October 5, 2024

ಐಪಿಎಲ್ ನಲ್ಲಿ ಪುರುಷರ ತಂಡ ಕಳೆದ 16 ವರ್ಷಗಳಿಂದ ಮಾಡಲಾಗದ ಸಾಧನೆಯನ್ನು ಮಹಿಳೆಯರ ತಂಡ ಸಾಕಾರಗೊಳಿಸಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಅಭಿಮಾನಿಗಳ ದಶಕಗಳ ಕನಸನ್ನು ಮಹಿಳಾ ತಂಡ ನಿಜವಾಗಿಸಿದೆ.    2008ರಲ್ಲಿ ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮೂಲಕ ಆರಂಭಗೊಂಡ ಫ್ರಾಂಚೈಸಿ ಮೊಟ್ಟ ಮೊದಲ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.   ಮಹಿಳೆಯರ ಪ್ರೀಮಿಯರ್ ಲೀಗ್​ನ (WPL 2024) ಎರಡನೇ ಆವೃತ್ತಿಯಲ್ಲಿ ಸ್ಮೃತಿ ಮಂಧಾನಾ ನೇತೃತ್ವದ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಆರ್​ಸಿಬಿ ಅಭಿಮಾನಿಗಳಿಗೆ ಸಮಾಧಾನ ಹೇಳಿದೆ.

ಮೊದಲ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್​ನಲ್ಲಿ ಆರ್​ಸಿಬಿ ತಂಡದ ಪ್ಲೇ ಆಫ್​ ಹಂತಕ್ಕೆ ಏರಲು ವಿಫಲಗೊಂಡಿತ್ತು. ಆದರೆ, ಎರಡನೇ ಆವೃತ್ತಿಯಲ್ಲಿ ಚಾಂಪಿಯನ್​ಪಟ್ಟಕ್ಕೇರಿದೆ.

ಆರ್​ಸಿಬಿ ಫ್ರಾಂಚೈಸಿ ಐಪಿಎಲ್​ ಕ್ರಿಕೆಟ್​ ಟೂರ್ನಿಯಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ. ವಿರಾಟ್​ ಕೊಹ್ಲಿ , ಎಬಿಡಿ ವಿಲಿಯರ್ಸ್​ ಹಾಗೂ ಕ್ರಿಸ್​ ಗೇಲ್, ಮ್ಯಾಕ್ಸ್ ವೆಲ್ ಅವರಂಥ ಆಟಗಾರರನ್ನು ಹೊಂದಿದ್ದ ತಂಡಕ್ಕೆ ಇದುವರೆಗೆ ಒಂದು ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ, ಮಹಿಳೆಯರ ತಂಡ ಗೆಲುವು ತಂದುಕೊಟ್ಟಿದೆ.

ಆರ್​ಸಿಬಿ ಪುರುಷರ ತಂಡವೂ  ಮೂರು ಬಾರಿ ಫೈನಲ್​ಗೇರಿ ರನ್ನರ್​ ಅಪ್​ ಪ್ರಶಸ್ತಿಗೆ ಸಮಾಧಾನಪಟ್ಟುಕೊಂಡಿತು. 2009, 2011 ಹಾಗೂ 2016ರಲ್ಲಿ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತ್ತು.

ಕನಸು ನನಸು ಮಾಡಿದ ಮಹಿಳೆಯರು

ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿ ಬಿ ಮಹಿಳೆಯರ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್​ಗಳಿಂದ ಸೋಲಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತೊಂದು ಬಾರಿ ನಿರಾಸೆ ಎದುರಿಸಿತು. ಕಳೆದ ಬಾರಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬಯಿ ವಿರುದ್ಧ ಸೋತು ರನ್ನರ್​ ಅಪ್​ ಸ್ಥಾನ ಪಡೆದುಕೊಂಡಿತು.

ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 18.3 ಓವರ್​ಗಳಲ್ಲಿ 113 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್​ಸಿಬಿ ತಂಡ 19.3 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು 115 ರನ್ ಬಾರಿಸಿ 8 ವಿಕೆಟ್​ ವಿಜಯ ಸಾಧಿಸಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಸ್ಮೃತಿ ಮಂಧಾನಾ 39 ಎಸೆತಗಳಲ್ಲಿ 31 ರನ್ ಗಳಿಸಿದರು. ಶೋಫಿಯಾ ಡಿವೈನ್ 27 ಎಸೆತಗಳಲ್ಲಿ 32 ರನ್ ಗಳಿಸಿದರು. ನಂತರ ಎಲ್ಲೀಸ್ ಫೆರಿ 35(37 ಎಸೆತ) ಮತ್ತು ರಿಚಾ ಘೋಷ್ 17 (14 ಎಸೆತ) ಕೊನೆಯ ಓವರ್ ನಲ್ಲಿ ತಂಡವನ್ನು ಸುರಕ್ಷಿತವಾಗಿ ಗೆಲುವಿನ ದಡ ಸೇರಿಸಿದರು.

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಭರ್ಜರಿ ಆರಂಭ ಪಡೆಯಿತು. ಕೇವಲ 7  ಓವರ್​ಗಳಲ್ಲಿ 64 ರನ್ ಬಾರಿಸಿತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 27 ಎಸೆಗಳಲ್ಲಿ 44 ರನ್ ಬಾರಿಸಿ ಮಿಂಚಿದರು. ಆದರೆ, ಅಬ್ಬರದ ಆಟ ಮುಂದುವರಿಸಲು ಹೋದ ಅವರು ಮೊಲಿನೆಕ್ಸ್ ಎಸೆತಕ್ಕೆ ಶ್ರೇಯಾಂಕ ಪಾಟೀಲ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆ ಬಳಿಕ ಡೆಲ್ಲಿ ಸತತವಾಗಿ ಎರಡು ವಿಕೆಟ್​ಗಳನ್ನು ಕಳೆದುಕೊಂಡಿತು. ಉತ್ತಮ ಫಾರ್ಮ್​ನಲ್ಲಿದ್ದ ಜೆಮಿಮಾ ರೋಡ್ರಿಗಸ್​ ಹಾಗೂ ಅಲೈಸ್​ ಕಾಪ್ಸಿ ಶೂನ್ಯಕ್ಕೆ ಔಟಾದರು. ಮೊಲಿನೆಕ್ಸ್ ಒಂದೇ ಓವರ್​ನಲ್ಲಿ 3 ವಿಕೆಟ್​ ಪಡೆಯುವ ಮೂಲಕ ಡೆಲ್ಲಿ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು.

ಆರ್​ಸಿಬಿ ಪರ ಕನ್ನಡತಿ ಶ್ರೇಯಾಂಕ ಪಾಟೀಲ್​ 12 ರನ್ ನೀಡಿ 4 ವಿಕೆಟ್​ ಕಬಳಿಸಿದರೆ ಸೋಫಿ ಮೊಲಿನೆಕ್ಸ್​ 20 ರನ್​ ನೀಡಿ 3 ವಿಕೆಟ್​ ತಮ್ಮದಾಗಿಸಿಕೊಂಡರು. ಆಶಾ ಶೋಭನಾ ಕೂಡ 14 ರನ್​ಗೆ 2 ವಿಕೆಟ್​ ಉರುಳಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ