October 5, 2024

ದಿನಾಂಕ 18.02.2024ರಂದು ಭಾನುವಾರ  ಮೂಡಿಗೆರೆ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ದೇವರಮನೆ ಪರ್ವತ ಶ್ರೇಣಿಯ ಪ್ರದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರು ಮೂಲದ “ಬೇರು – ಭೂಮಿ” ಮತ್ತು “ಕನ್ನಡ ಮನಸುಗಳು”, ಗ್ರೀನ್ ಫೋರ್ಸ್ ಚಿಕ್ಕಮಗಳೂರು ತಂಡಗಳು  ‘ಶ್ರೀ ಕಾಲಭೈರವೇಶ್ವರ ದೇವಾಲಯ’ದ ಆಡಳಿತ ಮಂಡಳಿ, ‘ಗ್ರಾಮದ ಹುಡುಗರು’, ತ್ರಿಪುರ’ ಗ್ರಾಮ ಪಂಚಾಯತಿ, ಹಾಗೂ ಇನ್ನಿತರ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಿಂದ ಸ್ವಯಂಪ್ರೇರಿತರಾಗಿ ಆಗಮಿಸಿದ್ದ ಸುಮಾರು 100ಕ್ಕೂ ಹೆಚ್ಚು ಮಂದಿ ಪರಿಸರ ಪ್ರೇಮಿ ಸ್ವಯಂಸೇವಕರುಗಳು ಅಭಿಯಾನದಲ್ಲಿ ಭಾಗವಹಿಸಿದ್ದರು.

ಭಾನುವಾರದ ಬೆಳಿಗ್ಗೆ 8.30ರಿಂದ ಶ್ರೀ ಕಾಲಭೈರವೇಶ್ವರ ದೇವಾಲಯದ ಸುತ್ತಲಿನ ಬೆಟ್ಟದ ಸಾಲುಗಳಲ್ಲಿ ಇಬ್ಬಿಬ್ಬರಂತೆ ತಂಡ ರಚಿಸಿಕೊಂಡು   ಮಧ್ಯಾಹ್ನ 2.30ರವರೆಗೂ ಸುಡುವ ಉರಿ ಬಿಸಿಲಿಗೂ ಲೆಕ್ಕಿಸದೇ ಪ್ರವಾಸಿಗರು ಬಿಸಾಡಿದ್ದ ತಿಂಡಿ ಪದಾರ್ಥಗಳ ಪ್ಲಾಸ್ಟಿಕ್ ಕವರುಗಳು, ನೀರು ಮತ್ತು ಮದ್ಯದ ಖಾಲಿ ಬಾಟಲಿಗಳು ಸೇರಿದಂತೆ ಸುಮಾರು ಒಂದೂವರೆ ಟನ್ನಿನಷ್ಟು ತ್ಯಾಜ್ಯವನ್ನು ಸಂಗ್ರಹಿಸಲಾಯಿತು.

ಗ್ರಾಮ ಪಂಚಾಯಿತಿ ಕಸವಿಲೇವಾರಿ ವಾಹನದಲ್ಲಿ ತ್ಯಾಜ್ಯಗಳನ್ನು ಒಯ್ದು ಕಸವಿಲೇವಾರಿ ಘಟಕಕ್ಕೆ ತಲುಪಿಸಲಾಯಿತು.

ಸದರಿ ಅಭಿಯಾನಕ್ಕೆ ಸಹಕರಿಸಿದ ಕಂದಾಯ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು – ಸಿಬ್ಬಂದಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ, ಸ್ವಯಂಸೇವಕರಿಗೆ ‘ಅಭಿನಂದನಾ ಪತ್ರ’ ವಿತರಿಸಲಾಯಿತು.

ದೇವಾಲಯದ ಸಮಿತಿಯ ವತಿಯಿಂದ ಅಭಿಯಾನದಲ್ಲಿ ಭಾಗವಹಿಸಿದವರಿಗೆ ತಿಂಡಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು.

ಅಭಿಯಾನದಲ್ಲಿ  “ಬೇರು-ಭೂಮಿ” ಯಶಸ್, “ಕನ್ನಡ ಮನಸುಗಳು” ಪವನ್ ದರೆಗುಂಡಿ, “ಗ್ರೀನ್ ಫೋರ್ಸ್ ಚಿಕ್ಕಮಗಳೂರು” ಪ್ರದೀಪ್ ಗೌಡ, ‘ಗ್ರಾಮದ ಹುಡುಗರು’ ಬೈದುವಳ್ಳಿ ಪ್ರವೀಣ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮೂಡಿಗೆರೆ ತಾಲ್ಲೂಕು ಘಟಕದ ಕಾರ್ಯದರ್ಶಿ – ಸಾಹಿತಿ ಪೂರ್ಣೇಶ್ ಮತ್ತಾವರ, ‘ಎ.ಐ.ಬಿ.ಎಮ್. ಚಿಕ್ಕಮಗಳೂರು’ ವಿದ್ಯಾರ್ಥಿಗಳಾದ ನದಿ ಪ್ರದೀಪ್ ಗೌಡ, ನಿಖಿಲ್ ಗೌಡ, ಶ್ರೀ ಕಾಲಭೈರವೇಶ್ವರ ದೇವಾಲಯ ಸಮಿತಿಯ ಧರ್ಮದರ್ಶಿಗಳಾದ ಮದನ್ ಕುಮಾರ್, ಪ್ರಕೃತಿ ಗೌಡ, ಕವಿತಾ, ಅರವಿಂದ್, ಕೃತಿ, ‘ಧೀರ ಭಗತ್ ರಾಯ್’ ಚಲನಚಿತ್ರದ ನಾಯಕ ನಟ ರಾಕೇಶ್ ದಳವಾಯಿ, ಶ್ರೀನಿವಾಸ್, ನೂತನ್ ಬೆಟ್ಟಗೆರೆ, ನವೀನ್ ನಾನ್ ಕನ್ನಡಿಗ, ನರಸಿಂಹ ಮೂರ್ತಿ, ಗಣೇಶ್ ಕೊಡ್ಲಾಡಿ, ‘ನನ್ ಮಿನಿ ರೇಡಿಯೋ’ ಹರೀಶ್, ಸುನಿಲ್ ದೇವಾಡಿಗ ಮತ್ತಿತರರು ಮುಂದಾಳತ್ವ ವಹಿಸಿದ್ದರು.

ವಾರಾಂತ್ಯದ ವೇಳೆಯಲ್ಲಿಯೂ ಬಿಡುವು ಮಾಡಿಕೊಂಡು ದೂರದ ಊರುಗಳಿಂದ ಆಗಮಿಸಿ ನಮ್ಮ ಸುಂದರ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವ  ಪ್ರಯತ್ನಕ್ಕೆ ಸ್ಥಳೀಯರು ಮತ್ತು ದೇವಾಲಯ ಸಮಿತಿಯವರ ಶ್ಲಾಘನೆ ವ್ಯಕ್ತಪಡಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ