ಸನ್ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದೆ. ಐಪಿಎಲ್(IPL 2024) ಇತಿಹಾಸದಲ್ಲೇ ಅತ್ಯಧಿಕ ರನ್ ಪೇರಿಸಿದ ಮೊದಲ ತಂಡ ಎನಿಸಿಕೊಂಡಿದೆ. ಈ ಮೂಲಕ ಆರ್ಸಿಬಿ ಹೆಸರಿನಲ್ಲಿದ ದಾಖಲೆಯನ್ನು ಮುರಿದಿದೆ.
ಇಲ್ಲಿನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ಎಸ್.ಆರ್.ಹೆಚ್. ತಂಡ 20 ಓವರ್ಗಳಲ್ಲಿ 3 ವಿಕೆಟ್ಗೆ 277 ರನ್ ಬಾರಿಸಿದೆ. ಈ ಮೂಲಕ ಆರ್ಸಿಬಿ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದೆ. ಆರ್ಸಿಬಿ 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ 5 ವಿಕೆಟ್ಗೆ 263 ರನ್ ಬಾರಿಸಿತ್ತು. ಇದೀಗ ಈ ದಾಖಲೆಯನ್ನು ಹೈದರಾಬಾದ್ 11 ವರ್ಷಗಳ ಬಳಿಕ ಮೀರಿ ನಿಂತಿದೆ.
Abhishek Sharma's scintillating knock comes to an end but he's put @SunRisers on 🔝 with his astonishing strokes 🔥
Head to @JioCinema and @StarSportsIndia to watch the match LIVE#TATAIPL | #SRHvMI pic.twitter.com/OoHgAK6yge
— IndianPremierLeague (@IPL) March 27, 2024
ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ತಂಡಗಳು
ಸನ್ರೈಸರ್ಸ್ ಹೈದರಾಬಾದ್-3 ವಿಕೆಟ್ಗೆ 277(ಮುಂಬೈ ಇಂಡಿಯನ್ಸ್ ವಿರುದ್ಧ)
ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ವಿಕೆಟ್ಗೆ 263( ಪುಣೆ ವಾರಿಯರ್ಸ್ ವಿರುದ್ಧ)
ಲಕ್ನೋ ಸೂಪರ್ ಜೈಂಟ್ಸ್-5 ವಿಕೆಟ್ಗೆ 257(ಪಂಜಾಬ್ ಕಿಂಗ್ಸ್ ವಿರುದ್ಧ)
ರಾಯಲ್ ಚಾಲೆಂಜರ್ಸ್ ಬೆಂಗಳೂರು– 3 ವಿಕೆಟ್ಗೆ 248( ಗುಜರಾತ್ ಲಯನ್ಸ್ ವಿರುದ್ಧ
ಕೋಲ್ಕತ್ತಾ ನೈಟ್ ರೈಡರ್ಸ್-6 ವಿಕೆಟ್ಗೆ 246(ರಾಜಸ್ಥಾನ್ ರಾಯಲ್ಸ್ ವಿರುದ್ಧ)
ಚೆನ್ನೈ ಸೂಪರ್ ಕಿಂಗ್ಸ್-5 ವಿಕೆಟ್ಗೆ 240(ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ)
ಹೈದರಾಬಾದ್ನಲ್ಲಿ ಬುಧವಾರ ಸಿಕ್ಸರ್ಗಳ ಸುರಿಮಳೆಯೇ ಸುರಿಯಿತು. ಮುಂಬೈ ಇಂಡಿಯನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳ ಆಟಗಾರರು ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಈ ಸಿಕ್ಸರ್ಗಳ ಮಳೆಗೆ ಕಾರಣರಾದರು. ಅಂತಿಮವಾಗಿ ಪಂದ್ಯದಲ್ಲಿ ತವರಿನ ತಂಡವಾದ ಸನ್ರೈಸರ್ಸ್ ಹೈದರಾಬಾದ್ 31 ರನ್ ಅಂತರದಿಂದ ಗೆದ್ದು ಬೀಗಿತು. ಮುಂಬೈ ಸತತ 2ನೇ ಸೋಲಿನ ಅವಮಾನಕ್ಕೆ ಸಿಲುಕಿತು.
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆತಿಥೇಯ ಸನ್ರೈಸರ್ಸ್ ಹೈದರಾಬಾದ್ ವಿಸ್ಫೋಟಕ ಬ್ಯಾಟಿಂಗ್ ಮೂಲಕ ನಿಗದಿತ 20 ಓವರ್ಗಳಲ್ಲಿ ಕೇವಲ 3 ವಿಕೆಟ್ಗೆ 277 ರನ್ ಬಾರಿಸಿತು. ಈ ದೊಡ್ಡ ಮೊತ್ತವನ್ನು ಅಷ್ಟೇ ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಹೋದ ಮುಂಬೈ ಅಂತಿಮವಾಗಿ 5 ವಿಕೆಟ್ಗೆ 246 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಒಟ್ಟಾರೆಯಾಗಿ ಈ ಪಂದ್ಯದಲ್ಲಿ 523 ರನ್ ದಾಖಲಾಯಿತು. ಇದು ಐಪಿಎಲ್ನಲ್ಲಿ 2 ತಂಡಗಳು ಸೇರಿ ಬಾರಿಸಿದ ಗರಿಷ್ಠ ಮೊತ್ತದ ದಾಖಲೆ. ಈ ಹಿಂದೆ 2010ರಲ್ಲಿ ಚೆನ್ನೈ ಮತ್ತು ಕೆಕೆಆರ್ ನಡುವಣ ಪಂದ್ಯದಲ್ಲಿ 469 ರನ್ ಹರಿದು ಬಂದಿತ್ತು.
ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಮುಂಬೈಗೆ ಆರಂಭಿಕರಾದ ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಉತ್ತಮ ಅಡಿಪಾಯ ನಿರ್ಮಿಸಿದರು. ಇವರಿಬ್ಬರ ಬ್ಯಾಟಿಂಗ್ ಆರ್ಭಟದಿಂದ ತಂಡ ಕೇವಲ ಮೂರು ಓವರ್ಗೆ ವಿಕೆಟ್ ನಷ್ಟವಿಲ್ಲದೆ 50 ರನ್ ಕಲೆಹಾಕಿತು.
ಆದರೆ ರೋಹಿತ್ 26 ರನ್ ಗಳಿಸಿ ನಾಯಕ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರು. ಇಶಾನ್ ಕಿಶನ್ 13 ಎಸೆತಗಳಿಂದ 34 (4 ಸಿಕ್ಸರ್, 3 ಬೌಂಡರಿ) ರನ್ ಬಾರಿಸಿದರು. ಬಳಿಕ ಬಂದ ನಮನ್ ಧೀರ್ ಮತ್ತು ತಿಲಕ್ ವರ್ಮ ಕೂಡ ಬಿರುಸಿನ ಆಟವಾಡಿ ತಂಡದ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಪಟ್ಟರು. ಮುಂಬೈ 10 ಓವರ್ಗೆ 140 ರನ್ ಗಡಿ ದಾಡಿದ ವೇಳೆ ಈ ಬೃಹತ್ ಮೊತ್ತವನ್ನು ಕೂಡ ಚೇಸಿಂಗ್ ಮಾಡಿ ಗೆಲ್ಲುವ ಸೂಚನೆ ನೀಡಿತು. ಆದರೆ ಉಭಯ ಆಟಗಾರರ ವಿಕೆಟ್ ಪತನದ ಬಳಿಕ ಹೈದರಾಬಾದ್ ಬೌಲರ್ಗಳು ಲಯಬದ್ಧ ಬೌಲಿಂಗ್ ನಡೆಸಿ ಪಂದ್ಯವನ್ನು ಹಿಡಿತಕ್ಕೆ ತಂದರು.
The moment when @SunRisers created HISTORY!
Final over flourish ft. Heinrich Klaasen 🔥
Head to @JioCinema and @StarSportsIndia to watch the match LIVE#TATAIPL | #SRHvMI pic.twitter.com/QVERNlftkb
— IndianPremierLeague (@IPL) March 27, 2024
Sunrisers Hyderabad (20 ovs maximum)
BATTING | R | B | M | 4s | 6s | SR | ||
Mayank Agarwal | c David b Pandya | 11 | 13 | 19 | 1 | 0 | 84.61 | |
Travis Head | c Naman Dhir b Coetzee | 62 | 24 | 39 | 9 | 3 | 258.33 | |
Abhishek Sharma | c Naman Dhir b Chawla | 63 | 23 | 36 | 3 | 7 | 273.91 | |
Aiden Markram | not out | 42 | 28 | 59 | 2 | 1 | 150.00 | |
Heinrich Klaasen † | not out | 80 | 34 | 43 | 4 | 7 | 235.29 | |
Extras | (b 4, lb 1, nb 2, w 12) | 19 | ||||||
TOTAL | 20 Ov (RR: 13.85) | 277/3 | ||||||
Fall of wickets: 1-45 (Mayank Agarwal, 4.1 ov), 2-113 (Travis Head, 7.5 ov), 3-161 (Abhishek Sharma, 10.6 ov) • DRS |
BOWLING | O | M | R | W | ECON | 0s | 4s | 6s | WD | NB |
Kwena Maphaka | 4 | 0 | 66 | 0 | 16.50 | 7 | 7 | 5 | 3 | 0 |
Hardik Pandya | 4 | 0 | 46 | 1 | 11.50 | 5 | 5 | 2 | 0 | 0 |
Jasprit Bumrah | 4 | 0 | 36 | 0 | 9.00 | 4 | 2 | 1 | 1 | 1 |
Gerald Coetzee | 4 | 0 | 57 | 1 | 14.25 | 3 | 4 | 3 | 2 | 1 |
Piyush Chawla | 2 | 0 | 34 | 1 | 17.00 | 1 | 0 | 4 | 0 | 0 |
Shams Mulani | 2 | 0 | 33 | 0 | 16.50 | 1 | 1 | 3 | 2 | 0 |
Mumbai Indians (T: 278 runs from 20 ovs)
BATTING | R | B | M | 4s | 6s | SR | ||
Rohit Sharma | c Abhishek Sharma b Cummins | 26 | 12 | 20 | 1 | 3 | 216.66 | |
Ishan Kishan † | c Markram b Shahbaz Ahmed | 34 | 13 | 14 | 2 | 4 | 261.53 | |
Naman Dhir | c Cummins b Unadkat | 30 | 14 | 35 | 2 | 2 | 214.28 | |
Tilak Varma | c Agarwal b Cummins | 64 | 34 | 49 | 2 | 6 | 188.23 | |
Hardik Pandya (c) | c †Klaasen b Unadkat | 24 | 20 | 40 | 1 | 1 | 120.00 | |
Tim David | not out | 42 | 22 | 29 | 2 | 3 | 190.90 | |
Romario Shepherd | not out | 15 | 6 | 7 | 2 | 1 | 250.00 | |
Extras | (b 1, lb 4, nb 1, w 5) | 11 | ||||||
TOTAL | 20 Ov (RR: 12.30) | 246/5 | ||||||
Fall of wickets: 1-56 (Ishan Kishan, 3.2 ov), 2-66 (Rohit Sharma, 4.3 ov), 3-150 (Naman Dhir, 10.4 ov), 4-182 (Tilak Varma, 14.1 ov), 5-224 (Hardik Pandya, 17.6 ov) • DRS |
BOWLING | O | M | R | W | ECON | 0s | 4s | 6s | WD | NB |
Bhuvneshwar Kumar | 4 | 0 | 53 | 0 | 13.25 | 7 | 3 | 5 | 0 | 0 |
Jaydev Unadkat | 4 | 0 | 47 | 2 | 11.75 | 6 | 4 | 3 | 2 | 0 |
Shahbaz Ahmed | 3 | 0 | 39 | 1 | 13.00 | 5 | 1 | 4 | 0 | 0 |
Pat Cummins | 4 | 0 | 35 | 2 | 8.75 | 7 | 1 | 2 | 1 | 0 |
Umran Malik | 1 | 0 | 15 | 0 | 15.00 | 2 | 0 | 2 | 1 | 0 |
Mayank Markande | 4 | 0 | 52 | 0 | 13.00 | 5 | 3 | 4 | 1 | 1 |