October 5, 2024

ಕೆವೈಸಿ  ನಿಯಮ ಉಲ್ಲಂಘನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿರುವ ಪೇಟಿಎಂ ಪೇಮೆಂಟ್ ಬ್ಯಾಂಕ್ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧ ಹೇರಿದೆ. ಇದರಿಂದ ಮಾರ್ಚ್ 15ರ ಬಳಿಕ ಪೇಟಿಎಂ ಪೇಮೆಂಟ್ ಬ್ಯಾಂಕ್‌ನ ಕೆಲ ಸೇವೆಗಳು ಬಂದ್ ಆಗಲಿದೆ. ಇದರಿಂದ ಪಾವತಿಗಾಗಿ ಪೇಟಿಎಂ  ಯುಪಿಐ ಬಳಕೆ ಮಾಡುತ್ತಿರುವ ಗ್ರಾಹಕರಲ್ಲೂ ಆತಂಕ ಮನೆ ಮಾಡಿದೆ. ಮಾರ್ಚ್ 15ರ ಬಳಿಕ ಪೇಟಿಎಂ ಯುಪಿಐ ಏನು ಎಂಬ ಆತಂಕ ಗ್ರಾಹಕರನ್ನು ಕಾಡುತ್ತಿದೆ. ಇದೀಗ ಆರ್‌ಬಿಐ ಎನ್‌ಪಿಸಿಐಗೆ ಮಾಡಿರುವ ಮನವಿಯಲ್ಲಿ ಮಾರ್ಚ್ 15ರ ಬಳಿಕವೂ ಪೇಟಿಎಂ ಯುಪಿಐ ಮುಂದುವರಿಯುವ ಸೂಚನೆಗಳು ಸಿಕ್ಕಿವೆ.

ಮಾ.15ರ ನಂತರ ಗ್ರಾಹಕರ ಖಾತೆಗಳು ಹಾಗೂ ವ್ಯಾಲೆಟ್‌ಗಳಿಗೆ ಹಣ ಸ್ವೀಕರಿಸದಂತೆ ಪೇಟಿಎಂ ಬ್ಯಾಂಕ್‌ಗೆ ನಿರ್ಬಂಧ ಹೇರಿರುವ ರಿಸರ್ವ್‌ ಬ್ಯಾಂಕ್, ಪೇಟಿಎಂ ಆ್ಯಪ್‌ನ ಮೂಲಕ ಯುಪಿಐ ಸೇವೆ ಮುಂದುವರಿಕೆಯಾಗುವಂತೆ ನೋಡಿಕೊಳ್ಳಲು ನೆರವಾಗುವಂತೆ ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೋರೆಷನ್‌ (ಎನ್‌ಪಿಸಿಐ)ಗೆ ಸೂಚಿಸಿದೆ. ಯುಪಿಐ ಗ್ರಾಹಕರು ತಡೆರಹಿತ ಸೇವೆಯನ್ನು ಪಡೆಯುವ ಸಲುವಾಗಿ ‘ಥರ್ಡ್ ಪಾರ್ಟಿ ಅಪ್ಲಿಕೇಷನ್‌ ಪ್ರೊವೈಡರ್‌’ ಆಗುವ ಬೇಡಿಕೆಯನ್ನು ಪರಿಶೀಲಿಸುವಂತೆ ರಿಸರ್ವ್‌ ಬ್ಯಾಂಕ್‌ ನಿರ್ದೇಶಿಸಿದೆ. ಈ ಸಂಬಂಧ ಪೇಟಿಎಂನ ಮಾತೃಸಂಸ್ಥೆಯಾದ ಒನ್‌97 ಕಮ್ಯುನಿಕೇಷನ್ಸ್‌ ಲಿಮಿಟೆಡ್‌ನಿಂದಲೇ ಕೋರಿಕೆ ಬಂದಿತ್ತು ಎಂದಿದೆ.

ಆರ್‌ಬಿಐ ನಿರ್ದೇಶನದಿಂದ ಪೇಟಿಎಂ ಯುಪಿಐ ಬಳಕೆ ಮಾಡುತ್ತಿದ್ದ ಬಳಕೆದಾರರು ನಿಟ್ಟುಸಿರು ಬಿಟ್ಟಿದ್ದಾರೆ. ಪೇಟಿಎಂ ಯುಪಿಐ ಹಿಂದಿನಂತೆ ಕಾರ್ಯನಿರ್ವಹಿಸುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ಸುಗಮ ಡಿಜಿಟಲ್ ಪಾವತಿಗೆ ಅನುಮತಿಸಲು ಆರ್‌ಬಿಐ ಮುಂದಾಗಿದೆ. ಪ್ರಮುಖವಾಗಿ ಇದು ಥರ್ಟ್ ಪಾರ್ಟಿ ಆ್ಯಪ್ಲಿಕೇಶನ್ ಪ್ರೊವೈಡರ್ ಆಗಿರುವ ಕಾರಣ ಪೇಟಿಎಂ ಯುಪಿಐ ಕಾರ್ಯನಿರ್ವಹಿಸಲಿದೆ.

ಪೇಟಿಎಂ ಯುಪಿಐ ಕಾರ್ಯನಿರ್ವಹಿಸಿದರೆ, ಪೇಟಿಎಂ ಫಾಸ್ಟ್ಯಾಗ್‌, ವ್ಯಾಲೆಟ್‌, ಹೊಸ ಖಾತೆ ಆರಂಭ, ಹೊಸ ಠೇವಣಿಗಳ ಮೇಲೆ ನಿರ್ಬಂಧ ಇರಲಿದೆ. ಮಾರ್ಚ್ 15ರ ಬಳಿಕ ಈ ಸೇವೆಗಳು ಲಭ್ಯವಿರುವುದಿಲ್ಲ.  ಹಾಲಿ ಇರುವ ಠೇವಣಿದಾರರು ಹಣ ವಾಪಸು ಪಡೆಯಲು ಯಾವುದೇ ನಿರ್ಭಂಧ ಇರುವುದಿಲ್ಲ. ಪೇಟಿಎಂ ಬ್ಯಾಂಕ್‌ ಕೆವೈಸಿ ನಿಯಮ ಪಾಲಿಸಿಲ್ಲ ಹಾಗೂ ಅಕ್ರಮ ಹಣ ವರ್ಗ ಮಾಡಿದೆ ಎಂದು ಆರೋಪಿಸಿ ಆರ್‌ಬಿಐ ನಿರ್ಬಂಧ ಹೇರಿದೆ.

ಈಗಾಗಲೇ ಪೇಟಿಎಂ ಫಾಸ್ಟ್ಯಾಗ್‌ನ್ನು ಇಂಡಿಯನ್‌ ಹೈವೇಸ್‌ ಮ್ಯಾನೇಜ್‌ಮೆಂಟ್‌ ಕಂಪನಿ ಲಿ. (ಐಎಚ್‌ಎಂಸಿಎಲ್‌) ಅಧಿಕೃತ ಬ್ಯಾಂಕ್ ಪಟ್ಟಿಯಿಂದ ತೆಗೆದು ಹಾಕಿದೆ. ಮಾರ್ಚ್ 15ರ ಬಳಿಕ ಪೇಟಿಎಂ ಫಾಸ್ಟ್ಯಾಗ್ ನಿಷ್ಕ್ರೀಯಗೊಳ್ಳಲಿದೆ.

ಒಟ್ಟಾರೆ ಮುಂದಿನ ದಿನಗಳಲ್ಲಿ ಪೇಟಿಎಂ ಬಳಸಿ ವ್ಯವಹಾರ ಮಾಡುತ್ತಿದ್ದ ಗ್ರಾಹಕರಿಗೆ ಸಾಕಷ್ಟು ಅಡ್ಡಿ ಆತಂಕಗಳು ಎದುರಾಗಿವೆ. ಪೇಟಿಎಂ ಯುಪಿಐ ಐಡಿ ಬಳಸಿ ವ್ಯವಹಾರ ನಡೆಸಲು ಸದಸ್ಯ ಆರ್.ಬಿ.ಐ. ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದು, ಗ್ರಾಹಕರು ಕೊಂಚ ನಿರಾಳರಾಗಿದ್ದಾರೆ. ಆದರೆ ಪೇಟಿಎಂ  ಬ್ಯಾಂಕಿಂಗ್ ಮೂಲಕ ಪಡೆಯುತ್ತಿರುವ ಸೇವೆಗಳಿಗೆ ತೊಂದರೆಯಾಗಲಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ