October 5, 2024

ಕುಡಿಯುವ ನೀರು ಅತಿ ಮಹತ್ವದ್ದು. ಸಾರ್ವಜನಿಕರು ನೀರನ್ನು ಮಿತವಾಗಿ ಮತ್ತು ಸಮರ್ಪಕವಾಗಿ ಬಳಸುವ ಮೂಲಕ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ತಿಳಿಸಿದರು.

ಅವರು ಮೂಡಿಗೆರೆ ಪಟ್ಟಣದ ಜೇಸಿ ಭವನ ಮುಂಭಾಗ 11 ಲಕ್ಷ ರೂ ವೆಚ್ಚದಲ್ಲಿ ತಮ್ಮ ವಿಧಾನಪರಿಷತ್ ಸದಸ್ಯರ ಅನುದಾನದಲ್ಲಿ ಶುದ್ಧ ಗಂಗಾ ಕುಡಿಯುವ ನೀರು ಘಟಕ ಉದ್ಘಾಟಿಸಿ ಮಾತನಾಡಿದರು.

ನಾಡಪ್ರಭು ಕೆಂಪೇಗೌಡರು ಈ ನಾಡು ನುಡಿ ಮತ್ತು ಜಲಕ್ಕಾಗಿ ದುಡಿದು ಕನ್ನಡ ನಾಡನ್ನು ಕಟ್ಟಿದವರು. ಅವರ ಹೆಸರಲ್ಲಿ ಮೂಡಿಗೆರೆಯಲ್ಲಿ ಶಾಶ್ವತವಾಗಿ ಏನಾದರು ಇರಬೇಕು ಮತ್ತು ಅದು ಸಾರ್ವಜನಿಕರಿಗೆ ಸಲ್ಲುವಂತಾಗಬೇಕು ಎಂದು ಈ ಘಟಕಕ್ಕೆ ನಾಡಪ್ರಭು ಕೇಂಪೇಗೌಡರ ಹೆಸರು ಇಡಲಾಗಿದೆ ಎಂದರು.

ಮೂಡಿಗೆರೆ ಪಟ್ಟಣದ ಜನತೆಗೆ ಅನುಕೂಲವಾಗಲಿ ಎಂದು ಶುದ್ಧ ಕುಡಿಯುವ ನೀರಿನ ಘಟಕವನ್ನು ಆರಂಭಿಸಲಾಗಿದ್ದು. ಮುಂದಿನ ದಿನಗಳಲ್ಲಿ ಶುದ್ದ ಕುಡಿಯುವ ನೀರು ಚಿನ್ನದ ಸಮವಾಗಲಿದ್ದು, ಅದರಲ್ಲು ಈ ಬರಗಾಲದಲ್ಲಿ ನೀರಿನ ಅಭಾವ ಉಂಟಾಗಲಿದೆ. ಈ ಘಟಕದಲ್ಲಿ  ಐದು ರೂ  ನಾಣ್ಯ ಹಾಕಿದರೆ 20 ಲೀಟರ್, ಹಾಗೂ 2 ರೂಗೆ 1 ಲೀಟರ್ ನೀರು  ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ತಾಲೂಕು ಕಚೇರಿ ಸೇರಿದಂತೆ ಹಲವಾರು ಸರ್ಕಾರಿ ಕಚೇರಿಗಳು. ಮತ್ತು ಸೇವಾ ಸಂಸ್ಥೆಗಳು ಇಲ್ಲಿರುವ ಕಾರಣದಿಂದ  ಅಲ್ಲದೆ ಶಾಲೆಗಳು. ಜೆಸಿ ಸಂಸ್ಥೆ ಕೂಡ ಇದ್ದು ಕುಡಿಯುವ ನೀರಿನ ಅವಶ್ಯಕತೆ ಇಲ್ಲಿ ಹೆಚ್ಚಿದ್ದು. ಆ ಕಾರಣದಿಂದ ನಗರದ ಈ ಹೃದಯ ಭಾಗವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದರು.

ಘಟಕದ ನಿರ್ವಹಣೆಯ ಹೊಣೆಯನ್ನು  ಪಟ್ಟಣ ಪಂಚಾಯಿತಿ ಸದಸ್ಯರುಗಳು ಮತ್ತು ಅಧಿಕಾರಿಗಳು ವಹಿಸಿಕೊಂಡು ನಿರಂತರ ನೀರು ಸರಬರಾಜು ಮಾಡಬೇಕು ಹಾಗು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿದರು.

ಈ ಸಂದರ್ಭ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ. ಪ.ಪಂ ಸದಸ್ಯರಾದ ಕಮಲಮ್ಮ, ಗೀತಾ ಅಜಿತ್ ಕುಮಾರ್. ಆಶಾ ಮೋಹನ್. ಸುಧೀರ್, ಹಂಝ, ಮನೋಜ್, ರಮೇಶ್,  ವಿವಿಧ ಪಕ್ಷಗಳ ಮುಖಂಡರು, ಜೇಸಿಐ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ