October 5, 2024

ಕಾಫಿಮಂಡಳಿ ಮತ್ತು ಕೆನರಾ ಬ್ಯಾಂಕ್ ಚಿಕ್ಕಮಗಳೂರು ಕಾಫಿ ಮಂಡಳಿ ಸಭಾಂಗಣದಲ್ಲಿ ಆಯೋಜಿಸಿದ್ದ  ತೋಟ ಕಾರ್ಮಿಕರ ವಿಮಾ ಯೋಜನೆ ಚಾಲನೆ ಕಾರ್ಯಕ್ರಮದ ಸಂದರ್ಭದಲ್ಲಿ ಈ ಸಭೆ ಅಯೋಜಿಸಲಾಗಿತ್ತು.

ಕೆನರಾ ಬ್ಯಾಂಕ್ ಕಾಫಿ ಬೆಳೆಗಾರರ ಸಾಲಕ್ಕೆ ಸಂಬಂಧಿಸಿದಂತೆ ಸರ್ಫಾಸಿ ಕಾಯ್ದೆಯಡಿ ಕಾಫಿ ತೋಟಗಳನ್ನು ಹರಾಜು ಪ್ರಕ್ರಿಯೆಗೆ ಮುಂದಾಗಿರುವ ಬಗ್ಗೆ ಬೆಳೆಗಾರರ ಸಂಘದ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದ ಕೆನರಾ ಬ್ಯಾಂಕ್ ಉನ್ನತ ಅಧಿಕಾರಿಗಳ ಗಮನ ಸೆಳೆದು ಬ್ಯಾಂಕ್ ನ ಕ್ರಮವನ್ನು ಖಂಡಿಸಿದರು.

ಸಭೆಯಲ್ಲಿ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ  ಬಿ.ಆರ್. ಬಾಲಕೃಷ್ಣ ಮಾತನಾಡಿ ಕೆನರಾ ಬ್ಯಾಂಕ್  ಕೂಡಲೇ SLBC ಸಭೆ ಕರೆಯುವಂತೆಯೂ ಮತ್ತು   ಬೆಳೆಗಾರರ ಆಸ್ತಿಗಳನ್ನು E- ಹರಾಜು ಹಾಕುತ್ತಿರುವ ಪ್ರಕ್ರಿಯೆಗಳನ್ನು ಈ ಕೂಡಲೇ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು. ಹಲವಾರು ದಶಕಗಳಿಂದ ಕೆನರಾ ಬ್ಯಾಂಕ್ ನ ಗ್ರಾಹಕರಾಗಿರುವ ಬೆಳೆಗಾರರು ಈಗ ಬ್ಯಾಂಕ್ ನ ಕಠಿಣ ಕ್ರಮದಿಂದ ಕಂಗಾಲಾಗಿರುತ್ತಾರೆ. ಬೇರೆ ಎಲ್ಲ ಬ್ಯಾಂಕ್ ಗಳು ಮಾನವೀಯತೆಯಿಂದ ಬೆಳೆಗಾರರ ಸಾಲದ ಕುರಿತು OTS ಸವಲತ್ತು ನೀಡುತ್ತಿವೆ. ಆದರೆ ಕೆನರಾ ಬ್ಯಾಂಕ್ ಮಾತ್ರ ತನ್ನ ಹಠಮಾರಿ ಧೋರಣೆಯಿಂದ ತೋಟಗಳನ್ನು ಹರಾಜು ಹಾಕುತ್ತಿರುವುದು ಖಂಡನೀಯ.  SLBC ಸಭೆಯನ್ನು ಬೆಳೆಗಾರರ ಸಂಘಟನೆಗಳನ್ನು ಒಳಗೊಂಡು ಆಯೋಜಿಸಬೇಕೆಂದು ಒತ್ತಾಯಿಸಿದರು.

ಕೆ.ಜಿ.ಎಫ್ ಅಧ್ಯಕ್ಷ ಹೆಚ್.ಟಿ. ಮೋಹನ್ ಕುಮಾರ್, ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಂ ಇವರು ಕಾಫಿ ಬೆಳೆಗಾರರ ಸಾಲ ಸುಸ್ತಿಯಾಗಲು ಕಾರಣಗಳನ್ನು ಮತ್ತು ಮರುಪಾವತಿಗೆ ಸೂಕ್ತ ಅವಕಾಶ ನೀಡುವ ಅಗತ್ಯತೆಯ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಗಮನಸೆಳೆದರು.

ಕೆನರಾ ಬ್ಯಾಂಕ್ ನ ಮಹಾಪ್ರಬಂಧಕರು ಹಾಗೂ SLBC ಸಂಯೋಜಕರಾದ  ಎಂ.ಭಾಸ್ಕರ ಚಕ್ರವರ್ತಿ ಯವರು ಮಾತನಾಡಿ ” ತಾವು ಶೀಘ್ರವಾಗಿ SLBC ಸಭೆ ಕರೆಯುವುದಾಗಿಯೂ ಹಾಗೂ ಕೆನರಾ ಬ್ಯಾಂಕ್ ನಿಂದ ಬೆಳೆಗಾರರಿಗೆ ಆಗುತ್ತಿರುವ ಅನಾನುಕೂಲತೆ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದರು.

ಕೆನರಾ ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕ ಸುಧಾಕರ್ ಕೊಥಾರಿ ಯವರು ” ಬೆಳೆಗಾರರ ಸಾಲದ ಕುರಿತು ಇರುವ ತಕರಾರುಗಳನ್ನು ತಮ್ಮ ಗಮನಕ್ಕೆ ತಂದ ಕೂಡಲೇ ತಾವು ಆದ್ಯತೆಯ ಮೇಲೆ ಸಮಸ್ಯೆಯನ್ನು ಬಗೆಹರಿಸಿಕೊಟ್ಟು ಸಹಕರಿಸುವುದಾಗಿ” ಸಭೆಗೆ ತಿಳಿಸಿರುತ್ತಾರೆ.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ  ಎಂ.ಜೆ.ದಿನೇಶ್ ರವರು ಬೆಳೆಗಾರರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಕಾರಣದಿಂದ ಸಾಲದ ಮರುಪಾವತಿಯಲ್ಲಿ ವಿಳಂಬವಾಗಿರುತ್ತದೆ.   ಕಾಫಿ ಬೆಳೆಗಾರರು ತೋಟದ ಅಭಿವೃದ್ಧಿಗೆಂದು ಬ್ಯಾಂಕ್ ಗಳಲ್ಲಿ ಸಾಲ ಮಾಡಿದ್ದಾರೆ. ಕಾಫಿ ತೋಟವನ್ನು ಅಭಿವೃದ್ಧಿ ಮಾಡಿ ಫಸಲು ಪಡೆಯಲು ಕನಿಷ್ಠ ಏಳೆಂಟು ವರ್ಷ ಸಮಯವಕಾಶ ಬೇಕು. ಕೆಲವು ಬೆಳೆಗಾರರು ಆರ್ಥಿಕ ತೊಂದರೆಯಿಂದ ಸಕಾಲದಲ್ಲಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರುವುದಿಲ್ಲ. ಅಂತಹವರ ಸಾಲವನ್ನು ಕಠಿಣವಾದ ಸರ್ಫಾಸಿ ಕಾಯ್ದೆಯಡಿ ತಂದು ಹರಾಜು ಹಾಕುವುದು ಸರಿಯಲ್ಲ, ಬ್ಯಾಂಕ್ ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ಸಾಲಗಾರರಿಗೆ ಸಮಯವಕಾಶ ನೀಡಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸಲಹೆ ನೀಡಿದರು.  SLBC ಸಭೆಯಲ್ಲಿ ಈ ಕುರಿತು ವಿವರವಾದ ಚರ್ಚೆ ನೆಡೆದರೆ ಬೆಳೆಗಾರರ ಸಾಲದ ಕುರಿತಾದ ಸಮಸ್ಯೆಗಳು ಬ್ಯಾಂಕ್ ಗಳಿಗೆ ತಿಳಿಯುತ್ತದೆ ” ಎಂದು ವಿವರಿಸಿದರು.

ಸಭೆಯಲ್ಲಿ ಕೆ. ಜಿ.ಎಫ್. ಉಪಾಧ್ಯಕ್ಷರಾದ ವಸಂತೇ ಗೌಡರು, ಖಜಾಂಚಿ ಹೆಚ್.ಎಂ.  ಉಮೇಶ್, ಮೂಡಿಗೆರೆ ತಾ ಬೆಳೆಗಾರರ ಸಂಘದ ಗೌ ಕಾರ್ಯದರ್ಶಿ  ಕೆ. ಡಿ. ಮನೋಹರ್.   ಆವತಿ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ  ಶ್ರೀಧರ್, ಕಾರ್ಯದರ್ಶಿ  ಮಹೇಶ್ , ಬೆಳೆಗಾರರಾದ ಖಾಂಡ್ಯದ ರಾಯಪ್ಪ ಗೌ,  ಶ್ರೇಯಸ್ ಚಿಕ್ಕಮಗಳೂರು, ಸಂಜಯ್ ದೇವಲಕೆರೆ,  ಸಂದೇಶ್ ಬೇಲೂರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ