October 5, 2024

ಗ್ರಾಮೀಣ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಜಿಲ್ಲೆಯ ಗ್ರಾಮೀಣಬ್ಯಾಂಕ್ ನೌಕರರು ಮುಷ್ಕರ ನಡೆಸಿದರು. ಕರ್ನಾಟಕ ಗ್ರಾಮೀಣ ಬ್ಯಾಂಕ್ ವಲಯ ಕಛೇರಿಯ ಮುಂದೆ ಘೋಷಣೆ ಕೂಗಿ ಪ್ರದರ್ಶನ ನಡೆಸಿದರು.

ಅಖಿಲಭಾರತ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟ ಎಐಆರ್‌ಆರ್‌ಬಿಇಎ ಅಖಿಲಭಾರತ ಮುಷ್ಕರದ ಕರೆಗೆ ಜಿಲ್ಲೆಯಲ್ಲಿ ಹೆಚ್ಚಿನ ಸ್ಪಂದನ ದೊರೆಯಿತು. ಕೆಜಿಬಿಇಯು ಮತ್ತು ಓಎ ಜಂಟಿ ಕ್ರಿಯಾಸಮಿತಿಯು ಜಿಲ್ಲೆಯ ೫೦ಕ್ಕೂ ಹೆಚ್ಚು ಬ್ಯಾಂಕ್ ಶಾಖೆಯ ತನ್ನೆಲ್ಲ ಸದಸ್ಯರಿಗೆ ಇಂದು ಕೆಲಸ ಬಹಿಷ್ಕರಿಸಿ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದು ಬಹುತೇಕ ಯಶಸ್ವಿಯಾಗಿದೆ.

ನಗರದ ಕೆಜಿಬಿ ವಲಯ ಕಛೇರಿಯ ಮುಂದೆ ಜಿಲ್ಲಾಧ್ಯಕ್ಷ ಹರ್ಷಎಸ್.ರಾವ್, ಕಾರ್ಯಕಾರಿ ಸದಸ್ಯರಾದ ಗುರುಮೂರ್ತಿಭಟ್ ಮತ್ತು ಕೆ.ಎನ್.ಅಲೋಕ್, ರಾಜ್ಯಕಾರ್‍ಯಕಾರಿ ಸದಸ್ಯ ಅಶೋಕ, ನಿವೃತ್ತ ಅಧಿಕಾರಿಗಳಾದ ಕೃಷ್ಣಮೂರ್ತಿ ಮತ್ತು ಉಮಾಪತಿ ನೇತೃತ್ವದಲ್ಲಿಂದು ಬೇಡಿಕೆಗಳ ಬಗ್ಗೆ ಘೋಷಣೆ ಕೂಗಿ ಪ್ರತಿಭಟನಾ ಪ್ರದರ್ಶನ ನಡೆಸಿ ಗಮನಸೆಳೆದರು.

ಗ್ರಾಮೀಣ ಬ್ಯಾಂಕ್‌ ಗಳನ್ನು ಖಾಸಗೀಕರಣ ಮಾಡಬಾರದು. ಎಲ್ಲ ದಿನಗೂಲಿ ಹೊರಗುತ್ತಿಗೆ ನೌಕರರನ್ನು ಒಂದುಬಾರಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಖಾಯಂಗೊಳಿಸಬೇಕು. ಎಲ್ಲಾ ತರಹದ ವಿಮಾ ಸರಕುಗಳ ಮಾರಾಟ ರದ್ದಾಗಬೇಕು. ಪ್ರೇರಕ ಬ್ಯಾಂಕ್‌ಗಳಲ್ಲಿನ ಸಿಬ್ಬಂದಿ ಸೇವಾ ನಿಯಮಗಳು, ಭರ್ತಿ ಪ್ರಕ್ರಿಯೆಗಳು, ಪಿಂಚಣಿ ನಿಯಮಗಳು, ಅನುಕಂಪ ಆಧಾರಿತ ನೇಮಕಾತಿ, ವೇತನ ಶ್ರೇಣಿ ಮತ್ತಿತರ ಸೌಲಭ್ಯಗಳು ಸೇರಿದಂತೆ ಇತರೆ ಸೌಲಭ್ಯಗಳನ್ನು ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳಿಗೂ ಯಥಾವತ್ತಾಗಿ ವಿಸ್ತರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರೇರಕ ಬ್ಯಾಂಕುಗಳ ಆಡಳಿತದಿಂದ ಮುಕ್ತಿಪಡೆದು ರಾಷ್ಟ್ರೀಯ ಗ್ರಾಮೀಣಬ್ಯಾಂಕ್ ಸ್ಥಾಪಿಸಿ ಅದರ ಅಡಿಯಲ್ಲಿ ರಾಜ್ಯಮಟ್ಟದ ಗ್ರಾಮೀಣ ಬ್ಯಾಂಕ್‌ನ್ನು ರಚಿಸಬೇಕು. ಒಂದುಸಾರಿ ವಿಶೇಷ ನೇರನೇಮಕಾತಿ ಪ್ರಕ್ರಿಯೆ ನಡೆಸುವುದರ ಮೂಲಕ ಖಾಲಿ ಇರುವ ೩೦,೦೦೦ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕು. ಬಡ್ತಿ ನಿಯಾಮವಳಿಗಳನ್ನು ಶೀಘ್ರವೇ ಪುನರ್‌ವಿಮರ್ಶಿಸಬೇಕೆಂಬುದು ಪ್ರಮುಖ ಬೇಡಿಕೆ ಎಂದ ಗುರುಮೂರ್ತಿಭಟ್, ದೇಶಾದ್ಯಂತ ಒಂದುದಿನದ ಅಖಿಲಭಾರತ ಮುಷ್ಕರ ಇಂದು ಯಶಸ್ವಿಯಾಗಿದೆ ಎಂದರು.

ಗ್ರಾಮೀಣ ಬ್ಯಾಂಕ್ ಹಾಗೂ ಉದ್ಯೋಗಿಗಳ ಭವಿಷ್ಯದ ದೃಷ್ಟಿಯಿಂದ ಹಲವುವರ್ಷಗಳ ಬೇಡಿಕೆಗಳು ಹಾಗೆ ಉಳಿದಿವೆ. ಒರಿಸ್ಸಾದ ಭುವನೇಶ್ವರದಲ್ಲಿ ನಡೆದ ಎಐಆರ್‌ಆರ್‌ಬಿಇಎ ಜನರಲ್ ಕೌನ್ಸಿಲ್ ಸಭೆಯಲ್ಲಿ ಗ್ರಾಮೀಣ ಬ್ಯಾಂಕ್‌ಗಳ ಪ್ರಸ್ತುತ ಪರಿಸ್ಥಿತಿ ಅವಲೋಕಿಸಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲು ವಿವಿಧ ಹಂತದ ಹೋರಾಟಗಳ ಕುರಿತಂತೆ ದೇಶಾದ್ಯಂತ ಎಲ್ಲ ಗ್ರಾಮೀಣ ಬ್ಯಾಂಕ್‌ಗಳಿಗೆ ಈ ಹಿಂದೆಯೆ ನೋಟೀಸ್ ಕಳುಹಿಸಿದ್ದರೂ ಅವರು ಗಮನಹರಿಸದ ಹಿನ್ನಲೆಯಲ್ಲಿ ಇಂದಿನ ಮುಷ್ಕರ ನಡೆದಿದೆ ಎಂದಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ