October 5, 2024

ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಅನುಪಯುಕ್ತವಾಗಿದ್ದ ಪೀಠೋಪಕರಣಗಳನ್ನು ಲೈಫ್ ಲೈನ್ ಫೀಡ್ಸ್ (ಟೆಂಡರ್ ಚಿಕನ್) ಸಂಸ್ಥೆಯವರು ಸುಮಾರು 10 ಲಕ್ಷ ವೆಚ್ಚದಲ್ಲಿ ನವೀಕರಣಗೊಳಿಸಿಕೊಟ್ಟಿರುತ್ತಾರೆ.

ಸೋಮವಾರ ಜಿಲ್ಲಾಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕ ಕಿಶೋರ್ ಕುಮಾರ್ ಹೆಗ್ಡೆಯವರು ನವೀಕೃತ ಪೀಠೋಪಕರಣಗಳನ್ನು ಆಸ್ಪತ್ರೆಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶಾಸಕ ಹೆಚ್.ಡಿ. ತಮ್ಮಯ್ಯ ಮಾತನಾಡಿ ; ಎಲ್ಲರಿಗೂ ದೇವರು ಶ್ರೀಮಂತಿಕೆ ಕೊಡುತ್ತಾರೆ. ಆದರೆ ಎಲ್ಲರ ಮನಸ್ಸು ಶ್ರೀಮಂತವಾಗಿರುವುದಿಲ್ಲ. ಈ ಎರಡನ್ನೂ ಕಿಶೋರ್ ಕುಮಾರ್ ಹೆಗ್ಗಡೆಯವರಿಗೆ ಕೊಟ್ಟಿದ್ದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅತೀ ಹೆಚ್ಚು ಆರ್ಥಿಕ ನೆರವು ನೀಡಿರುವುದರಿಂದ ಬಡವರಿಗೆ ಅನುಕೂಲವಾಗಿದೆ ಎಂದು ಅಭಿನಂದಿಸಿದರು.

ಕಿಶೋಕ್ ಕುಮಾರ್ ಹೆಗ್ಡೆಯವರು ಚಿಕ್ಕಮಗಳೂರು ಐಡಿಎಸ್‌ಜಿ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿಗೆ ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ಡೆಸ್ಕ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ನೂತನ ವೈದ್ಯಕೀಯ ಕಾಲೇಜಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ಬಸ್ಸನ್ನು ಕೊಡುಗೆ ನೀಡಿದ್ದಾರೆ. ಇದೀಗ ಸರ್ಕಾರಿ ಆಸ್ಪತ್ರೆ ಪೀಠೋಪಕರಣಗಳನ್ನು ನವೀಕರಣಗೊಳಿಸಿಕೊಟ್ಟಿರುತ್ತಾರೆ.   ನಿಸ್ವಾರ್ಥ ಸೇವೆ ಸಲ್ಲಿಸಿ ಸಮಾಜದ ಆಸ್ತಿ ಆಗಿರುವ ಕಿಶೋರ್‌ಕುಮಾರ್ ಹೆಗ್ಗಡೆಯವರಿಗೆ ಆರೋಗ್ಯ-ಆಯಸ್ಸು ಕರುಣಿಸಲಿ ಎಂದು ಪ್ರಾರ್ಥಿಸಿದರು.

ಲೈಫ್‌ಲೈನ್ ಫೀಡ್ಸ್ ಸಂಸ್ಥೆಯ ಸಂಸ್ಥಾಪಕ ಕಿಶೋರ್‌ಕುಮಾರ್ ಹೆಗ್ಡೆ ಮಾತನಾಡಿ, ಓರ್ವ ಸರ್ಕಾರಿ ಅಧಿಕಾರಿ ಖಾಸಗಿಯವರ ಬಳಿ ಬಂದು ಸೌಲಭ್ಯ ಕೇಳುವ ಅಗತ್ಯತೆ, ಅವಶ್ಯಕತೆ ಇರುವುದಿಲ್ಲ. ಆದರೂ ಜಿಲ್ಲಾ ಸರ್ಜನ್ ಡಾ|| ಮೋಹನ್‌ಕುಮಾರ್ ರವರು ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವುದನ್ನು ಅಭಿನಂದಿಸಿದರು.

1.50 ಕೋಟಿ ರೂ ವೆಚ್ಚದ ವಸ್ತುಗಳು ಗುಜರಿಗೆ ಹಾಕಿದರೆ 50 ಲಕ್ಷಕ್ಕೂ ಹೋಗುವುದಿಲ್ಲ ಈ ನಿಟ್ಟಿನಲ್ಲಿ ಆಸ್ಪತ್ರೆಯ ಮಂಚಗಳು ಮತ್ತು ಪರಿಕರಗಳನ್ನು ದುರಸ್ಥಿಮಾಡಿಕೊಟ್ಟಿರುವುದರಿಂದ ಸರ್ಕಾರಕ್ಕೆ ಹೊರೆ ಕಡಿಮೆ ಮಾಡಿ, ಜನರ ಉಪಯೋಗಕ್ಕೆ ನೀಡಿದ್ದೇವೆ ಎಂದು ಹೇಳಿದರು.

ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ಹಾಲಿ ಇರುವ ಕಣ್ಣಿನ ಆಸ್ಪತ್ರೆ ಕಟ್ಟಡವನ್ನು ಸುಸಜ್ಜಿತವಾದ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಭರವಸೆ ನೀಡಿದ ಅವರು ಇದರಿಂದಾಗಿ ಬಡ ಜನರಿಗೆ, ಕಷ್ಟದಲ್ಲಿರುವವರಿಗೆ ತುಂಬಾ ಸಹಾಯವಾಗುತ್ತದೆಂದು ಹೇಳಿದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಸರ್ಜನ್ ಡಾ|| ಮೋಹನ್‌ಕುಮಾರ್ ಮಾತನಾಡಿ, ಹಾಲಿ ಇದ್ದ 44 ಮಂಚಗಳನ್ನು ದುರಸ್ಥಿ ಮಾಡಿ, ಬಣ್ಣ ಬಳಿದು ವಾಪಸ್ ನೀಡಿದ್ದು ವಾರ್ಡ್‌ಗಳಲ್ಲಿ ಇಡಲಾಗಿದೆ. ಬೆಡ್‌ಸೈಡ್ ಲಾಕರ್ 85, ಗಾಡ್ರೇಜ್ ಬೀರು 3, ರ್‍ಯಾಕ್‌ಗಳು 11, ೨ ವೀಲ್‌ಚೇರ್, ಸ್ಟ್ರಕ್ಚರ್ 3, ಲಗೇಜ್ ಫ್ಯಾನ್ 3, ಟ್ರೀಟ್‌ಮೆಂಟ್ ಸ್ಟ್ಯಾಂಡ್ 2 ಮುಂತಾದವುಗಳನ್ನು ದುರಸ್ಥಿಮಾಡಿಕೊಟ್ಟಿದ್ದಾರೆಂದು ಹೇಳಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಜಲಜಾಕ್ಷಿ, ಲೈಫ್‌ಲೈನ್ ಫೀಡ್ಸ್ ಸಂಸ್ಥೆಯ ಆಡಳಿತಾಧಿಕಾರಿ ಸುಬ್ರಮಣ್ಯ, ಜನರಲ್ ಮ್ಯಾನೇಜರ್ ಗಣೇಶ್ ಕಾಮತ್, ಶಮಿ, ರವಿ ಹಾಗೂ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ