October 5, 2024

ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರ ನೇತೃತ್ವದ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬುದು ದೇಶದ ಜನರ ನಾಡಿಮಿಡಿತವಾಗಿದೆ. ಈ ನಿಟ್ಟಿನಲ್ಲಿ ಬಿ.ಜೆ.ಪಿ. ಕಾರ್ಯಕರ್ತರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಗೆಲುವಿನ ಬಗ್ಗೆ ಅತಿಯಾದ ಆತ್ಮವಿಶ್ವಾಸ ಬೇಡ, ಪ್ರತಿಹಂತದಲ್ಲೂ ಚುನಾವಣೆ ಗೆಲ್ಲಲು ಗರಿಷ್ಠ ಮಟ್ಟದ ಪ್ರಯತ್ನ ನಡೆಸಬೇಕು. 2004ರಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಮೈಮರೆತ ಪರಿಣಾಮ ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರ ಅಧಿಕಾರ ಕಳೆದುಕೊಳ್ಳುವಂತಾಗಿತ್ತು, ಹಾಗಾಗಿ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು ಎಂದು ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರು ಹೇಳಿದರು.

ಪಟ್ಟಣದ ಬಿ.ಜೆ.ಪಿ. ಕಛೇರಿ ಪಾಂಚಜನ್ಯದಲ್ಲಿ ಕಾರ್ಯಕರ್ತರ ಸಭೆಯನ್ನುಉದ್ದೇಶಿಸಿ ಅವರು ಮಾತನಾಡಿದರು. ಮೂಡಿಗೆರೆ ಮಂಡಲದ ಬಿ.ಜೆ.ಪಿ. ವಲಯದಲ್ಲಿ ಉಂಟಾಗಿರುವ ಗೊಂದಲವನ್ನು ಆದಷ್ಟು ಬೇಗ ನಿವಾರಿಸಿ ಲೋಕಸಭಾ ಚುನಾವಣೆಗೆ ಸಜ್ಜಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧ್ಯಕ್ಷರು ಗಮನಹರಿಸಬೇಕು. ಪಕ್ಷದೊಳಗೆ ಯಾವತ್ತು ಅಶಿಸ್ತನ್ನು ಸಹಿಸಲಾಗುವುದಿಲ್ಲ. ಪಕ್ಷದ ಕಛೇರಿಯನ್ನು ಗೌರವ ಭಾವದಿಂದ ಬಳಸಿಕೊಳ್ಳಬೇಕು. ನಮ್ಮಲ್ಲಿ ಯಾವುದೇ ಮನಸ್ತಾಪಗಳಿದ್ದರೂ ಒಂದೇ ಕುಟುಂಬದ ಸದಸ್ಯರಂತೆ ಸಮಸ್ಯೆಗಳನ್ನು ಕುಳಿತು ಬಗೆಹರಿಸಿಕೊಳ್ಳಬೇಕು, ಯುವಕರು ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಬಿ.ಜೆ.ಪಿ. ಪಕ್ಷ ಹಿರಿಯ ತ್ಯಾಗದಿಂದ ಕಟ್ಟಿ ಬೆಳೆಸಿರುವುದು, ಅದನ್ನು ಮನಗಂಡು ನಾವೆಲ್ಲಾ ಜವಾಬ್ದಾರಿಯಿಂದ ಮುನ್ನಡೆಯಬೇಕು ಎಂದರು.

ಬಿ.ಜೆ.ಪಿ. ಜಿಲ್ಲಾಧ್ಯಕ್ಷ ದೇವರಾಜು ಶೆಟ್ಟಿ ಮಾತನಾಡಿ ಇಂದು ನಿಗದಿಯಾಗಿದ್ದ ಮೂಡಿಗೆರೆ ಮಂಡಲ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಮುಂದೂಡಲಾಗಿದೆ. ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರ ನಿಗದಿತ ಕಾರ್ಯಕ್ರಮ ವ್ಯತ್ಯಯವಾಗಿದ್ದರಿಂದ ಪದಗ್ರಹಣ ಸಮಾರಂಭವನ್ನು ಮುಂದಿನ ಅವರ ದಿನಾಂಕ ಕೇಳಿ ನಿಗದಿ ಮಾಡಲಾಗುವುದು. ಈ ಬಾರಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಕನಿಷ್ಠ ಐದು ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲು ಕಾರ್ಯಕರ್ತರು ಶ್ರಮಿಸಬೇಕು. ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳಲ್ಲಿ ಮಾಡಿರುವ ಭ್ರಷ್ಟಾಚಾರ ರಹಿತ ಅಭಿವೃದ್ಧಿ ಕಾರ್ಯಗಳು ಬಿ.ಜೆ.ಪಿ.ಗೆ ಶ್ರೀರಕ್ಷೆಯಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ಮೂಡಿಗೆರ ಮಂಡಲ ಅಧ್ಯಕ್ಷ ಜೆ.ಎಸ್. ರಘು, ನಿಯೋಜಿತ ಅಧ್ಯಕ್ಷ ಟಿ.ಎಂ. ಗಜೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪುಣ್ಯಪಾಲ್, ನರೇಂದ್ರ, ರವೀಂದ್ರ ಬೆಳವಾಡಿ, ಮುಖಂಡರುಗಳಾದ ಹೆಚ್.ಎಸ್.ಕವೀಶ್, ಎಂ.ಆರ್. ಜಗದೀಶ್, ಪ್ರೇಮ್ ಕುಮಾರ್, ದೀಪಕ್ ದೊಡ್ಡಯ್ಯ, ಕೆಂಜಿಗೆ ಕೇಶವ್, ರಾಜಪ್ಪ, ನಾರಾಯಣಗೌಡ, ಸಿ.ಹೆಚ್. ಲೋಕೇಶ್, ಜಯಂತ್, ಸುರೇಂದ್ರ, ಸುದರ್ಶನ್, ಹೆಚ್.ಆರ್. ಪ್ರಮೋದ್ ಕುಮಾರ್, ಶಶಿಧರ್, ಕೆ.ಸಿ. ರತನ್, ಸುಜಿತ್, ಸಂತೋಷ್ ಕೋಟ್ಯಾನ್, ಅವಿನಾಶ್, ಮೋಹನ್, ಪಂಚಾಕ್ಷರಿ, ಭಾರತಿ ರವೀಂದ್ರ, ನಯನ ತಳವಾರ, ಶರತ್, ಧನಿಕ್, ಪ್ರಶಾಂತ್, ಯೋಗೇಶ್, ವಿವಿಧ ಮಂಡಲಗಳ ಅಧ್ಯಕ್ಷರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ