October 5, 2024

ಮೂಡಿಗೆರೆ ಪಟ್ಟಣದ ಸಂತ ಅಂತೋಣಿ ಚರ್ಚಿನಲ್ಲಿ ವಾರ್ಷಿಕ ಹಬ್ಬ, ಬಲಿ ಪೂಜೆ, ವಿಭಕ್ತಿಕಾರ್ಯ ಹಾಗೂ ಸ್ತಬ್ದ ಚಿತ್ರದೊಂದಿಗೆ ಮಂಗಳವಾರ ರಾತ್ರಿ ಮೆರವಣಿಗೆ ನಡೆಯಿತು. ಪಟ್ಟಣ ಸೇರಿದಂತೆ ವಿವಿದ ಊರುಗಳಿಂದ ಆಗಮಿಸಿದ್ದ ಕ್ರೈಸ್ತ ಸಮುದಾಯದವರು ಚರ್ಚ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಶಿವಮೊಗ್ಗದ ವಂದನೀಯ ಸ್ವಾಮಿ ಸ್ಟಾನಿ.ಡಿ’ಸೋಜಾ ಭಕ್ತರಿಗೆ ಪ್ರಭೋದನೆ ನೀಡಿ ಭಯ, ವಿಶ್ವಾಸ, ನಂಬಿಕೆ ಇವುಗಳಿಂದ ಮಾತ್ರ ಭರವಸೆಯ ಜೀವನ ನಡೆಸಲು ಸಾಧ್ಯ. ಪ್ರತಿದಿನ ದೇವರನ್ನು ಸ್ಮರಿಸುವವರು ಸಮಾಜಕ್ಕೆ ಎಂದಿಗೂ ಕೆಡುಕನ್ನು ಬಗೆಯುವುದಿಲ್ಲ. ತಾನು ಬದುಕಿ ಇನ್ನೊಬ್ಬರನ್ನು ಬದುಕಲು ಬಿಡುವುದೇ ನಮ್ಮ ಜೀವನದ ಉದ್ದೇಶವಾಗಿರಬೇಕು. ಇಂದಿನ ಆದುನಿಕ ಯುಗದಲ್ಲಿ ತಾನು ಮಾತ್ರ ಐಷಾರಾಮವಾಗಿ ಬದುಕಬೇಕೆಂಬ ಮನೋಭಾವನೆ ಕೆಲವರಲ್ಲಿದೆ. ಇದರಿಂದಾಗಿಯೇ ಈಗ ಸಮಾಜದಲ್ಲಿ ಅಹಿತಕರವಾದ ಪೈಶಾಚಿಕ ಕೃತ್ಯಗಳು ನಡೆದು ಸಮಾಜ ಕಲುಷಿತಗೊಳ್ಳಲು ಕಾರಣವಾಗಿದೆ.ಅಂತಹ ಮನೋಭಾವನೆಯಿಂದ ಹೊರಬಂದು ಜಗತತಿನ ಒಳಿತಿನ ಕಡೆಗೆ ಯೋಚಿಸಬೇಕು ಎಂದು ಹಿತ ನುಡಿದರು.

ಕೆಲವರಲ್ಲಿ ಅತಿಯಾದ ಶ್ರೀಮಂತಿಕೆ ತುಂಬಿಕೊಂಡಿದೆ. ಅತಂಹ ಶ್ರೀಮಂತರು ಸಮಾಜದಲ್ಲಿನ ಬಡವರ್ಗದವರನ್ನು ಸಹಾಯಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಲ್ಲಿ ದೇವರು ಅಂತಹ ಶ್ರೀಮಂತರಿಗೆ ದೇವರು ಸಕಲ ರೀತಿಯಲ್ಲೂ ಸಹಾಯ ಮಾಡುತ್ತಾನೆ. ದೇವರಲ್ಲಿ ನಂಬಿಕೆಯಿಟ್ಟು ಪೂಜೆ ಪುರಸ್ಕಾರ ಮಾಡುವುದು ಪ್ರತಿಯೊಬ್ಬ ಮಾನವರ ಕರ್ತವ್ಯ.. ನಾವು ನಮ್ಮ ನೆರೆಹೊರೆಯವರಿಗೆ ಸಹಾಯ ಮಾಡುವ ಸಂಧರ್ಭದಲ್ಲಿ ಅವರ ಜಾತಿ, ಕುಲ ಧರ್ಮ ಯಾವುದನ್ನು ನೋಡದೆ ಮಾನವೀಯ ಮೌಲ್ಯದಡಿ ಸಹಾಯ ಮಾಡುವುದರಿಂದ ಅಂತಹ ಸಹಾಯ ಸ್ವೀಕರಿಸುವವರ ಹಾರೈಕೆಯಿಂದಾಗಿ ದೇವರು ನಮಗೆ ಹತ್ತಿರ ವಾಗುವುದರ ಜೊತೆಗೆ ಸಹಾಯ ಪಡೆದವರು ಚೇತರಿಸಿಕೊಳ್ಳಲು ಸಾಧ್ಯವಿದೆ. ಪ್ರತಿವರ್ಷ ಚರ್ಚಿನಲ್ಲಿ ನಡೆಸುವ ಹಬ್ಬಗಳಲ್ಲಿ ಮನುಕುಲಕ್ಕೆ ಮಾತ್ರವಲ್ಲದೆ ಜಗತ್ತಿನ ಸಕಲ ಜೀವರಾಶಿಗಳ ಒಳಿತಿಗಾಗಿ ಪ್ರಾರ್ಥಿಸಲಾಗುತ್ತದೆ ಎಂದು ತಿಳಿಸಿದರು.

ಪ್ರಾರಂಭದಲ್ಲಿ ಮಾತೆ ಮರಿಯಮ್ಮ ಅವರನ್ನು ಮೀನಿನ ಆಕಾರದ ಸ್ತಬ್ದ ಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮೂಡಿಗೆರೆ ಚರ್ಚಿನ ಧರ್ಮಗುರುಗಳಾದ ಸುನಿಲ್ ರೋಡ್ರಿಗಸ್, ಜೆರೋಮ್ ನೊರೋನ್ಹ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ