October 5, 2024

ಕೃತಕ ಬುದ್ಧಿಮತ್ತೆ ಸೇರಿದಂತೆ ವಿಜ್ಞಾನದ ಆವಿಷ್ಕಾರಗಳಿಂದ ಮಾನವತೆಯ ಮೇಲಿನ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಖ್ಯಾತ ಚಿಂತಕ ರಂಗಕರ್ಮಿ-ನಟ-ವಿಮರ್ಶಕ ಪ್ರಕಾಶ್‍ಬೆಳವಾಡಿ ಅಭಿಪ್ರಾಯಿಸಿದರು.

ಎಐಟಿ ಬಯಲು ರಂಗಮಂದಿರದಲ್ಲಿ ಮೂರುದಿನಗಳ ರೋಟರಿ 3182ಜಿಲ್ಲಾ ಸಮ್ಮೇಳನ ‘ನಿಸರ್ಗ-ನಿನಾದ’ದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಜೀವಿಗೆ ನೆಲೆ-ಬೆಲೆ ಇಲ್ಲ. ಜೀವನ ಗೌಣ ಆಗಿಸುತ್ತಿರುವ ಕೃತಕ ಬುದ್ಧಿಮತ್ತೆಯ ಅಪಾಯವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.

ತಾಂತ್ರಿಕತೆಯ ನಾಗಾಲೋಟದಲ್ಲಿ ಮನುಷ್ಯನಿಗಿಂತ ನೂರಾರುಪಟ್ಟು ಕ್ಷಮತೆ ಹೊಂದಿದ ರೋಬೊಟ್‍ಗಳು ಈಗಾಗಲೇ ಜಗತ್ತಿನ ವಿವಿಧೆಡೆ ಕಾರ್ಯನಿರ್ವಹಿಸುತ್ತಿವೆ. ಕೆಲವು ಕ್ಷೇತ್ರಗಳಲ್ಲಿ ಸಹಕಾರಿಯಾಗಿರುವುದು ಸತ್ಯ. ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಟರ್ಮಿನಲ್‍ನಲ್ಲಿ 52 ರೋಬೋಟ್‍ಗಳು ದಿನದ 24ಗಂಟೆ ಕಾರ್ಯನಿರ್ವಹಿಸುತ್ತಿದೆ. ಇವು ವಿಶೇಷವೇತನ ಸೌಲಭ್ಯ-ರಜೆ ಕೇಳುವುದಿಲ್ಲ. ಹಸಿವು, ಬಾಯಾರಿಕೆ, ನಿದ್ದೆ ಇನ್ನಿತರೆ ಮನುಷ್ಯನ ಅಗತ್ಯತತೆಯ ತೊಂದರೆಯೂ ಇಲ್ಲಿಲ್ಲ. ದಕ್ಷತೆಯಿಂದ ಪೂರ್ಣ ಅವಧಿ ಕಾರ್ಯನಿರ್ವಹಿಸುವುದು ಕಾಣುತ್ತೇವೆ. ಜಾತಿ, ಭಾಷೆ, ಲಿಂಗ, ಧರ್ಮ ಏನನ್ನೂ ನೋಡದೆ ಪೂರ್ವಾಗ್ರಹಪೀಡಿತವಾಗದೆ ವಸ್ತುನಿಷ್ಠವಾಗಿ ಇವು ಕಾರ್ಯನಿರ್ವಹಿಸುತ್ತಿವೆ ಎಂದರು.

ಎರಡುಸಾಲು ಕಂಟೆಂಟ್ ನೀಡಿದರೆ ಟೆಲಿಫಿಲಂಅನ್ನು ಯಂತ್ರವೇ ಸಿದ್ಧಪಡಿಸುತ್ತದೆ. ಒಂದು ವ್ಯಕ್ತಿಯನ್ನು ಸೃಷ್ಟಿಸಿ, ರಸ್ತೆಯಲ್ಲಿ ನಿಲ್ಲಿಸಿ 30ಸೆಕೆಂಡ್‍ನಲ್ಲಿ ಸಂಭಾಷಣೆ ಸಿದ್ಧಪಡಿಸಲು ಕೃತಕ ಬುದ್ಧಿಮತ್ತೆಯಿಂದ ಇಂದು ಸಾಧ್ಯವಾಗಿದೆ. ಚಿತ್ರ ಬಿಡಿಸುವುದು, ಪ್ರಬಂಧ, ಹೋಂವರ್ಕ್, ಪಿಎಚ್‍ಡಿ ಪ್ರಬಂಧ ಎಲ್ಲವನ್ನೂ ಇವೇ ಮಾಡುತ್ತವೆ. ಪ್ರಧಾನಿ ಮೋದಿ ಅವರ ಮುಖ-ಚಹರೆ-ಧ್ವನಿ, ವಿವರ ಕೊಟ್ಟರೆ ಮಲೆಯಾಳಂ ಭಾಷೆಯಲ್ಲಿ 9ನಿಮಿಷಗಳ ಭಾಷಣ ಸಿದ್ಧಪಡಿಸಿದೆ ಎಂದ ಪ್ರಕಾಶ್, ಅಂದರೆ ಪ್ರಧಾನಮಂತ್ರಿಯನ್ನೆ ಬದಲಾಗಿ ಇಡುವುದಾದರೆ ಇಂತಹ ಆವಿಷ್ಕಾರದ ಬುದ್ಧಿವಂತಿಕೆಗಿಂತ ಭಯವೇ ತಮಗಾಗುತ್ತಿದೆ ಎಂದರು.

ಹಾಲಿವುಡ್‍ನ 11,500 ಬರಹಗಾರರು 148ದಿನಗಳ ಕಾಲ ಮುಷ್ಕರ ನಡೆಸಿ ಸ್ಕ್ರಿಪ್ಟ್ ರಚನೆಯ ಪ್ರಾಮುಖ್ಯತೆಯನ್ನು ತಮಗೆ ನೀಡಬೇಕೆ ಹೊರತು ಎಐಗೆ ನೀಡಬಾರದೆಂದು ಹೋರಾಡಿದ್ದರು. ಚುನಾವಣಾ ಸಂದರ್ಭಗಳಲ್ಲಿ ಗತಿಸಿದ ರಾಜಕೀಯ ನಾಯಕರ ಮರುಸೃಷ್ಟಿಸಿ ಪ್ರಸ್ತುತ ಪ್ರಚಾರ ಭಾಷಣ ಮಾಡಿಸಲಾಗುತ್ತಿದೆ. ತಮಿಳುನಾಡಿನ ನಾಯಕ ಕರುಣಾನಿಧಿ ಅವರು ಕೋವಿಡ್ ಸಂದರ್ಭದಲ್ಲಿ ಜನರಿಗೆ ಧೈರ್ಯ, ಸ್ಥೈರ್ಯ ತುಂಬುವ ಮಾತನಾಡಿದಂತೆ ಅವರ ಪುತ್ರ ಮುಖ್ಯಮಂತ್ರಿ ಸ್ಟಾಲಿನ್ ಸರ್ಕಾರದ ಅವಧಿಯಲ್ಲಿ ಮರುಸೃಷ್ಟಿ ಮಾಡಲಾಗಿತ್ತೆಂದು ಪ್ರಕಾಶ್ ಬೆಳವಾಡಿ ಉಲ್ಲೇಖಿಸಿದರು.

ದಯೆ, ಕರುಣೆ, ಅನುಕಂಪ ಮತ್ತಿತರ ಮಾನವೀಯಗುಣಗಳೇ ಇಲ್ಲದ ಯಂತ್ರಗಳು ಎಲ್ಲ ಕೆಲಸವನ್ನೂ ಮಾಡುವುದಾದರೆ ಮನುಷ್ಯನ ಅಸ್ಥಿತ್ವ-ಅಗತ್ಯತೆಯ ಪ್ರಶ್ನೆಯೂ ಮುಂದಾಗುತ್ತದೆ. ಯಂತ್ರಗಳು ಲಾಭಕಷ್ಟೇ ಕೆಲಸ ಮಾಡುತ್ತವೆ. ಆದರೆ ರೋಟರಿ ಮಾನವೀಯತೆ ಸಂಬಂಧಗಳಿಗಾಗಿ ಕಾರ್ಯನಿರ್ವಹಿಸುತ್ತವೆ. ಸಂಸ್ಕøತಿ ಇರಬೇಕು, ಆ ನಂತರ ಕಲೆ, ಸಾಹಿತ್ಯ ಅಗತ್ಯ. ಮೌಲ್ಯಗಳು ಸಂಸ್ಕøತಿ ಆದರೆ, ಅಭಿವ್ಯಕ್ತಿ ಕಲೆ-ಸಾಹಿತ್ಯ. ಸ್ಪರ್ಧೆ-ಯುದ್ಧ ಬಿಡಬೇಕು. ಆಗಲೇ ಜೀವನ ಸುಗಮ ನಡೆಯುವ ಕಾಲು ಎಡವುದು ಸಹಜ. ನಂಬಿಕೆ ಇಂದು ವ್ಯಾಪಕವಾಗಿದೆ. ನಂಬಿಕೆಗೆ ಸಾಕ್ಷಿ ಪುರಾವೆಗಳು ಬೇಡ, ಆದರೆ ವಿಜ್ಞಾನ ಇವೆರಡನ್ನೂ ಕೇಳುತ್ತದೆ ಎಂದ ಪ್ರಕಾಶ್‍ಬೆಳವಾಡಿ, ತಮ್ಮ ದೃಷ್ಟಿಯಲ್ಲಿ ಸೂರ್ಯನೆ ಪ್ರತ್ಯಕ್ಷ ದೇವರು. ಜಗತ್ತಿನ ಎಲ್ಲೆಡೆಯೂ ಸೂರ್ಯ, ಚಂದ್ರ, ಭೂಮಿ, ಆಕಾಶ, ನೀರು, ಬೆವರು ಒಂದೇ ತರನಾಗಿರುತ್ತದೆ ಎಂದರು.

ಪ್ರಕೃತಿಯ ನಾಶ ನಿರಂತರವಾಗಿ ನಡೆದಿದೆ. ಹವಾಮಾನದ ವ್ಯತ್ಯಾಸ ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆ. ದೆಹಲಿ ನಂತರದ ಬಿಸಿಲಝಳ ಬೆಂಗಳೂರಿನಲ್ಲಿ ಕಾಣುತ್ತಿದ್ದೇವೆ. ಜಲಚರಗಳು ಹೊರಗೆ ಬರುತ್ತಿವೆ. ನಾಯಿಗಳು ಹೆಚ್ಚು ಕಚ್ಚುತ್ತಿವೆ ಇವಕ್ಕೆಲ್ಲಾ ತಾಪಮಾನದ ವ್ಯತ್ಯಯ ಕಾರಣ. ಸಾವಿರಾರು ಕೆರೆಗಳು ಇಲ್ಲವಾಗುತ್ತಿವೆ ಎಂದ ಆತಂಕಿಸಿದ ಅವರು, ಪ್ರಕೃತಿಯಲ್ಲಿ ಎಲ್ಲವೂ ಇದೆ ಆದರೆ ತ್ಯಾಜ್ಯ-ಮಾಲಿನ್ಯ ಇರುವುದಿಲ್ಲ. ಇದಕ್ಕೆ ಕಾಡೇ ಉದಾಹರಣೆ.
ಆದರೆ ಕಡಲತೀರದಲ್ಲಿ ವಿಪರೀತ ತ್ಯಾಜ್ಯ ಏಕೆಂದರೆ ನಾವು ಅಲ್ಲಿಗೆ ಹೋಗುತ್ತೇವೆ. ಮಾನವ ಸುಮ್ಮನಿದ್ದರೆ ಎಲ್ಲೆಡೆ ಸ್ವಚ್ಛತೆ ಇರುತ್ತದೆ. 18ತಿಂಗಳು ಮನುಷ್ಯ ಸುಮ್ಮನಿದ್ದರೆ ಗಂಗಾನದಿಯೆ ಪೂರ್ಣ ಸ್ವಚ್ಛಗೊಳ್ಳುತ್ತದಂತೆ. ದೇಶದಲ್ಲಿ ಅರಣ್ಯಇಲಾಖೆ ಬರುವಮುಂಚೆ ಕಾಡು ದಟ್ಟ ಮತ್ತು ಸುಭೀಕ್ಷೆಯಾಗಿದ್ದವು ಎಂಬುದು ಸತ್ಯ ಸಂಗತಿ. ಜಗತ್ತಿನ ಒಳಿತಿಗೆ ರೋಟರಿಯಂತಹ ಸಂಘಟನೆಗಳು ಬಲಗೊಳ್ಳುವುದು ಅವಶ್ಯಕ ಎಂದರು.

ರೋಟರಿ ಜಿಲ್ಲಾ ರಾಜ್ಯಪಾಲೆ ಬಿ.ಸಿ.ಗೀತಾ, ಅಂತರರಾಷ್ಟ್ರೀಯ ಪ್ರತಿನಿಧಿ ಸಂತೋಷಪ್ರಧಾನ್, ಪದಾಧಿಕಾರಿಗಳಾದ ಡಿ.ಎಸ್.ರವಿ, ಅಭಿನಂದನಶೆಟ್ಟಿ ಮತ್ತಿತರರು ಪ್ರಕಾಶಬೆಳವಾಡಿ ಅವರನ್ನು ಸನ್ಮಾನಿಸಿದರು. ಎಂ.ಆರ್.ಕಿರಣ್ ಪರಿಚಯಿಸಿ, ಸ್ವಾಗತಿಸಿದರು. ಇದಕ್ಕೆ ಮುನ್ನ ಉಡುಪಿಯ ಗಣೇಶ್‍ಆಚಾರ್ಯ ಅವರ ದಾರದ ಚಿತ್ರಕಲೆ ಗಮನಸೆಳೆಯಿತು. ಅಬ್ಧಿಗೌತಮ್‍ರ ಭರತನಾಟ್ಯ ಆಕರ್ಷಕವಾಗಿತ್ತು.

ರೋಟರಿಜಿಲ್ಲಾ ಸಮ್ಮೇಳನ ನಿಸರ್ಗ ನಿನಾದಕ್ಕೆ ತೆರೆ :  ತಂಡಸ್ಫೂರ್ತಿಯಿಂದ ಉತ್ತಮಕಾರ್ಯ: ಬಿ.ಸಿ.ಗೀತಾ

ತಂಡಸ್ಫೂರ್ತಿಯಿಂದ ಉತ್ತಮ ಕಾರ್ಯಗಳು ಸಾಧ್ಯ ಎಂದು ರೋಟರಿ 3182ಜಿಲ್ಲಾ ಗೌರ್ನರ್ ಬಿ.ಸಿ.ಗೀತಾ ನುಡಿದರು.

ಎಐಟಿ ಬಯಲು ರಂಗಮಂದಿರದಲ್ಲಿ ಮೂರುದಿನಗಳ ರೋಟರಿ 3182ಜಿಲ್ಲಾ ಸಮ್ಮೇಳನ ‘ನಿಸರ್ಗ-ನಿನಾದ’ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ಅವರು ಮಾತನಾಡಿದರು.

ಚಿಕ್ಕಮಗಳೂರಿನಲ್ಲಿ ಪ್ರಥಮಬಾರಿಗೆ ಜಿಲ್ಲಾ ಸಮ್ಮೇಳನ ಆಯೋಜನೆಗೊಂಡಿದ್ದು 87ಕ್ಲಬ್‍ಗಳಿಂದ 1430ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ. 8ನೆಯ ಜಿಲ್ಲಾ ಸಮ್ಮೇಳನ ಇದಾಗಿದ್ದು ನಿಸರ್ಗ ಮಡಿಲಿನಲ್ಲಿ ಮಾನವೀಯತೆಯ ಸೇವೆಗೆ ಹೆಚ್ಚಿನ ಸ್ಫೂರ್ತಿ-ಪ್ರೇರಣೆ ನೀಡಿದೆ ಎಂದ ಗೀತಾ, ಆಯೋಜಕ ಮೂರೂಕ್ಲಬ್‍ಗಳ ಎಲ್ಲ ಸದಸ್ಯರ ಸಹಕಾರ ಸಹಭಾಗಿತ್ವ ಸ್ಮರಣೀಯ ಎಂದರು.

ಜಿ.ಕೆ.ವೆಂಕಟೇಶ್‍ಮೂರ್ತಿ ಸಂಪಾದಕತ್ವದ ಸಮ್ಮೇಳನದ ಚಿತ್ರ ಸ್ಮರಣಸಂಪುಟ ಲೋಕಾರ್ಪಣೆಗೊಳಿಸಿದ ಗುಜರಾತಿನ ಸಂತೋಷಪ್ರಧಾನ್ ಮಾತನಾಡಿ ಕನ್ನಡ ಸುಂದರಭಾಷೆ. ಕನ್ನಡಿಗರು ಅದರಲ್ಲೂ ಮಲೆನಾಡಿಗರು ಸುಸಂಸ್ಕøತರು. ಮೂರುದಿನಗಳ ಸಮ್ಮೇಳನ ಅರ್ಥಪೂರ್ಣ ಚರ್ಚೆಯೊಂದಿಗೆ ಸಂಪನ್ನಗೊಂಡಿದೆ ಎಂದರು.

ಜಿಲ್ಲಾ ತರಬೇತುದಾರ, ಮಾಜಿ ಜಿಲ್ಲಾ ರಾಜ್ಯಪಾಲ ಡಿ.ಎಸ್.ರವಿ ಮಾತನಾಡಿ ಅನೇಕ ಚಿಂತನಾರ್ಹ ವಿಚಾರಗಳು ಇಲ್ಲಿ ಪ್ರಸ್ತಾಪಗೊಂಡಿವೆ. ಡಾ.ಸಿ.ಎನ್.ಮಂಜುನಾಥ್‍ರ ಜೀವನಶೈಲಿ ಮತ್ತು ಆರೋಗ್ಯ, ಡಾ.ರವಿಕಾಂತೇ ಗೌಡರ ಸಮಾಜ ಮತ್ತು ಕಾನೂನು, ರೂಪಾಅಯ್ಯರ್ ಅವರ ಆಧ್ಯಾತ್ಮ ಮತ್ತು ಆಧುನಿಕತೆ, ಡಾ.ಸುದರ್ಶನ್ ಅವರ ಭಾರತದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಉಪನ್ಯಾಸಗಳು ವಿಶೇಷವಾಗಿದ್ದವೆಂದು ಉಲ್ಲೇಖಿಸಿದರು.

ರೋಟರಿ ಮಾಜಿ ಜಿಲ್ಲಾ ರಾಜ್ಯಪಾಲರುಗಳಾದ ಡಾ.ಜಯಾಗೌರಿ, ಡಾ.ಚಂದ್ರಶೇಖರ್, ಅಭಿನಂದನಶೆಟ್ಟಿ, ಚುನಾಯಿತ ಗೌರ್ನರ್‍ಗಳಾದ ದೇವ್‍ಆನಂದ, ಬಿ.ಎಂ.ಭಟ್ ಮತ್ತು ಪಾಲಾಕ್ಷ ಅವಲೋಕಿಸಿ ಅಭಿನಂದಿಸಿದರು. ನಂಜುಂಡಸ್ವಾಮಿ ಮತ್ತು ಗುರುಮೂರ್ತಿ ಮಾತನಾಡಿದರು.

ಅತಿಥೇಯ ಕ್ಲಬ್ ಅಧ್ಯಕ್ಷರುಗಳಾದ ಶ್ರೀವತ್ಸವ ನಟರಾಜ್, ತನೂಜ್ ಮತ್ತು ಸುರೇಂದ್ರ ವೇದಿಕೆಯಲ್ಲಿದ್ದರು. ಸಾಂಸ್ಕೃತಿ ಕಾರ್ಯಕ್ರಮಗಳು ಗಮನ ಸೆಳೆದವು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ