October 5, 2024

ಪ್ರತಿಯೊಬ್ಬ ಮಾನವ ಇಂಥದ್ದೆ ಧರ್ಮ ಅಥವಾ ಭಾಷೆಯಲ್ಲೇ ಜನಿಸಬೇಕೆಂದು ಅರ್ಜಿ ಸಲ್ಲಿಸಲಾಗದು. ಹೀಗಾಗಿ ಹುಟ್ಟಿನಿಂದ ಜೊತೆಗಿರುವ ಧರ್ಮ ಹಾಗೂ ಮಾತೃಭಾಷೆಗೆ ಮೊದಲು ಗೌರವಿಸುವ ಗುಣ ಜನತೆ ಬೆಳೆಸಿಕೊಳ್ಳಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಉರ್ದು ಅದಬ್, ರಾಜ್ಯ ಅಂಜುಮಾನ್ ತಾರಕಿ ಉರ್ದು ಸಹಯೋಗದಲ್ಲಿ ಶನಿವಾರ ಉರ್ದು ಸಮ್ಮೇಳನ ಹಾಗೂ ಗಜಲ್-ಕವಾಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಧರ್ಮ ಹಾಗೂ ಭಾಷೆಗೆ ಆದ್ಯತೆ ನೀಡಬೇಕು. ಅದರಂತೆ ಇತರೆ ಧರ್ಮಕ್ಕೆ ಧಕ್ಕೆಯುಂಟಾಗದಂತೆ ನಡೆದು ಕೊಂಡರೆ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕಲು ಸಾಧ್ಯ. ಇದನ್ನೇ ಹಿಂದೂ, ಮುಸ್ಲೀಂ, ಕ್ರೈಸ್ತದ ಧರ್ಮ ಗ್ರಂಥಗಳಲ್ಲಿ ಮಹಾಪುರುಷರು ಸಂದೇಶ ನೀಡಿದ್ದು ಪರಿಪಾಲಿಸುವ ದಾರಿ ಹಿಡಿಯಬೇಕು ಎಂದು ಹೇಳಿದರು.

 

ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮೊದಲ ಆದ್ಯತೆ ನೀಡಿ ಕಾರ್ಯನಿರ್ವಹಿಸುತ್ತಿದ್ದು ಕೆಲವರು ಧರ್ಮ ವನ್ನು ಹತ್ತಿಕ್ಕುವ ಸಲುವಾಗಿ ಹಲವಾರು ತಪ್ಪು ಸಂದೇಶಗಳನ್ನು ನಾಗರೀಕರಲ್ಲಿ ಭಿತ್ತುವ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ಹೆಚ್ಚು ಕಿವಿಗೊಡದೇ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸ ಹಾಗೂ ಸಹಬಾಳ್ವೆಯೊಂದಿಗೆ ಮುನ್ನೆಡೆಯಬೇಕು ಎಂದು ತಿಳಿಸಿದರು.

ಈಗಾಗಲೇ ರಾಜ್ಯಸರ್ಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಹಲವಾರು ಸವಲತ್ತುಗಳನ್ನು ಒದಗಿಸುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಬಹುತೇಕ ಮುಸ್ಲೀಂ ಸಮುದಾಯಕ್ಕೆ ತಲುಪಿಸುತ್ತಿರುವುದು ರಾಜ್ಯ ಸರ್ಕಾರ. ಜೊತೆಗೆ ಕ್ಷೇತ್ರದ ಮಸೀದಿ, ದರ್ಗಾಗಳ ಅಭಿವೃಧ್ದಿಗೆ ೧.೭೦ ಕೋಟಿ ರೂ. ಅನುದಾನವನ್ನು ವಕ್ಫ್ ಸಮಿತಿಗೆ ಒದಗಿ ಸುವ ಮೂಲಕ ಹೆಚ್ಚು ಒತ್ತು ನೀಡುತ್ತಿದೆ ಎಂದರು.

ಸದ್ಯದಲ್ಲೇ ಮುಸ್ಲೀಂರಿಗೆ ರಂಜಾನ್ ಹಬ್ಬ ಸಮೀಪದಲ್ಲಿರುವ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಉಪ ವಾಸ ಮಾಡಿ ಆಚರಣೆಗೆ ಮುಂದಾಗುತ್ತಾರೆ. ರಂಜಾನ್‌ಗೂ ತಮಗೂ ಅವಿಭಾವ ಸಂಬಂಧವಿದೆ. ಕಳೆದ ವರ್ಷ ದಲ್ಲಿ ರಂಜಾನ್‌ನಲ್ಲಿ ಅನೇಕ ಮುಸ್ಲೀಂ ಜನಾಂಗದವರು ತಮ್ಮ ಗೆಲುವಿಗೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿರುವುದು ಮರೆಯಲಾಗದು ಎಂದು ಹೇಳಿದರು.

ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಶೇ.೫೦ ರಷ್ಟು ಮುಸ್ಲೀಂ ಸಮುದಾಯ ವಾಸಿಸುವ ಸ್ಥಳಗಳಿಗೆ ಸರ್ಕಾರವು ವಿಶೇಷ ಅನುದಾನ ಒದಗಿಸುವ ಮೂಲಕ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕ ರ್ಯಕ್ಕೆ ಮುಂದಾಗಿದ್ದು ಸದ್ಯದಲ್ಲೇ ಎಲ್ಲಾ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ವಕ್ಪ್ ಸಮಿತಿ ಅಧ್ಯಕ್ಷ ಮಹಮ್ಮದ್ ಶಾಹೀದ್ ರಜ್ವಿ ಮಾತನಾಡಿ ರಾಜ್ಯಸರ್ಕಾರ ಈಗಾಗಲೇ ಜಿಲ್ಲೆ ಯ ಮಸೀದಿ, ದರ್ಗಾಗಳ ಮೂಲಸೌಕರ್ಯಕ್ಕೆ ೬ ಕೋಟಿ ಅನುದಾನ ಬಿಡುಗಡೆಗೊಳಿಸಿದೆ. ತಾಲ್ಲೂಕಿನಲ್ಲಿ ಮುಸ್ಲೀಂ ಸಮುದಾಯದ ಬೆಳವಣಿಗೆಗೆ ಉರ್ದು ಭವನ ನಿರ್ಮಿಸಲು ವಿಶೇಷ ಅನುದಾನಕ್ಕೆ ಶಾಸಕರಿಗೆ ಒತ್ತಾಯಿಸಿದ ಮೇರೆಗೆ ಪ್ರತಿಕ್ರಿಯಿಸಿ ಅವರು ಸದ್ಯದಲ್ಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಭವನ ನಿರ್ಮಿಸಲು ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಗಜಲ್ ಮತ್ತು ಕವಾಲಿ ಕಾರ್ಯಕ್ರಮ ನಡೆಯಿತು. ಕಳೆದ ಎರಡು ದಿನಗಳಿಂದ ಉರ್ದು ಶಿಕ್ಷಕರಿಗೆ ಉರ್ದುಭಾಷಾ ಬೆಳವಣಿಗೆ ಕುರಿತು ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಮೈಸೂರು ದಾರುಲ್ ಉಲೂಮ್ ಯನಿವರ್ಸಿಟಿ ಮುಖ್ಯಸ್ಥ ಡಾ.ಹಜೀಕ್ ನದ್ವಿ, ಅಂಜುಮಾನ್ ತಾರಕಿ ಉರ್ದು ಸಂಸ್ಥೆ ರಾಜ್ಯ ಸದಸ್ಯ ಮುನೀರ್ ಅಹ್ಮದ್ ಜಮಿ, ಜಿಲ್ಲಾ ಉರ್ದು ಅದಬ್ ಸಂಸ್ಥೆಯ ಅಧ್ಯಕ್ಷ ಜಂಶೀದ್‌ಆಲಿ, ಉಪಾದ್ಯಕ್ಷರಾದ ಫೈರೋಜ್, ರೆಹಮಾನ್, ಕಾರ್ಯದರ್ಶಿ ನಜ್ಮಾ, ನಗರಸಭಾ ಸದಸ್ಯರಾದ ಮುನೀರ್ ಅಹ್ಮದ್, ಖಲಂದರ್, ಜಾವೀದ್, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಮಹಮ್ಮದ್, ಮುಖಂಡರುಗಳಾದ ಜಂಶೀದ್‌ಖಾನ್ ಮತ್ತಿತರರು ಹಾಜರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ