October 5, 2024

ಒಣ ಭೂಮಿಯ ತೋಟಗಾರಿಕಾ ಬೆಳೆ ಆದಂತಹ ಡ್ರ್ಯಾಗನ್ ಫ್ರೂಟ್ ಅನ್ನು ಹೇಗೆ ಕಡಿಮೆ ಖರ್ಚಿನಲ್ಲಿ ಬೆಳೆದು ಉತ್ತಮವಾಗಿ ಗರಿಷ್ಠ ಲಾಭವನ್ನು ಗಳಿಸಬಹುದು ಎಂದು ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರೈತರಿಗೆ ಮಾಹಿತಿ ನೀಡಿದರು.

ಚಿಕ್ಕಮಗಳೂರು ಜಿಲ್ಲೆ ಹುಲಿಕೆರೆಯಲ್ಲಿ  ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ,ಅಡಿಯಲ್ಲಿ ಬರುವ ತೋಟಗಾರಿಕೆ ಮಹಾವಿದ್ಯಾಲಯ ಮೂಡಿಗೆರೆ, ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರ ಇದರ ಅಂಗವಾಗಿ  ಒಣ ಭೂಮಿಯಲ್ಲಿ ತೋಟಗಾರಿಕೆ , ಈ ವಿಷಯವನ್ನು ಕುರಿತು ಗುಂಪು ಚರ್ಚೆ ಹಮ್ಮಿಕೊಳ್ಳಲಾಗಿತ್ತು.

ಡ್ರಾಗನ್ ಫ್ರೂಟ್ ಸದಾ ಬೇಡಿಕೆ ಇರುವ ಹಣ್ಣಾಗಿದೆ. ಇದು ಕಡಿಮೆ ನೀರಿನ್ನು ಬಳಸಿ ಹುಲುಸಾಗಿ ಬೆಳೆಯುವ ಬೆಳೆಯಾಗಿದೆ. ಇದು ಆರೋಗ್ಯಕ್ಕೂ ಉತ್ತಮವಾಗಿದೆ. ಇದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಮತ್ತು ಬೆಲೆ ಇದೆ. ಇದನ್ನು ಒಣಭೂಮಿಯಲ್ಲಿ ಮತ್ತು ಮಳೆಯಾಶ್ರಯದಲ್ಲಿ ಉತ್ತಮವಾಗಿ ಬೆಳೆಯಬಹುದು. ಇದರಿಂದ ರೈತರು ಲಾಭ ಗಳಿಸಬಹುದು ಎಂದು ರೈತರಿಗೆ ಮಾಹಿತಿ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ನೀರಾವರಿ ಸೌಲಭ್ಯ ಇಲ್ಲದೆ ಸಂಪೂರ್ಣವಾಗಿ ಮಳೆಯಶ್ರಿತವಾಗಿ ಬೆಳೆಯನ್ನು ಹೇಗೆ ಬೆಳೆಯಬಹುದು ಎಂದು ಮಾಹಿತಿ ನೀಡಲಾಯಿತು, ಹಾಗೂ ಒಣ ಭೂಮಿಯಲ್ಲಿ ಬೆಳೆಯಬಹುದಾದಂತಹ ಬೆಳೆಗಳ ಲಕ್ಷಣಗಳನ್ನು ತಿಳಿಸಲಾಯಿತು, ಒಣ ಭೂಮಿಯ ಕೃಷಿ ಸಮಸ್ಯೆಗಳು ಹಾಗೂ ಅದಕ್ಕೆ ತಕ್ಕ ಸೂಕ್ತ ಪರಿಹಾರಗಳು, ಸರ್ಕಾರದ ಕಡೆಯಿಂದ ಇರುವ ಸಹಾಯಗಳು, ಉತ್ತಮ ಗರಿಷ್ಠ ಬೆಲೆ ಪಡೆಯಲು ಬೆಳೆಯಬೇಕಾದಂತಹ ಬೆಳೆಗಳು, ಹೀಗೆ ಮುಂತಾದ ಮಾಹಿತಿಗಳನ್ನು ರೈತರಿಗೆ ನೀಡಲಾಯಿತು. ಒಣ ಭೂಮಿಯಲ್ಲಿ ಮಳೆಯಾಶ್ರೀತವಾಗಿ ಬೆಳೆಯಬಹುದಾದಂತಹ ಬೆಳೆಗಳ ಬಗ್ಗೆ ಮಾಹಿತಿ ನೀಡಲಾಯಿತು.

ಒಣ ಭೂಮಿಯಲ್ಲಿ ನೀರು ಸಂಗ್ರಹಣೆ ಮಾಡಲು ಕೃಷಿ ಹೊಂಡ ಗಳ ನಿರ್ಮಾಣ, ನೀರಿನ ಸಮಗ್ರ ನಿರ್ವಹಣೆಗೆ ,ಹನಿ ನೀರಾವರಿ, ತೇವಾಂಶವನ್ನು ಹಿಡಿದಿಡಲು ಮಲ್ಚಿಂಗ್ ಮಾಡುವುದು, ಹಸಿರೆಲೆ ಗೊಬ್ಬರದ ಗಿಡಗಳನ್ನು ಬೆಳೆಯುವುದು, ದನದ ಕೊಟ್ಟಿಗೆ ಗೊಬ್ಬರವನ್ನು ಹಾಕುವುದು, ನೆರಳು ಆಶ್ರಿತ ಮರಗಳನ್ನು ಬದುಗಳಲ್ಲಿ ಬೆಳೆಸುವುದು, ಗಾಳಿ ತಡೆಯುವಂತಹ ಮರಗಳನ್ನು ಬೆಳೆಸುವುದು, ಬೋರ್ವೆಲ್ ರಿಚಾರ್ಜ್ ಇತ್ಯಾದಿ…ಹೀಗೆ ಹಲವಾರು ರೀತಿಯಲ್ಲಿ ಮಣ್ಣಿನ ತೇವಾಂಶವನ್ನು ಹೇಗೆ ಕಾಪಾಡಿಕೊಳ್ಳುವುದು ಎಂದು ಮೂಡಿಗೆರೆ ಕಾಲೇಜಿನ ವಿದ್ಯಾರ್ಥಿನಿ ಚಿನ್ಮಯಿ ಅವರು ರೈತರಿಗೆ ಮನದಟ್ಟಾಗುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಊರಿನ ಪ್ರಗತಿಪರ ರೈತರು, ಊರಿನ ಗ್ರಾಮಸ್ಥರು, ಆಸಕ್ತಿ ಯುವ ಜನರು ಹಾಗೂ ಮಕ್ಕಳು ಎಲ್ಲರೂ ಪಾಲ್ಗೊಂಡಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ