October 5, 2024

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ  ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದಯೋನ್ಮುಖ ಕವಯಿತ್ರಿ ಶ್ರೀಮತಿ ಬಿ.ಎಂ. ಪ್ರಮೀಳಾ ಬೈದುವಳ್ಳಿ  ಅವರ ಕವನಸಂಕಲನ “ಸಿರಿಮಲ್ಲಿಗೆ” ಯು ಲೋಕಾರ್ಪಣೆಗೊಂಡಿತು.

ಮೂಡಿಗೆರೆ ತಾಲ್ಲೂಕಿನ ಬೈದುವಳ್ಳಿ ಮೂಲದ ಬಿ.ಎಂ.ಪ್ರಮೀಳ ಪ್ರಸ್ತುತ ಚಿಕ್ಕಬಳ್ಳಾಪುರದಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಯಿತ್ರಿಯಾಗಿ, ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

ಸಿರಿಮಲ್ಲಿಗೆ ಸಾಹಿತ್ಯ ವೇದಿಕೆ ಹಾಗೂ ತನ್ಮಯಿ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಸಿದ್ದ ಕವಿ ಬಿ.ಆರ್. ಲಕ್ಷ್ಮಣರಾವ್ ಅವರು ‘ ಸಿರಿಮಲ್ಲಿಗೆ’ ಸಂಕಲನವನ್ನು ಬಿಡುಗಡೆ ಗೊಳಿಸಿ ಮಾತನಾಡುತ್ತಾ” ಬಿ.ಎಂ.ಪ್ರಮೀಳಾ ಅವರು ಈಗಾಗಲೇ  ಆಕರ್ಷಕವಾಗಿ ಬರೆಯುವ ಕಾವ್ಯಶಕ್ತಿಯನ್ನು ಒಡಮೂಡಿಸಿ ಕೊಂಡಿದ್ದು, ತನ್ನದೇ ಆದ ನುಡಿ ಕಟ್ಟನ್ನು, ತನ್ನ ಸುತ್ತಲಿ ಜಗತ್ತನ್ನು ಸೂಕ್ಷ್ಮವಾಗಿ ನೋಡುವ ವಿಶಿಷ್ಟ ಪರಿಯನ್ನು ಗಳಿಸಿಕೊಂಡಿದ್ದಾರೆ” ಎಂದರು.

‘ ಸಿರಿಮಲ್ಲಿಗೆ’ ಕೃತಿಯನ್ನು ವಿಮರ್ಶಿಸಿದ ಖ್ಯಾತ ವಿಮರ್ಶಕಿ ಡಾ.ಪಿ. ಚಂದ್ರಿಕಾ ಅವರು ” ಇಲ್ಲಿ ಹೆಣ್ತನದ ಮನೋಭೂಮಿಕೆಯಿಂದ ಕಂಡ ಪ್ರೀತಿಯ ವೈರುಧ್ಯಗಳನ್ನು ಪ್ರಮೀಳಾ ಬಲು ಸಮರ್ಥವಾಗಿ ಅಭಿವ್ಯಕ್ತಿಸಿದ್ದಾರೆ‌. ಪ್ರೀತಿಯ ಪ್ರಗಾಥವೇ ಆಗಿರುವ ಇವರ ಕವಿತೆಗಳು ಒಂದು ಪ್ರಾರ್ಥನೆಯಂತಿವೆ. ಈ ಕವಿತೆಗಳು ಪ್ರೀತಿಯ ಧ್ಯಾನದಲ್ಲಿ ನಿಂತಂತೆ ತೋರಿದರೂ ಇವು ಆಳದಲ್ಲಿ ಅನೇಕ ಸಂಚಾರಿ ಭಾವಗಳನ್ನು ಹೊಂದಿ ಸಾರ್ಥಕ ವಾದ ಯಶಸ್ವಿ ಕವಿತೆಗಳೆನಿಸುತ್ತವೆ” ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಲೇಖಕಿ ಡಾ. ವಸುಂಧರಾ ಭೂಪತಿ  ಮಾತನಾಡಿ ” ಮೊದಲ ಕೃತಿಯಲ್ಲಿಯೇ  ಅತ್ಯಂತ ಪ್ರಬುದ್ಧ ಕವಿತೆಗಳನ್ನು ನೀಡಿರುವ ಪ್ರಮೀಳಾ ಅವರಿಗೆ  ಉಜ್ವಲ ಭವಿಷ್ಯವಿದೆ. ಅತ್ಯಂತ ಜತನದಿಂದ  ತನ್ನ ಕಾವ್ಯಶಕ್ತಿಯನ್ನು ಹೆಚ್ಚಿಸಿಕೊಂಡು ಪ್ರಮೀಳಾ ಅವರು    ಇನ್ನೂ ಸಮೃದ್ದರಾಗಲಿ “ಎಂದು ಹಾರೈಸಿದರು.

‘ ಸಿರಿಮಲ್ಲಿಗೆ’ ಯ ಕವಯಿತ್ರಿ ಬಿ.ಎಂ.ಪ್ರಮೀಳಾ ಅವರು ಮಾತನಾಡಿ ” ಮಲೆನಾಡಿನ ಮುಕುಟಮಣಿ ಮೂಡಿಗೆರೆಯಿಂದ ಒಡಮೂಡಿಬಂದ ನಾನು ಕಾಡಿನ ಪರಿಸರದಲ್ಲಿ ರೂಪುಗೊಂಡವಳು‌. ಕಾಡಿನ ಪ್ರಶಾಂತತೆ , ನೀರವತೆಗಳ  ಪ್ರೀತಿಸುತ್ತಾ ಕವಿತೆ ಕಟ್ಟಿದವಳು.  ಕಾವ್ಯ ನನ್ನ ಜೀವದ್ರವ್ಯ. ಈ ಬಿಡಿಗವಿತೆಗಳ ಹೂ ಮಾಲೆಯೇ ನನ್ನ ಈ ‘ ಸಿರಿಮಲ್ಲಿಗೆ’ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಸತೀಶ್ ಕುಮಾರ್ ಹೊಸಮನಿ,  ಸೌಂಡ್ ಇಂಜಿನಿಯರ್ ಹಾಗೂ ಸಂಗೀತ ನಿರ್ದೇಶಕ ಪಳನಿ ಡಿ.ಸೇನಾಪತಿ  ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ‌. ಕೋಡಿ ರಂಗಪ್ಪ ಉಪಸ್ಥಿತರಿದ್ದರು

ಸಿರಿ ಮಲ್ಲಿಗೆ ಕೃತಿಯ ಮುಖಪುಟ  ಚಿತ್ರ ಕಲಾವಿದರಾದ ಶ್ರೀ ಪಾದ ಹಾಗೂ  ಖ್ಯಾತ ಮುದ್ರಕರಾದ ಸ್ವಾನ್ ಕೃಷ್ಣಮೂರ್ತಿ ಅವರಿಗೆ ಗೌರವ ಸಮರ್ಪಣೆ  ಸಲ್ಲಿಸಲಾಯಿತು.

ಈ ಸುಸಂದರ್ಭದಲ್ಲಿ ಖ್ಯಾತ ಕವಯಿತ್ರಿ ಮಮತಾ ವಾರನಹಳ್ಳಿ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗಿತು.   ಕವಿಗೋಷ್ಠಿಯಲ್ಲಿ ಮೂವತ್ತೆರಡು ಕವಿ ಕವಯಿತ್ರಿ ಯರು ತಮ್ಮ ಕವಿತೆಗಳನ್ನು ವಾಚಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಖ್ಯಾತ ಗಾಯಕರಾದ ಮುಖೇಶ್ ಮಡಿಕೇರಿ ಹಾಗೂ ಕೃಷ್ಣಮೂರ್ತಿ ಎನ್.ಡಿ ಅವರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಿತು‌

ಕಾರ್ಯಕ್ರಮವನ್ನು ಖ್ಯಾತ ನಿರೂಪಕಿ ಅರುಣಾಪ್ರಕಾಶ್  ಅವರು  ನಿರೂಪಿಸಿದರು. ಕವಿ ವೈ.ಬಿ.ಎಚ್  ಜಯದೇವ್  ಸ್ವಾಗತಿಸಿದರು.

ನೂರಾರು ಸಂಖ್ಯೆಯಲ್ಲಿ  ನಾಡಿನ ಮೂಲೆಮೂಲೆಗಳಿಂದ ಆಗಮಿಸಿದ್ದ ಸಾಹಿತ್ಯಾಸಕ್ತ ರು ಅಭಿಮಾನಿಗಳು  ಈ ‘ ಸಿರಿಮಲ್ಲಿಗೆ ‘ ಕಾರ್ಯಕ್ರಮದ  ಯಶಸ್ಸಿನಲ್ಲಿ ಭಾಗಿಯಾದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ