October 5, 2024

ಮೂಡಿಗೆರೆ ಬಿ.ಜೆ.ಪಿ. ಪಕ್ಷದೊಳಗಿನ ಆಂತರಿಕ ಭೇಗುದಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಪಕ್ಷದ ಕಛೇರಿ ಎದುರು ಪಕ್ಷದ ಮುಖಂಡ ಮಾಜಿ ತಾ.ಪಂ. ಸದಸ್ಯ ಕೆ.ಸಿ. ರತನ್ ಅವರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಪಕ್ಷದೊಳಗೆ ಪರಸ್ಪರ ಕೆಸರೆರಚಾಟ ಮುಂದುವರಿದಿದೆ.

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದಿಂದ ಅಮಾನತಾಗಿರುವ ಪಕ್ಷದ ಬಣಕಲ್ ಹೋಬಳಿ ಅಧ್ಯಕ್ಷರಾದ ಪಿ.ಜಿ. ಅನುಕುಮಾರ್ ಮತ್ತು ಗೋಣಿಬೀಡು ಹೋಬಳಿ ಅಧ್ಯಕ್ಷರಾದ ಕನ್ನೇಹಳ್ಳಿ ಭರತ್ ಈ ಬಗ್ಗೆ ಪತ್ರಿಕೆಗಳಿಗೆ ಬಹಿರಂಗ ಹೇಳಿಕೆ ನೀಡಿ ಗುರುತರ ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಕೆ.ಸಿ. ರತನ್ ಅವರು ಇಂದು ಪತ್ರಿಕೆಗಳಿಗೆ ವಿಡಿಯೋ ಹೇಳಿಕೆ ನೀಡಿ ಪ್ರತ್ಯುತ್ತರ ನೀಡಿದ್ದಾರೆ.

ಅನುಕುಮಾರ್ ಮತ್ತು ಭರತ್ ಅವರು ನೀಡಿರುವ ಪತ್ರಿಕಾ ಹೇಳಿಕೆ :

ದಿನಾಂಕ 09/02/2024 ರಂದು ಮೂಡಿಗೆರೆ ಭಾರತೀಯ ಜನತಾ ಪಾರ್ಟಿ ಕಛೇರಿಯಲ್ಲಿ ಗ್ರಾಮ ಚಲೋ ಅಭಿಯಾನದ ಕಾರ್ಯಗಾರ ನಡೆಯುತ್ತಿದ್ದ ಸಂದರ್ಭದಲ್ಲಿ ಪಕ್ಷದ ಯಾವುದೇ ಜವಾಬ್ದಾರಿ ಇಲ್ಲದ ಕೆ.ಸಿ. ರತನ್ ರವರು ಅಪೇಕ್ಷಿತರಲ್ಲದಿದ್ದರು ಕಾರ್ಯಗಾರ ಮುಗಿಯುವ ಹಂತದಲ್ಲಿ ಇದ್ದಾಗ ಸಭಾಂಗಣದೊಳಗೆ ಪ್ರವೇಶಿಸಿ ಪಕ್ಷದ ಜಿಲ್ಲಾ ಪ್ರದಾನ ಕಾರ್ಯದರ್ಶಿಯವರ ಸಮ್ಮುಖದಲ್ಲಿ ಅವರ ಅನುಮತಿ ಪಡೆಯದೆ ನೂತನ ಮಂಡಲ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡಿದ್ದರಿಂದ ಕಾರ್ಯಕರ್ತರಲ್ಲಿ ಗೊಂದಲವುಂಟಾಗಿ ಕೆ.ಸಿ. ರತನ್ ನಡೆಯನ್ನು ಪ್ರಶ್ನಿಸಿದಾಗ ಅವರು ನೀಡಿದ ಉಡಾಪೆಯ ಉತ್ತರದಿಂದ ಕಾರ್ಯಕರ್ತರ ನಡುವೆ ನಡೆದ ನೂಕಾಟ ತಳ್ಳಾಟದಲ್ಲಿ ರತನ್ ರವರ ಬಟ್ಟೆ ಹರಿದು ಕೆಳಗೆ ಬಿದ್ದಿರುತ್ತಾರೆ. ಆದರೆ ಜಿಲ್ಲಾ ಅಧ್ಯಕ್ಷರು ಅಮಾನತ್ತು ಅದೇಶದಲ್ಲಿ ಕೆ.ಸಿ. ರತನ್‍ರವರ ಮೇಲೆ ಏಕಾಏಕಿ ಹಲ್ಲೆ ಮಾಡಿ ಅವ್ಯಾಚ ಶಬ್ದಗಳಿಂದ ನಿಂದಿಸಿ ಅಸಭ್ಯವಾಗಿ ವರ್ತಿಸಿ ಪಕ್ಷದ ಗೌರವಕ್ಕೆ ದಕ್ಕೆ ತಂದಿರುತ್ತಾರೆ ಎಂದು ಹೇಳಿರುವುದು ಸತ್ಯಕ್ಕೆ ದೂರವಾಗಿರುತ್ತದೆ.

ಹಾಗೆಯೇ ಘಟನೆಯ ಬಗ್ಗೆ ಹಾಗೂ ನಮ್ಮ ಬಗ್ಗೆ ಯಾವುದೇ ದೂರು ಇಲ್ಲದಿದ್ದರೂ ಅಥವಾ ನಮ್ಮಿಂದ ಯಾವುದೇ ವಿವರಣೆ ಕೇಳದ ಏಕಪಕ್ಷೀಯವಾಗಿ ಅಮಾನತ್ತು ಆದೇಶ ಹೊರಡಿಸಿರುವುದರೀಮದ ಪಕ್ಷದ ನಿಷ್ಚಾವಂತ ಕಾರ್ಯಕರ್ತರುಗಳಾದ ನಮ್ಮ ಗೌರವಕ್ಕೆ ದಕ್ಕೆ ಉಂಟಾಗಿರುತ್ತದೆ. ಜಿಲ್ಲಾದ್ಯಕ್ಷರ ಕಾನೂನು ಬಾಹಿರ ಆದೇಶವನ್ನು ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸುತ್ತೇವೆ.

ಈ ಹಿಂದೆ ನಡೆದ ವಿಧಾನ ಸಭಾಚುನಾವಣಾ ಸಮಯದಲ್ಲಿ ಮಾಜಿ ಮುಖ್ಯಮಂತ್ರಿಗಳು ರಾಷ್ಟ್ರೀಯ ಮಂಡಳಿ ಸದಸ್ಯರಾದ ಶ್ರೀಯುತ ಯಡಿಯೂರಪ್ಪರವರು ಮೂಡಿಗೆರೆಗೆ ಬಂದಾಗ ಅವರನ್ನು ವಾಹನದಿಂದ ಕೆಳಗಿಳಿಯಲು ಸಹ ಬಿಡದೆ ಅಡ್ಡಗಟ್ಟಿ ಹಿಂದಕ್ಕೆ ಕಳುಹಿಸಿದ ಗುಂಪಿನ ನೇತೃತ್ವವನ್ನು ವಹಿಸಿದ್ದು ಇದೆ ಕೆ.ಸಿ. ರತನ್ ಮತ್ತು ಮಂಡಲದ ಪ್ರದಾನ ಕಾರ್ಯದರ್ಶಿಯಾದ ಪಂಚಾಕ್ಷರಿಯ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳದಿದ್ದದ್ದು ಯಾಕೆ? ಒಬ್ಬ ರಾಷ್ಟ್ರೀಯ ನಾಯಕರಿಗೆ ಮಾಡಿದ ಅವಮಾನ ಪಕ್ಷದ ಗೌರವಕ್ಕೆ ಚ್ಯುತಿ ತರಲಿಲ್ಲದೆ.

ಹಾಗೆಯೇ ಈ ಹಿಂದೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ ಮೈಲಿಮನೆ ಪೂರ್ಣೇಶ್‍ರಿಂದ ಸನ್ಮಾನ ಮಾಡಿಸಿಕೊಳ್ಳುವಾಗ ಜಿಲ್ಲಾ ಅಧ್ಯಕ್ಷರಿಗೆ ಪಕ್ಷದ ಗೌರವಕ್ಕೆ ಅವರಿಂದಾದ ಹಾನಿ ಬಗ್ಗೆ ಯೋಜನೆ ಯಾಗಲಿಲ್ಲವೇ ? ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಪಕ್ಷದ ಅಭ್ಯರ್ಥಿ ಸೋಲಲು ಇದೇ ಕೆ.ಸಿ.ರತನ್ ಮತ್ತು ಪಂಚಾಕ್ಷರಿಯವರು ಅಕ್ರಮ ಗುತ್ತಿಗೆಯಿಂದ ಮತ್ತು ಅಹಂಕಾರದಿಂದ ನಡೆದುಕೊಂಡ ರೀತಿ ಒಂದು ಕಾರಣ.

ಹಾಗೆಯೇ ವಿಧಾನ ಪರಿಷತ್ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಕೇವಲ 6 ಮತಗಳು ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲು ಇವರಿಬ್ಬರ ಬಗ್ಗೆ ಕಾರ್ಯಕರ್ತರಲ್ಲಿ ಸ್ಥಳೀಯ ಸಂಸ್ಥೆಗಳು ಚುನಾಯಿತ ಪ್ರತಿನಿಧಿಗಳಲ್ಲಿ, ಅಧಿಕಾರಿ ವರ್ಗದಲ್ಲಿ ಇದ್ದ ಅಸಮಧಾನವೇ ಕಾರಣ. ಈ ಹಿಂದಿನ ಎರಡು ಚುನಾವಣೆಗಳಲ್ಲಿ ಮಂಡಲ ಸಮಿತಿಯೇ ನಿಷ್ಕ್ರೀಯವಾಗಿದ್ದು, ಜಿಲ್ಲೆಯಲ್ಲಿರುವ ನಾಯಕರುಗಳಿಗೆ ಈ ಬಗ್ಗೆ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದಿದ್ದದ್ದು ಇವರುಗಳ ನಡಾವಳಿಕೆಯಿಂದ ಪಕ್ಷದ ಕಾರ್ಯಕರ್ತರಲ್ಲಿ ಮತದಾರರು ಹಾಗೂ ಪಕ್ಷದ ಹಿತೈಷಿಗಳು ಸಹ ಬೇಸತ್ತಿದ್ದಾರೆ. ಇದು ಅವರುಗಳ ಬಗ್ಗೆ ಆಪಾದನೆ ಮಾತ್ರ ಅಲ್ಲ. ವಾಸ್ತವಾಂಶ ಸಹ ಹೌದು, ಈ ಬಗ್ಗೆ ಪಕ್ಷ ಎಚ್ಚರ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಅಪಾರ ಬೆಲೆ ತೆರಬೇಕಾಗುತ್ತದೆ. ನಮ್ಮಗಳನ್ನು ಪಕ್ಷದಿಂದ ಅಮಾನತ್ತುಗೊಳಿಸಿದ್ದರ ಬಗ್ಗೆ ನಮಗೆ ಪಶ್ಚಾತ್ತಾಪವಿಲ್ಲ ಆದರೆ ಬೇಸರವಿದೆ. ನಿಷ್ಠಾವಂತ ಕಾರ್ಯಕರ್ತರು ಯಾರು ? ರಾಜಕೀಯವನ್ನು ಬದುಕಿಗೆ ಬಂಡವಾಳ ಮಾಡಿಕೊಂಡಿರುವವರು ಯಾರು ? ಎಂಬುದರ ಬಗ್ಗೆ ಪ್ರಾಮಾಣಿಕವಾಗಿ ಪಕ್ಷದ ಭವಿಷ್ಯದ ದೃಷ್ಟಿಯಿಂದ ಅಭಿಪ್ರಾಯ ಸಂಗ್ರಹಿಸಿ ಆನಂತರ ನಿರ್ಧಾರಕ್ಕೆ ಬರದೇ ಯಾರೋ ಹೇಳಿದ್ದನ್ನು ಕೇಳಿಕೊಂಡು ಸ್ವಾರ್ಥಕ್ಕಾಗಿ ನಿರ್ಣಯ ಕೈಗೊಂಡರೆ ಪಕ್ಷದ ಹುದ್ದೆಯಲ್ಲಿರುವವರಿಗೆ ಶೋಭೆ ತರುವುದಿಲ್ಲ ಎಂದು ಅನುಕುಮಾರ್ ಮತ್ತು ಭರತ್ ಕನ್ನೇಹಳ್ಳಿ ಹೇಳಿಕೆ ನೀಡಿದ್ದಾರೆ.

ಮೂಡಿಗೆರೆ ಬಿ.ಜೆ.ಪಿಯಲ್ಲಿ ಸಸ್ಪೆಂಡ್ ಸಂಚಲನ ; ಅನುಕುಮಾರ್ ಮನೆಯಲ್ಲಿ ನೂರಾರು ಕಾರ್ಯಕರ್ತರ ಸಭೆ : ಅಮಾನತು ಆದೇಶ ವಾಪಾಸ್ಸು ಪಡೆಯಲು ಆಗ್ರಹ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ