October 5, 2024

ದೇಶದಲ್ಲಿ ಒಂದೆಡೆ ಲೋಕಸಭಾ ಚುನಾವಣೆ ಕಾವು ಏರುತ್ತಿರುವಂತೆಯೇ ಇತ್ತ ಕ್ರಿಕೆಟ್ ಪ್ರಿಯರಿಗೆ ಐ.ಪಿ.ಎಲ್. ರಸದೌತಣ ಸಜ್ಜಾಗಿದೆ.

ಇಂಡಿಯನ್ ಪ್ರಿಮೀಯರ್ ಲೀಗ್ (ಐ.ಪಿ.ಎಲ್.) ನ 17ನೇ ಆವೃತ್ತಿಯ ಪಂದ್ಯಗಳು ಇಂದಿನಿಂದ ಪ್ರಾರಂಭವಾಗುತ್ತಿವೆ. ಇನ್ನೂ ಎರಡು ತಿಂಗಳು ವಿಶ್ವದ ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಕ್ರಿಕೆಟ್ ಪ್ರದರ್ಶನದ ಮನೋರಂಜನೆ ದೊರೆಯಲಿದೆ.

ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಚೆನೈ ಸೂಪರ್ ಕಿಂಗ್ಸ್ ತಂಡವನ್ನು ನಮ್ಮ ಬೆಂಗಳೂರು ತಂಡ ಎದುರಿಸಲಿದೆ. ಇಂದು ರಾತ್ರಿ 7 ಗಂಟೆಯಿಂದ ಚೆನೈನಲ್ಲಿ ಉದ್ಘಾಟನಾ ಪಂದ್ಯ ನೆರವೇರಿಲಿದೆ.

ವಿಶ್ವದ ಶ್ರೇಷ್ಠ ಕ್ರಿಕೆಟ್ ಪಟುಗಳ ಸಮ್ಮಿಲನವಾಗಿರುವ ಐ.ಪಿ.ಎಲ್. ಜಗತ್ತಿನ ಗಮನ ಸೆಳೆದಿರುವ ಕ್ರಿಕೆಟ್ ಲೀಗ್ ಆಗಿ ಗುರುತಿಸಿಕೊಂಡಿದೆ.

ಇದುವರೆಗಿನ 16 ಆವೃತ್ತಿಗಳಲ್ಲಿ ಬಹುತೇಕ ಚೆನೈ ಮತ್ತು ಮುಂಬೈ ತಂಡಗಳು ತಮ್ಮ ಪಾರಮ್ಯ ಮೆರೆದಿವೆ.

ಇದೂವರೆಗೂ ಐಪಿಎಲ್ ಟ್ರೋಪಿ ಗೆಲ್ಲಲ್ಲು ಆರ್.ಸಿ.ಬಿ. ತಂಡಕ್ಕೆ ಸಾಧ್ಯವಾಗಿಲ್ಲ. ವಿರಾಟ್ ಕೊಹ್ಲಿ ನೇತೃತ್ವದ ತಂಡ ಈ ಬಾರಿಯಾದರೂ ಟ್ರೋಪಿಗೆ ಮುತ್ತಿಡಬಹುದೇ ಎಂಬುದು ಕೋಟ್ಯಾಂತರ ಕ್ರಿಕೆಟ್ ಪ್ರಿಯರ ನಿರೀಕ್ಷೆಯಾಗಿದೆ.

ಈ ನಡುವೆ ಐಪಿಎಲ್ ನ ಯಶಸ್ವಿ ನಾಯಕ ಎನಿಸಿಕೊಂಡಿರುವ ಮಹೇಂದ್ರ ಸಿಂಗ್ ದೋನಿ ಚೆನೈ ನಾಯಕತ್ವವನ್ನು ಕೊನೆಯ ಕ್ಷಣದಲ್ಲಿ ತೊರೆದಿದ್ದು, ಋತುರಾಜ್ ಗಾಯಕ್ವಾಡ್ ತಂಡವನ್ನು ಮುನ್ನಡೆಸಲಿದ್ದಾರೆ.

ಐಪಿಎಲ್ -2024 ರ ಮೊದಲ ಕೆಲ ಪಂದ್ಯಗಳ ವೇಳಾಪಟ್ಟಿ ಹೀಗಿದೆ

ಇದುವರೆಗಿನ IPL ವಿಜೇತರು ಮತ್ತು ರನ್ನರ್-ಅಪ್‌ಗಳ ಪಟ್ಟಿ 

ಐಪಿಎಲ್ ವರ್ಷ ಐಪಿಎಲ್ ವಿಜೇತ ಕ್ಯಾಪ್ಟನ್ ರನ್ನರ್ ಅಪ್
2023 ಚೆನ್ನೈ ಸೂಪರ್ ಕಿಂಗ್ಸ್ (CSK) ಮಹೇಂದ್ರ ಸಿಂಗ್ ಧೋನಿ ಗುಜರಾತ್ ಟೈಟಾನ್ಸ್ (ಜಿಟಿ)
2022 ಗುಜರಾತ್ ಟೈಟಾನ್ಸ್ (ಜಿಟಿ) ಹಾರ್ದಿಕ್ ಪಾಂಡ್ಯ ರಾಜಸ್ಥಾನ್ ರಾಯಲ್ಸ್ (RR)
2021 ಚೆನ್ನೈ ಸೂಪರ್ ಕಿಂಗ್ಸ್ (CSK) ಮಹೇಂದ್ರ ಸಿಂಗ್ ಧೋನಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್)
2020 ಮುಂಬೈ ಇಂಡಿಯನ್ಸ್ (MI) ರೋಹಿತ್ ಶರ್ಮಾ ದೆಹಲಿ ಕ್ಯಾಪಿಟಲ್ಸ್ (DC)
2019 ಮುಂಬೈ ಇಂಡಿಯನ್ಸ್ (MI) ರೋಹಿತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್ (CSK)
2018 ಚೆನ್ನೈ ಸೂಪರ್ ಕಿಂಗ್ಸ್ (CSK) ಮಹೇಂದ್ರ ಸಿಂಗ್ ಧೋನಿ ಸನ್‌ರೈಸರ್ಸ್ ಹೈದರಾಬಾದ್ (SRC)
2017 ಮುಂಬೈ ಇಂಡಿಯನ್ಸ್ (MI) ರೋಹಿತ್ ಶರ್ಮಾ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ (RPS)
2016 ಸನ್‌ರೈಸರ್ಸ್ ಹೈದರಾಬಾದ್ (SRH) ಡೇವಿಡ್ ವಾರ್ನರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)
2015 ಮುಂಬೈ ಇಂಡಿಯನ್ಸ್ (MI) ರೋಹಿತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್ (CSK)
2014 ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಗೌತಮ್ ಗಂಭೀರ್ ಕಿಂಗ್ಸ್ XI ಪಂಜಾಬ್ (KXIP)
2013 ಮುಂಬೈ ಇಂಡಿಯನ್ಸ್ (MI) ರಿಕಿ ಪಾಂಟಿಂಗ್ / ರೋಹಿತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್ (CSK)
2012 ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಗೌತಮ್ ಗಂಭೀರ್ ಚೆನ್ನೈ ಸೂಪರ್ ಕಿಂಗ್ಸ್ (CSK)
2011 ಚೆನ್ನೈ ಸೂಪರ್ ಕಿಂಗ್ಸ್ (CSK) ಮಹೇಂದ್ರ ಸಿಂಗ್ ಧೋನಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)
2010 ಚೆನ್ನೈ ಸೂಪರ್ ಕಿಂಗ್ಸ್ (CSK) ಮಹೇಂದ್ರ ಸಿಂಗ್ ಧೋನಿ ಮುಂಬೈ ಇಂಡಿಯನ್ಸ್ (MI)
2009 ಡೆಕ್ಕನ್ ಚಾರ್ಜರ್ಸ್ (DEC) ಆಡಮ್ ಗಿಲ್‌ಕ್ರಿಸ್ಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)
2008 ರಾಜಸ್ಥಾನ್ ರಾಯಲ್ಸ್ (RR) ಶೇನ್ ವಾರ್ನ್ ಚೆನ್ನೈ ಸೂಪರ್ ಕಿಂಗ್ಸ್ (CSK)

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ