October 5, 2024

ಬೇರುಭೂಮಿ ಮತ್ತು ಕನ್ನಡ ಮನಸುಗಳ ಕರ್ನಾಟಕ ತಂಡ ಹಾಗೂ ಚಿಕ್ಕಮಗಳೂರಿನ ಗ್ರೀನ್ ಫೋರ್ಸ್ ವತಿಯಿಂದ ಪ್ಲಾಸ್ಟಿಕ್ ಸ್ವಚ್ಚತಾ ಅಭಿಯಾನವನ್ನು ಫೆಬ್ರವರಿ 18ರ ಭಾನುವಾರದಂದು ಆಯೋಜಿಸಲಾಗಿದೆ ಎಂದು ಬೇರು ಭೂಮಿ ತಂಡದ ಮುಖ್ಯಸ್ಥ ಯಶಸ್ ತಿಳಿಸಿದ್ದಾರೆ.

ಅವರು ಪತ್ರಿಕಾ ಹೇಳಿಕೆ ನೀಡಿ ಮಾತನಾಡಿ ‘ಕನ್ನಡಿಗರಾದ ನಾವು  ಹಸಿರ ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ,ಮುಂದಿನ ಪೀಳಿಗೆಗೆ ಸ್ವಚ್ಚಂದ ಹಸಿರ ಪರಿಸರ ಉಳಿಸಲು ನಾವು ಪ್ರಯತ್ನಿಸಬೇಕಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ನಿರ್ಮಾಣ ಮಾಡಬೇಕು. ಅದರಂತೆ ಫೆ18 ಭಾನುವಾರದಂದು ಬೆಳಿಗ್ಗೆ  8.30ಕ್ಕೆ ದೇವರಮನೆಯ ಕಾಲಭೈರವೇಶ್ವರ ದೇವಸ್ಥಾನದ ಹಸಿರ ಪರಿಸರದಲ್ಲಿ ಪ್ಲಾಸ್ಟಿಕ್ ಸ್ವಚ್ಚತಾ ಅಭಿಯಾನವನ್ನು ಅರಣ್ಯ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿ, ದೇವಸ್ಥಾನ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಮ್ಮಿಕೊಂಡಿದ್ದೇವೆ.

ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಅಭಿಯಾನವನ್ನು ಯಶಸ್ವಿ ಗೊಳಿಸಬೇಕೆಂದು ತಂಡದ ಮುಖ್ಯಸ್ಥ ಯಶಸ್ ಅವರು ಪತ್ರಿಕಾಹೇಳಿಕೆಯಲ್ಲಿ ಕೋರಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗೆ 7676014881ಕರೆ ಮಾಡಬಹುದು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ