಡ ಚಿಕ್ಕಮಗಳೂರಿನಲ್ಲಿ ಈತನ ತಾಯಿ ಹಾಗೂ ಕುಟುಂಬದವರು ವಾಸವಾಗಿರುವ ಮನೆಗೆ ದಾಳಿ ಮಾಡಿ ಮಾಹಿತಿ ಕಲೆಹಾಕಿದ್ದು, ಕೆಲ ವಸ್ತುಗಳನ್ನು, ಡಿಜಿಟಲ್ ಡಿವೈಸ್‌ಗಳನ್ನೂ ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಬಂಧಿತ ಮುಜಾಮಿಲ್ ಈಗ್ಗೆ ಒಂದು ತಿಂಗಳ ಹಿಂದೆ ಚಿಕ್ಕಮಗಳೂರಿನ ತನ್ನ ಮನೆಗೆ ಭೇಟಿ ನೀಡಿದ್ದ ಎಂದು ತಿಳಿದುಬಂದಿದೆ.

ಬಂಧಿತ ಮುಜಾಮಿಲ್ ಈ ಪ್ರಕರಣದ ಮುಖ್ಯ ಆರೋಪಿ ಮುಜಾವೀರ್ ಹುಸೇನ್ ಜತೆ ನಿರಂತರ ಸಂಪರ್ಕದಲ್ಲಿದ್ದ ಮತ್ತು ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಒದಗಿಸಿದವನು ಈತನೇ ಎಂದು ತನಿಖೆ ವೇಳೆ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಆತನನ್ನ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ದೇಶಾದ್ಯಂತ 18 ಕಡೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಕರ್ನಾಟಕದಲ್ಲಿಯೇ 12 ಕಡೆ ದಾಳಿ ನಡೆಸಲಾಗಿತ್ತು. ಈ ವೇಳೆ ಕೆಲವು ಮಹತ್ವದ ಅಂಶಗಳು ಪತ್ತೆಯಾಗಿದ್ದಲ್ಲದೆ, ಕೆಲವು ಸುಳಿವುಗಳು ಸಹ ಸಿಕ್ಕಿದೆ ಎನ್ನಲಾಗಿದೆ.

ಬಾಂಬರ್‌ಗೆ ಸಹಾಯ ಮಾಡಿದ್ದ?

ಈ ಗ್ಯಾಂಗ್ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ದೊಡ್ಡ ಮಟ್ಟದಲ್ಲಿ ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದು ಬೆಳಕಿಗೆ ಬಂದಿದೆ. ತನಿಖಾ ತಂಡದ ದಾಳಿ ವೇಳೆ ಹಲವು ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.  ರಾಮೇಶ್ವರಂ ಕೆಫೆಗೆ ಪ್ರಮುಖ ಆರೋಪಿ ಮುಜಾವೀರ್ ಶಜೀಬ್ ಹುಸೇನ್ ಬಾಂಬ್ ಅನ್ನು ತಂದಿದ್ದ. ಈತನಿಗೆ ಅಬ್ದುಲ್ ಮತೀನ್ ತಾಹ ಮತ್ತು ಈಗ ಬಂಧಿತನಾಗಿರುವ ಮುಜಾಮಿಲ್ ಶರೀಫ್ ಸಹಾಯ ಮಾಡಿದ್ದರು ಎಂಬುದು ಎನ್‌ಐಎಗೆ ತನಿಖೆ ವೇಳೆ ಗೊತ್ತಾಗಿದೆ. ಈ ಮಾಹಿತಿ ಸಿಕ್ಕ ಕೂಡಲೇ ಮುಜಾಮಿಲ್ ಶರೀಫ್‌ನನ್ನು ಬಂಧನ ಮಾಡಲಾಗಿದೆ. ಈಗ ಉಳಿದ ಇಬ್ಬರಿಗಾಗಿ ತೀವ್ರ ಹುಡುಕಾಟವನ್ನು ನಡೆಸಲಾಗಿದೆ.

ಕಳಸಕ್ಕೂ ಈತನಿಗೂ ಇರುವ ಸಂಬಂಧವೇನು ?

ಬಂಧಿತ ಮುಜಾಮಿಲ್ ಶರೀಫ್ ತಾಯಿಯ ತವರುಮನೆ ಚಿಕ್ಕಮಗಳೂರು ಜಿಲ್ಲೆ ಕಳಸ ಎಂದು ಹೇಳಲಾಗುತ್ತಿದೆ. ಈತನ ತಂದೆ ನಿಧನರಾಗಿದ್ದು, ತಂದೆಯ ನಿಧನದ ನಂತರ ಈತನ ಕುಟುಂಬ ಕಳಸದಲ್ಲಿ ಕೆಲ ಸಮಯ ವಾಸವಾಗಿತ್ತು, ಈಗ್ಗೆ ಕೆಲ ವರ್ಷಗಳ ಹಿಂದೆ ಚಿಕ್ಕಮಗಳೂರಿಗೆ ಶಿಪ್ಟ್ ಆಗಿತ್ತು, ಬಂಧಿತ ಮುಜಾಮಿಲ್ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಳಸದಲ್ಲೇ ಮಾಡಿದ್ದ ಎನ್ನಲಾಗುತ್ತಿದೆ.  ಈತನ ತಾಯಿ ಮತ್ತು ಸಹೋದರಿ ಚಿಕ್ಕಮಗಳೂರು ದುಬೈ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಈತನಿಗೆ ವಿವಾಹವಾಗಿದೆ ಎಂದು ತಿಳಿದುಬಂದಿದೆ.

ಕೊರೋನಾ ಸಮಯದಲ್ಲಿ ಈತ ಕಳಸದಲ್ಲಿಯೇ ವಾಸವಾಗಿದ್ದ, ಹಣ್ಣು ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ಎನ್ನಲಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ