October 5, 2024

ಕಾಫಿ ಸಾಲಕ್ಕೆ ಸಂಬಂಧಿಸಿದಂತೆ ಬೆಳೆಗಾರರಿಗೆ ಬ್ಯಾಂಕ್ ಗಳಿಂದ SARFAESI ಕಾಯ್ದೆ ಪ್ರಕಾರ e-auction (ಇ- ಹರಾಜು) ನೊಟೀಸ್ ಗಳು ಬರುತ್ತಿರುವುದು ಬೆಳೆಗಾರರ ಸಂಘಟನೆಯ ಗಮನಕ್ಕೆ ಬಂದಿರುತ್ತದೆ.

ಈ ಬಗ್ಗೆ ನೋಟೀಸ್ ಪಡೆದ ಬೆಳೆಗಾರರ ಜೊತೆ   ಹಲವು ಸಭೆಗಳನ್ನು ನಡೆಸಿ ಮೂಡಿಗೆರೆ ಕೆನರಾ ಬ್ಯಾಂಕ್ ಎದುರು ಪ್ರತಿಭಟನಾ ಸಭೆಯನ್ನು ಸಹ ಆಯೋಜಿಸಿ ಬ್ಯಾಂಕ್ ಗಳಿಗೆ ತೀವ್ರವಾದ ಎಚ್ಚರಿಕೆ ನೀಡಲಾಗಿತ್ತು.

ಆದರೂ ಬ್ಯಾಂಕ್ ಗಳು ಈಗಲೂ ಕೂಡ ಬೆಳೆಗಾರರ ವಿರುದ್ಧ SARFAESI ನೋಟೀಸ್ ಜಾರಿ ಮಾಡಿ ವೃತ್ತಪತ್ರಿಕೆಗಳಲ್ಲಿ ಬೆಳೆಗಾರರ ಹಾಗೂ ತೋಟದ ಮಾಹಿತಿಯನ್ನು ಪ್ರಕಟಿಸಿ ಇ-ಹರಾಜು (ಆನ್ ಲೈನ್ ಹರಾಜು) ನಡೆಸುತ್ತಲೇ ಇವೆ.

ಮೂಡಿಗೆರೆ ತಾ ಬೆಳೆಗಾರರ ಸಂಘದ ವತಿಯಿಂದ ಈ ರೀತಿ ಬ್ಯಾಂಕ್ ಗಳಿಂದ ಬೆಳೆಗಾರರಿಗೆ ಆಗುತ್ತಿರುವ ಕಿರುಕುಳದ ವಿರುದ್ಧ ಬೆಳೆಗಾರರಿಗೆ ಕಾನೂನು ನೆರವು ದೊರಕಿಸಿ ಕೊಡಲು ಮುಂದಾಗಿದ್ದೇವೆ. ಈಗ ಹರಾಜು ನೊಟೀಸ್ ಪಡೆದಿರುವ ಬೆಳೆಗಾರರಿಗೆ ಅತ್ಯಂತ ತುರ್ತಾಗಿ ರಾಜ್ಯ ಉಚ್ಟ ನ್ಯಾಯಾಲದಿಂದ ತಡೆಯಾಜ್ಞೆ ದೊರಕಿಸಿಕೊಡಲು ಸಂಘ ಈಗಾಗಲೇ ಹಲವಾರು ಸಮರ್ಥರಾದ ವಕೀಲರನ್ನು ಸಂಪರ್ಕಿಸಿದ್ದೇವೆ.

ಈ ಮೂಲಕ ನಾವು ಬೆಳೆಗಾರರಲ್ಲಿ ವಿನಂತಿಸುವುದೇನೆಂದರೆ ಬ್ಯಾಂಕ್ ಗಳಿಂದ ತಮಗೆ ಯಾವುದೇ ರೀತಿಯ ಡಿಮಾಂಡ್ ನೋಟೀಸ್ / ಪೊಸೆಷನ್ ನೋಟೀಸ್ / ಹರಾಜು ನೋಟೀಸ್ ಜಾರಿ ಆದರೆ ಆ ಕೂಡಲೇ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷರು/ಕಾರ್ಯದರ್ಶಿಗಳ ಗಮನಕ್ಕೆ ತರುವುದು. ತಮ್ಮಲ್ಲಿ ಲಭ್ಯವಿರುವ ದಾಖಲೆಗಳನ್ನು ಹಾಗೂ ನೊಟೀಸ್ ಗಳನ್ನು ಒಂದು ಪ್ರತಿ Xerox ಮಾಡಿಸಿ ಸಂಘಟನೆಗೆ ತಲುಪಿಸುವುದು.

ಸಂಘಟನೆಯ ಪದಾಧಿಕಾರಿಗಳು ಅಗತ್ಯ ಸಂದರ್ಭಗಳಲ್ಲಿ ಬ್ಯಾಂಕ್ ನ ಉನ್ನತಾಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಸಾಲದ ಕುರಿತು ಸಮಾಧಾನಕರ ತೀರುವಳಿಗಾಗಿ ಪ್ರಯತ್ನಿಸುತ್ತಾರೆ.

ಒಂದು ವೇಳೆ ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗುವ ಸಂದರ್ಭದಲ್ಲಿ ಸೂಕ್ತ ವಕೀಲರ ನೆರವು ದೊರಕಿಸಿಕೊಡಲು ತೀರ್ಮಾನಿಸಲಾಗಿದೆ.

ಬೆಳಗಾರರಿಗೆ ತಮ್ಮ ಹಾಗೂ ತಮ್ಮ ಸಂಪರ್ಕದ ಯಾರಿಗಾದರೂ ಬ್ಯಾಂಕ್ ಗಳಿಂದ ನೊಟೀಸ್ ಜಾರಿ ಆಗಿದ್ದರೆ ಈ ಕೂಡಲೇ ವಿಳಂಬ ಮಾಡದೆ ಈ ಕೆಳಕಂಡ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಲು ಕೋರಲಾಗಿದೆ

ಬಿ.ಆರ್ ಬಾಲಕೃಷ್ಣ ಬಾಳೂರು, ಅಧ್ಯಕ್ಷರು ಮೊ : 94480 07091

ಕೆ.ಡಿ. ಮನೋಹರ್, ಗೌರವ ಕಾರ್ಯದರ್ಶಿ, ಮೊ : 94482 10807

ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ