October 5, 2024

ಪೊಲೀಸ್ ಅಧಿಕಾರಿ ಎಂದು ಹೇಳಿ ಮಹಿಳೆಯೊಬ್ಬರು ಹಲವರಿಗೆ ವಂಚಿಸಿರುವ ಪ್ರಕರಣ ಹಾಸನ ನಗರದಲ್ಲಿ ನಡೆದಿದೆ.  ಹಾಸನದ ವಿಜಯನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ ಲಕ್ಕನಹಳ್ಳಿ ಗ್ರಾಮದ ನಿವೇದಿತಾ. ಎಂ ವಂಚಕಿಯಾಗಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.

ಆರೋಪಿ ನಿವೇದಿತಾ ಪೊಲೀಸ್ ಅಧಿಕಾರಿಯೆಂದು ಬೆದರಿಸಿ ಕವನ ಎಂಬುವರಿಂದ ಚಿನ್ನ ಹಾಗೂ ಹಣವನ್ನು ವಸೂಲಿ ಮಾಡಿದ್ದ ಪ್ರಕರಣದಿಂದ ಆಕೆಯ ವಂಚನೆಯ ಜಾಲ ಬೆಳಕಿಗೆ ಬಂದಿದೆ. ಪ್ರಕರಣವೊಂದರಲ್ಲಿ ತಾನು ಪೊಲೀಸ್ ಅಧಿಕಾರಿ ಎಂದು ನಟಿಸಿದ್ದ ನಿವೇದಿತಾ ಬಗ್ಗೆ ಅನುಮಾನ ಬಂದ ಅವರು ಪೊಲೀಸರಿಗೆ ದೂರು ನೀಡಿದ ಬಳಿಕ ಆಕೆಯ ವಂಚನೆ ಬಯಲಾಗಿದೆ. ನಿವೇದಿತಾ ಇದೇ ರೀತಿ ಇನ್ನೂ ಹಲವಾರು ಮಂದಿಗೆ ಮೋಸ ಮಾಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಮೋಸಕ್ಕೆ ಒಳಗಾದ ಕವನ ಅವರು ನಾಲ್ಕು ತಿಂಗಳ ಹಿಂದೆ ಹಾಸನ ಸಮೀಪದ ಅಗಲಹಳ್ಳಿ ಗ್ರಾಮದ ಸುನೀಲ್ ಎಂಬುವವರೊಂದಿಗೆ ಮದುವೆಯಾಗಿದ್ದರು. ಆದರೆ, ಸಂಸಾರದಲ್ಲಿ ಬಿರುಕು ಮೂಡಿದ್ದ ಕಾರಣ ತವರು ಮನೆಗೆ ವಾಪಾಸ್ಸಾಗಿದ್ದರು. ಈ ವೇಳೆ ತಮ್ಮ ಸಮಸ್ಯೆ ಪರಿಹಾರ ಮಾಡುವಂತೆ ಪೊಲೀಸ್ ಅಧಿಕಾರಿ ಎಂದು ಪೋಸ್ ಕೊಟ್ಟಿದ್ದ ವಂಚಕಿ ನಿವೇದಿತಾ ಬಳಿ ಸುನೀಲ್ ಹೋಗಿದ್ದರು.

ಸುನೀಲ್​ ಸಂಸಾರದ ಸಮಸ್ಯೆ ತಿಳಿದುಕೊಂಡ ನಿವೇದಿತಾ ಪೊಲೀಸ್ ಯೂನಿಫಾರ್ಮ್​ನಲ್ಲಿ ಸುನಿಲ್ ಹೆಂಡತಿ ಕವನ ಅವರ ಮನೆಗೆ ದಾಳಿ ಮಾಡಿದ್ದಳು. ತಾನು ಪೊಲೀಸ್ ಅಧಿಕಾರಿಯಾಗಿದ್ದು ವಿಚಾರಣೆಗಾಗಿ ಬಂದಿದ್ದೇನೆ ಎಂದು ಕವನ ಅವರ ಮನೆಯವರಿಗೆ ಬೆದರಿಕೆ ಹಾಕಿದ್ದಳು.

ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಕೇಸು ಹಾಕುತ್ತೇನೆ ಎಂದು ಕವನ ಅವರನ್ನು ಹೆದರಿಸಿ ಮೊಬೈಲ್ ಪೋನ್ ಕಿತ್ತುಕೊಂಡಿದ್ದಳು. ಅದೇ ರೀತಿ ಸುನೀಲ್‌ನನ್ನು ಕವನ ಅವರ ಮನೆಗೆ ಕರೆದುಕೊಂಡು ಬಂದು ಅವರ ಕುಟುಂಬಕ್ಕೂ ಬೆದರಿಕೆ ಹಾಕಿದ್ದಳು. ತಕ್ಷಣವೇ ಡಿವೋರ್ಸ್​ ಕೊಡುವಂತೆ ಬೆದರಿಕೆ ಒಡ್ಡಿದ್ದಳು. ಹೆದರಿದ್ದ ಕವನ 20 ಗ್ರಾಂ ಚಿನ್ನದ ನಕ್ಲೆಸ್, 10 ಗ್ರಾಂ ಚಿನ್ನದ ಉಂಗುರ, 2000 ಸಾವಿರ ನಗದು ನೀಡಿದ್ದರು.

ಆದರೆ ನಂತರ ಈ ಬಗ್ಗೆ ಅನುಮಾನಗೊಂಡ ಕವನ ಅವರ ಕುಟುಂಬಸ್ಥರು ಹಾಸನದ ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಿಸಿಕೊಂಡ ಪೊಲೀಸರು ನಿವೇದಿತಾಳನ್ನು ಬಂಧಿಸಿದಾಗ ಆಕೆಯ ವಂಚನೆಯ ಕೃತ್ಯಗಳು ಬೆಳಕಿಗೆ ಬಂದಿವೆ.

ನಿವೇದಿತಾ ಬಂಧಿಸಿ ತನಿಖೆ ನಡೆಸಿದಾಗ ಆಕೆಯ ವಂಚನೆಯ ಹಲವಾರು ಮುಖಗಳು ಬಹಿರಂಗಗೊಂಡಿವೆ. ತಾನು ಪೊಲೀಸ್ ಅಧಿಕಾರಿ ಎಂದು ಹಲವರಿಗೆ ನಿವೇದಿತಾ ವಂಚಿಸಿದ್ದಳು. ನಿವೇದಿತಾ ಪೊಲೀಸ್ ಅಧಿಕಾರಿ ಎಂದು ನಂಬಿದ್ದ ಹಲವಾರು ಶಾಲೆಗಳ ಆಡಳಿತ ಮಂಡಳಿಗಳು ಅವರನ್ನು ತಮ್ಮಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರು. ಅಂಥ ಶಾಲೆಗಳಿಗೆ ವಂಚಕಿ ನಿವೇದಿತಾ ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲೆ ತೆರಳಿ ಭಾಷಣ ಮಾಡಿದ್ದಳು ಎಂದು ತಿಳಿದುಬಂದಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ