October 5, 2024

ಮೂಡಿಗೆರೆ ಜೇಸಿಐ ವತಿಯಿಂದ ಪಟ್ಟಣದ ಸ್ವಚ್ಚತೆಯಲ್ಲಿ ನಿರತರಾಗಿರುವ ಮತ್ತು ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರನ್ನು ಗೌರವಿಸಲಾಯಿತು.

ಪಟ್ಟಣದ ಜೇಸಿ ಭವನದಲ್ಲಿ  ಏರ್ಪಡಿಸಿದ್ದ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ಸ್ ಕಾರ್ಯಕ್ರಮ ಉದ್ಘಾಟಿಸಿ ಜೇಸಿಐ ಪೂರ್ವಾಧ್ಯಕ್ಷ ಹಾಲೂರು ರವಿ ಮಾತನಾಡಿದರು.

ಮುಖ್ಯವಾಹಿನಿಗೆ ಬಾರದೇ ಎಷ್ಟೋ ಮಂದಿ ಪ್ರತಿಭೆಗಳು ಹಾಗೂ ಜನರ ಕಣ್ಣಿಗೆ ಕಾಣದಂತೆ ಜನಪರವಾದ ಕಾರ್ಯಗಳನ್ನು ಮಾಡುವ ವ್ಯಕ್ತಿಗಳು ಇರುತ್ತಾರೆ. ಅಂತವರನ್ನು ಗುರುತಿಸುವ ಕಾರ್ಯವನ್ನು ಸಂಘ ಸಂಸ್ಥೆಗಳು ಮಾಡಬೇಕಿದೆ ಎಂದು  ಹೇಳಿದರು. ಈ ಸಮಾಜದಲ್ಲಿ ಅನೇಕ ಪ್ರತಿಭೆಗಳಿಗೆ ಉತ್ತಮ ವೇದಿಕೆ ಸಿಗದೇ ಎಲೆಮರೆಕಾಯಿಯಂತೆ ಇರುತ್ತಾರೆ. ಅಲ್ಲದೇ ಬಹುತೇಕ ಮಂದಿ ತಮ್ಮ ಗುರುತು ಮಾಡಿಕೊಳ್ಳದೇ ಜನಪರವಾದ ಕಾರ್ಯ ನಡೆಸುತ್ತಿರುತ್ತಾರೆ. ಅದೇ ರೀತಿ ಪಟ್ಟಣವನ್ನು ಸುಂದರವಾಗಿ ಕಾಣಲು ಸ್ವಚ್ಛಗೊಳಿಸುವಂತಹ ಮಹಾನ್ ಕಾರ್ಯ ನಡೆಸುವ ಪೌರ ಕಾರ್ಮಿಕರು ಕೂಡ ಸಮಾಜ ಸೇವಕರಾಗಿದಾರೆ. ಅಂತರವನ್ನು ಗುರುತಿಸು ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಜೇಸಿಐ ಅಧ್ಯಕ್ಷ ಸುಪ್ರಿತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮೂಡಿಗೆರೆ ಜೇಸಿಐ ವತಿಯಿಂದ ಸಮಾಜದಲ್ಲಿ ತಮ್ಮಷ್ಟಕ್ಕೆ ತಾವು ಸಮಾಜ ಸೇವೆಯಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸೇವಾ ನಿರತರಾಗಿರುವವರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ. ಪೌರಕಾರ್ಮಿಕರು ಪ್ರತಿದಿನ ಬೆಳಿಗ್ಗೆ ಪಟ್ಟಣವನ್ನು ಸ್ವಚ್ಚವಾಗಿಟ್ಟು, ಜನರ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರ ಸೇವೆ ಅವಿಸ್ಮರಣೀಯ ಎಂದರು.

ಈ ಸಂದರ್ಭದಲ್ಲಿ ಪೌರ ಕಾರ್ಮಿಕರಾದ ರಾಜಶೇಖರ್, ಚಂದ್ರಶೇಖರ್, ನಾರಾಯಣಮ್ಮ ಹಾಗೂ ಗಾಯಕ ಬಕ್ಕಿ ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜೇಸಿ ಕಾರ್ಯದರ್ಶಿ ದೀಕ್ಷಿತ್ ಕಣಚೂರು, ಲೇಡಿ ಜೇಸಿಐ ಅಧ್ಯಕ್ಷ ದಿವ್ಯ ಸುಪ್ರೀತ್, ಕಾರ್ಯದರ್ಶಿ ಶೃತಿ ದೀಕ್ಷಿತ್ ಹಾಗೂ ಪದಾಧಿಕಾರಿಗಳು, ಪೂರ್ವಾಧ್ಯಕ್ಷರುಗಳು,  ಸದಸ್ಯರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ