October 5, 2024

ಲೋಕಸಭೆ ಚುನಾವಣೆಗೆ  ಕಾಂಗ್ರೇಸ್ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಚಾರ ಕಾರ್ಯ ಆರಂಭಿಸಿದ ದಿನವೇ ನಾಟಕೀಯ ಪ್ರಸಂಗಕ್ಕೆ ಸಾಕ್ಷಿಯಾಯಿತು.

ಇಂದು ಚಿಕ್ಕಮಗಳೂರು ಎ.ಐ.ಟಿ. ಸಭಾಂಗಣದಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆಯವರ ಸಮ್ಮುಖದಲ್ಲಿ ಜಿಲ್ಲೆಯ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶ ಏರ್ಪಡಿಸಲಾಗಿತ್ತು.  ಜಯಪ್ರಕಾಶ್ ಹೆಗಡೆ ಸುದ್ದಿಗೋಷ್ಠಿ ಮುಗಿಸಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ವೇದಿಕೆ ಏರಲು ನಿರಾಕರಿಸಿದ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಸಭಿಕರ ಮಧ್ಯದಲ್ಲಿ ಕುಳಿತು ತಮ್ಮ ಅಸಮಾಧಾನ ಹೊರ ಹಾಕಿದರು.

ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಕರೆದರೂ ಒಲ್ಲೆ ಎಂದು ವೇದಿಕೆಯೇರಲು ನಿರಾಕರಿಸಿದರು.

ಕೊನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ. ಜಾರ್ಜ್ ಅವರೇ ಗಾಯತ್ರಿ ಅವರು ಕುಳಿತ್ತಿದ್ದ ಸ್ಥಳಕ್ಕೆ ತೆರಳಿ ತಪ್ಪು ಸಂದೇಶಕ್ಕೆ ಅವಕಾಶ ಕೊಡದೆ ವೇದಿಕೆಗೆ ಬರುವಂತೆ ವಿನಂತಿಸಿ ಮನವೊಲಿಸಿ ಕರೆ ತರಬೇಕಾಯಿತು.

ಪಕ್ಷದ ಹಿರಿಯ ಮುಖಂಡರು ಮತ್ತು ಮಾಜಿ ವಿಧಾನಪರಿಷತ್ ಸದಸ್ಯರಾಗಿರುವ ಗಾಯತ್ರಿ ಶಾಂತೇಗೌಡರ ಇಂದಿನ ವರ್ತನೆಯೂ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಅಚ್ಚರಿ ಉಂಟುಮಾಡಿತು. ಸಭೆಯ ಆರಂಭದಲ್ಲಿಯೇ ನಡೆದ ನಾಟಕೀಯ ಬೆಳವಣಿಗೆಯಿಂದ ಕಾರ್ಯಕರ್ತರು ಕೆಲ ಹೊತ್ತು ತಬ್ಬಿಬ್ಬಾದರು. ಗಾಯತ್ರಿಯವರ ಇಂತಹ ಅಸಮಧಾನದ ವರ್ತನೆಗೆ ಕಾರಣವೇನು ? ಎಂಬುದನ್ನು ಅರಿಯದೇ ಕಾರ್ಯಕರ್ತರು ಮುಖಂಡರಲ್ಲಿ ಪ್ರಶ್ನಾರ್ಥಕ ಭಾವನೆ ಮೂಡಿತ್ತು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ  ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಟೊಂಕ ಕಟ್ಟಿ  ಶ್ರಮಿಸಿದ್ದ ತಮ್ಮನ್ನು ಮೂಲೆಗುಂಪು ಮಾಡಲಾಗಿದೆ ಎಂದು ಗಾಯತ್ರಿ ಶಾಂತೇಗೌಡ ಅವರು ಅಸಮಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ರಾಜ್ಯ ಸರ್ಕಾರ ನಿಗಮ ಮಂಡಳಿಗಳಿಗೆ ನೇಮಕ ಮಾಡುವಾಗ ಗಾಯತ್ರಿ ಶಾಂತೇಗೌಡ ಅವರನ್ನು ಉಪೇಕ್ಷೆ ಮಾಡಿದ್ದು, ಇದು ಅವರ ಬೆಂಬಲಿಗರ ಅಸಮಧಾನಕ್ಕೂ ಕಾರಣವಾಗಿದೆ ಎನ್ನಲಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯಿಂದ ಮೂರು ಮಂದಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ಮಾಡಿಕೊಟ್ಟಿದ್ದು, ರಾಜ್ಯದಲ್ಲಿ ಸರ್ಕಾರ ಬಂದು ಒಂದು ವರ್ಷವಾದರೂ ಗಾಯತ್ರಿ ಶಾಂತೇಗೌಡ ಅವರನ್ನು ಯಾವುದೇ ಹುದ್ದೆಗೆ ಪರಿಗಣಿಸಿಲ್ಲ. ಇದು ಸಹಜವಾಗಿಯೇ ಅವರಲ್ಲಿ ಅಸಮಧಾನ ಉಂಟುಮಾಡಿದೆ ಎನ್ನಲಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ