October 5, 2024

ಲೋಕಸಭಾ ಚುನಾವಣೆಯಲ್ಲಿ ಬಿ.ಜೆ.ಪಿ.ಗೆ ಮತನೀಡುವ ಮೂಲಕ ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿ ಆಗಲು ಸಹಕರಿಸಬೇಕು ಎಂದು   ಉಡುಪಿ ಚಿಕ್ಕಮಗಳೂರು ಬಿಜೆಪಿ ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಶುಕ್ರವಾರ ಮೂಡಿಗೆರೆ ಬಿ.ಜೆ.ಪಿ. ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ. ವಿಶ್ವದಲ್ಲಿ ಚೀನಾ ಸೇರಿದಂತೆ ಯಾವುದೆ ತಂಟೆಕೋರ ದೇಶಗಳಿಗೆ ಬುದ್ದಿ ಕಲಿಸಲು ಮೋದಿ ಯವರಿಂದ ಮಾತ್ರ ಸಾಧ್ಯ. ಇವರ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಹೆಗಲಾಗಿ.  ನಾನು ಸಂಸದನಾದ ಮೇಲೆ ಕ್ಷೇತ್ರ ಕಲ್ಯಾಣ ಮಾಡುವುದೆ ನನ್ನ ಗುರಿಯಾಗಿದೆ. ನಾನು ನನ್ನ ಸಾರ್ವಜನಿಕ ಜೀವನದಲ್ಲಿ ಶುಭ್ರವಾದ ನಡವಳಿಕೆಯನ್ನು ಮೈಗೂಡಿಸಿಕೊಂಡು ಬಂದಿದ್ದೇನೆ. ಮುಂದೆಯೂ ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದಿದ್ದಾರೆ.

ಪಾಕಿಸ್ಥಾನದ ಪರ, ಭ್ರಷ್ಟಾಚಾರದ ಪರ, ಕೋಮು ಪರ, ಸುಳ್ಳನ್ನೆ ಸತ್ಯ ಮಾಡುತ್ತಿರುವ, ರಾಜ್ಯದ ಬೋಕ್ಕಸವನ್ನು ಖಾಲಿ ಮಾಡಿ ದಿವಾಳಿ ಮೂಲಕ ಅದೋಗತಿಗೆ   ತಂದಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ ಒದ್ದೋಡೊಸುವುದೆ ನಮ್ಮ ಗುರಿಯಾಗಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.  ಪ್ರಾಣೇಶ್ ಮಾತನಾಡಿ.  ನಮ್ಮ ಅಭ್ಯರ್ಥಿ ಬಡವರ ಪರ, ಭ್ರಷ್ಟಾಚಾರ ಮುಕ್ತ, ತತ್ವ ಸಿದ್ದಾಂತಗಳಿಗೆ  ಬದ್ದವಾದ ವ್ಯಕ್ತಿ. ಎಲ್ಲರಿಗು ಸಲ್ಲುವವರಾಗಿದ್ದು. ಅವರನ್ನು ಗೆಲ್ಲಿಸೋಣ.

ಬಡವರ ಉದ್ದಾರ. ಉಚಿತ ಗ್ಯಾಸ್. ಸರ್ವ ಶಿಕ್ಷಣ ಅಭಿಯಾನ. ಸರ್ವ ಋತು ರಸ್ತೆ. ಎಲ್ಲವನ್ನು ನೀಡಿದ ವಾಜಿಪೇಯಿ ಸರಕಾರ ಸೋತು ಹೋಯಿತು ಇದನ್ನು ನೆನಪಿಟ್ಟುಕೊಂಡು ಅತಿಯಾದ ಆತ್ಮವಿಶ್ವಾಸದಿಂದ ಮೈಮರೆಯದೇ ಚುನಾವಣೆಯಲ್ಲಿ ಗೆಲುವಿಗಾಗಿ ಶ್ರಮಿಸೋಣ ಎಂದರು.

ಇಂದು ನನಗೆ ಮತ ನೀಡಿ. ನಾಳೆ ನೀವು ಮತ ಕೇಳಲು ಹೋದಾಗ ತಲೆ ಎತ್ತಿ ಮತದಾರರಿಂದ ಮತ ಕೇಳುವಂತಹ ಕೆಲಸ ಮಾಡುತ್ತೆನೆ ಅಂದಿದ್ದರು ಮೋದಿಜಿ ಅದರಂತೆ ರಾಮ ಮಂದಿರ ನಿರ್ಮಾಣವಾಗಿದೆ. ವಿಶ್ವದಲ್ಲೆ ಭಾರತವನ್ನು ಬಲಿಷ್ಟ ರಾಷ್ಟ್ರ ನಿರ್ಮಾಣ ಮಾಡಿದ್ದಾರೆ. ಮೋದಿಜಿಯವರು 140 ಕೋಟಿ ಜನರನ್ನು ನನ್ನ ಪರಿವಾರ ಎಂದು ತಿಳಿದು ಕಾರ್ಯ ಮಾಡಿದ್ದಾರೆ.  ಇದರ ಮೂಲಕ ಮತ ಕೇಳೋಣ  ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾದ್ಯಕ್ಷ ದೇವರಾಜ್ ಶೆಟ್ಟಿ, ಮೂಡಿಗೆರೆ ಮಂಡಲ ಅಧ್ಯಕ್ಷ ಟಿ.ಎಂ. ಗಜೇಂದ್ರ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ, ಜಿಲ್ಲಾ ಕಾರ್ಯದರ್ಶಿ ಜೆ.ಎಸ್.ರಘು, ಮುಖಂಡರಾದ ಎಂ.ಆರ್. ಜಗದೀಶ್, ದೀಪಕ್ ದೊಡ್ಡಯ್ಯ ಸೇರಿದಂತೆ ಪಕ್ಷದ ಹಿರಿಯ ಮುಖಂಡರು, ವಿವಿಧ ಮೋರ್ಚಾಗಳ ಅಧ್ಯಕ್ಷರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ