October 5, 2024

ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಮಂಡಿಸಿರುವ ಮಧ್ಯಂತರ ಬಜೆಟ್ ಬಗ್ಗೆ ಆಡಳಿತ ಪಕ್ಷದ ಬಿಜೆಪಿ ಸಂಸದರಿಗೆ ಬೇಸರ ತರಿಸಿದೆ. ಬಜೆಟ್ಜನಪರ ಬಜೆಟ್ ಅಲ್ಲ ಎಂಬುವುದು ಸಂಸದರು, ಕೇಂದ್ರ ಸಚಿವರಿಗೆ ಮನವರಿಕೆಯಾಗಿರುವುದರಿಂದ ಬಜೆಟ್ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ. ಮೋದಿ ಸರಕಾರದ ಬಜೆಟ್ನಿಂದಾಗಿ ರೈತರು, ಬಡವರು, ಸಾಮಾನ್ಯ ಜನರ ನಿರೀಕ್ಷೆಗಳು ಹುಸಿ ಯಾಗಿವೆ ಎಂದು ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್ ಟೀಕಿಸಿದ್ದಾರೆ.

ಚಿಕ್ಕಮಗಳೂರು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಮಧ್ಯಂತರ ಬಜೆಟ್ನಲ್ಲಿ ಮಲೆನಾಡು ಭಾಗದ ರೈತರು, ಕಾಫಿ ಬೆಳೆಗಾರರಿಗೆ ಭಾರೀ ಅನ್ಯಾಯವಾಗಿದೆ. ಅತಿವೃಷ್ಟಿ, ಬರದಿಂದಾಗಿ ಕಂಗಾಲಾ ಗಿದ್ದ ರೈತರು ಹಾಗೂ ಕಾಫಿ ಬೆಳೆಗಾ ರರು ಅಪಾರನಿರೀಕ್ಷೆಗಳನ್ನಿರಿಸಿ ಮೋದಿ ಸರಕಾರದ ಬಜೆಟ್ನಲ್ಲಿ ಏನಾದರೂ ಪರಿಹಾರ ಸಿಗಲಿದೆ ಎಂದುಕೊಂಡಿ ದ್ದರು. ಆದರೆ ಕೇಂದ್ರ ಸರಕಾರ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಲೆನಾಡು ಭಾಗದ ರೈತರು, ಕಾಫಿ ಬೆಳೆಗಾರರು ಬೆಳೆ ನಷ್ಟದಿಂದಾಗಿ ಸಂಕ ಷ್ಟದಲ್ಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸಾಲ ಮನ್ನಾ, ಬಡ್ಡಿ ಮನ್ನಾ ದಂತಹ ಪರಿಹಾರ ಯೋಜನೆಗಳನ್ನು ಜಾರಿ ಮಾಡಲಿದೆ ಎಂದು ರೈತರು ಭಾವಿಸಿದ್ದರು. ಆದರೆ ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ನಲ್ಲಿ ಮಲೆನಾ ಡಿನ ರೈತರಿಗೆ ನಯಾ ಪೈಸೆಯ ನೆರವು ಸಿಕ್ಕಿಲ್ಲ ಎಂದ ಅವರು, ಮಲೆನಾಡು ಭಾಗದ ಸಂಸದರು ಕೇಂದ್ರ ಸರಕಾರದ ರೈತ ವಿರೋಧಿ ಬಜೆಟ್ ವಿರುದ್ಧ ಮೌನಕ್ಕೆ ಶರಣಾಗಿರುವುದು ನಾಚಿಕೆ ಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮೋದಿ ಸರಕಾರದ ಬಜೆಟ್ ಜನಪರ ಬಜೆಟ್ ಅಲ್ಲ ಎನ್ನುವುದು ಆಡಳಿತ ಪಕ್ಷದ ಸಂಸದರಿಗೆ, ಬಿಜೆಪಿ ಮುಖಂಡರಿಗೆಅರಿವಾಗಿರುವ ಕಾರಣಕ್ಕೆ ಬಜೆಟ್ ಬಗ್ಗೆ ಅವರು ಮಾತನಾಡದೇ ಮೌನಕ್ಕೆ ಶರಣಾಗಿದ್ದಾರೆ ಎಂದರು.

ಕಳೆದ ಬಜೆಟ್ನಲ್ಲಿ ಕೇಂದ್ರ ಸರಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಐದು ಸಾವಿರ ಕೋಟಿರೂ. ಅನುದಾನ ನೀಡು ವುದಾಗಿ ಘೋಷಣೆ ಮಾಡಿತ್ತು. ಆದರೆ ಇದುವರೆಗೆ ನಯಾ ಪೈಸೆ ಅನುದಾನ ಬಂದಿಲ್ಲ ಎಂದ ಅವರು,ಕೃಷಿಕರು ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ. ಬರ ಇದ್ದರೂ ಬ್ಯಾಂಕ್ಗಳು ಸಾಲ ವಸೂ ಲಿಗೆ ನೋಟಿಸ್ ಜಾರಿ ಮಾಡಿವೆ. ಕಾಫಿ ತೋಟಗಳ ಮಾಲೀಕರ ತೋಟಗಳನ್ನು ಸರ್ಫೇಸಿ ಕಾಯ್ದೆ ಮುಂದಿಟ್ಟುಕೊಂಡು ಬ್ಯಾಂಕ್ಗಳು ಹರಾಜು ಹಾಕಲು ಮುಂದಾಗಿವೆ. ಬೆಳೆ ನಷ್ಟದಿಂದಾಗಿ ನೂರಾರು ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರ ಬದುಕು ಬೀದಿಗೆ ಬಂದಿದೆ.ಇಂತಹ ಸಂದರ್ಭದಲ್ಲಿ ಸಂಕ ಷ್ಟದಲ್ಲಿರುವ ರೈತರು, ಸಾಮಾನ್ಯ ಜನರ ನೆರವಿಗೆ ಕೇಂದ್ರ ಸರಕಾರದ ಬಜೆಟ್ ನಲ್ಲಿ ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ರೈತರ ಸಾಲ ಮನ್ನಾದಂತಹನಿರೀಕ್ಷೆಗಳನ್ನೂ ಮೋದಿ ಸರಕಾರ ಹುಸಿಗೊಳಿಸಿದೆ ಎಂದು ಟೀಕಾಪ್ರಹಾರ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೈತಪರ ಸರಕಾರ ಎಂದು ಹೇಳಿಕೆ ನೀಡಿದ್ದು, ಅದರಂತೆ ಅವರು ರೈತರಅಲ್ಪಾವಧಿ,ಧೀರ್ಘಾವಧಿ ಸಾಲದ ಅಸಲನ್ನು ಮರುಪಾವತಿ ಮಾಡಿದಲ್ಲಿ ಬಡ್ಡಿ ಮನ್ನಾ ಮಾಡುವುದಾಗಿ ಬಜೆ ಟ್ಗೂ ಮುನ್ನ ಘೋಷಣೆ ಮಾಡುವ ಮೂಲಕ ಬರದಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬಂದಿದ್ದಾರೆ. ಆದರೆ ಮೋದಿ ಸರಕಾರ ರೈತಪರ ಎನ್ನುತ್ತಿ ದೆಯೇ ಹೊರತು ರೈತರ ಸಂಕಷ್ಟದಿಂದ ಪಾರು ಮಾಡಲು ಯಾವುದೇ ಯೋಜನೆ ನೀಡಿಲ್ಲ ಎಂದರು.

ರಾಮ, ಹನುಮ, ದತ್ತ ಜನರ ಭಾವನೆಗಳಿಗೆ ಸಂಬಂಧಿಸಿದ ವಿಷಯಗಳೇ ಹೊರತು ಬದುಕಿಗೆ ಸಂಬಂಧಿಸಿದ ವಿಷಯಗಳಲ್ಲ. ಬಿಜೆಪಿಯವರು ಜನರ ಭಾವನೆಗಳನ್ನು ಕೆರಳಿಸಿ ಅಧಿಕಾರ ಗಳಿಸುತ್ತಿದ್ದಾರೆಯೇ ಹೊರತು ಜನರ ಬದುಕು ರೂಪಿಸುವ ಯೋಜನೆಗಳನ್ನು ಜಾರಿ ಮಾಡುತ್ತಿಲ್ಲ. ಭಾವನೆಗಳನ್ನು ಕೆರಳಿಸಿದರೇ ಅಧಿಕಾರ ಸಿಗುತ್ತದೇ ಎಂಬ ಭ್ರಮೆಯಲ್ಲಿ ಬಿಜೆಪಿಯವರಿ ದ್ದಾರೆ. ಮುಂದಿನ ಲೋಕಸಭೆ ಚುನಾ ವಣೆಯಲ್ಲಿ ಅದು ಫಲ ನೀಡಲ್ಲ ಎಂದ ಅವರು, ಬಿಜೆಪಿಯವರ ಬೂಟಾಟಿ ಕೆಯ ರಾಜಕಾರಣಕ್ಕೆ ಜನ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ, ಮಾಜಿ ಶಾಸಕ ಸಿ.ಟಿ.ರವಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಜಿಲ್ಲೆಯ ಜನರ ಸಮಸ್ಯೆಗಳ ಬಗ್ಗೆ ಮಾತನಾಡದೇ, ಸಿದ್ದರಾಮಯ್ಯ, ರಾಹುಲ್ ಗಾಂಧಿ, ಖರ್ಗೆ ಅವರನ್ನು ಟೀಕೆ ಮಾಡಿ ಹೋಗಿದ್ದಾರೆ. ಜನರ ಭಾವನೆಗಳನ್ನು ಕೆರಳಿಸಿದ್ದಾರೆ. ರಾಮ, ಹನುಮ ಎನ್ನುತ್ತ ಕೋಮುಧ್ವೇಷ ಹರಡುವ ಮಾತನಾ ಡಿದ್ದಾರೆ. ಬಡವರ ಮಕ್ಕಳನ್ನು ಕೆರಳಿಸಿ ಬೀದಿಗಿಳಿಸುವ ಕೋಮುವಾದಿ ರಾಜಕಾರಣಿಗಳು ತಮ್ಮ ಮಕ್ಕಳನ್ನು ವಿದೇಶಗಳಲ್ಲಿ ಓದಲು ಕಳುಹಿಸುತ್ತಿ ದ್ದಾರೆ.ಬಡವರ ಮಕ್ಕಳನ್ನು ಬೀದಿ ಹೆಣ ವನ್ನಾಗಿಸುತ್ತಿದ್ದಾರೆ ಎಂದು ಅವರು ಬಿಜೆಪಿ ಮತ್ತು ಸಂಘಪರಿವಾರದವ ರನ್ನು ತರಾಟೆಗೆ ತೆಗೆದುಕೊಂಡರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಎರಡು ಬಾರಿ ಸಂಸದೆಯಾಗಿದ್ದರೂ ತಮ್ಮ ಕ್ಷೇತ್ರಕ್ಕೆ ಯಾವುದೇ ಶಾಶ್ವತ ಯೋಜನೆಗಳನ್ನು ನೀಡಿಲ್ಲ. ಕ್ಷೇತ್ರಕ್ಕೆ ಅವರ ಕೊಡುಗೆ ಶೂನ್ಯ. ರಾಮನ ಮಂತ್ರಾಕ್ಷತೆ ನೀಡಲು ಜಿಲ್ಲೆಗೆ ಬಂದಿದ್ದ ವೇಳೆ ಅವರು ಜಿಲ್ಲೆಯ ರೈತರು, ಬೆ ಗಾರರ ಸಮಸ್ಯೆಗಳಿಗೆ ಪರಿಹಾರ ಒದಗಿ ಸುವ ಭರವಸೆ ನೀಡಿದ್ದರು. ಆದರೆ ಬಜೆಟ್ನಲ್ಲಿ ಯಾವ ಪರಿಹಾರವನ್ನೂ ಒದಗಿಸಿಲ್ಲ. ಮಂತ್ರಾಕ್ಷತೆಯಿಂದ ಬಡ ವರು,ರೈತರ ಸಮಸ್ಯೆ ಪರಿಹಾರ ಕಾಣಲ್ಲ ಎಂಬುದನ್ನು ಅವರು ಅರ್ಥ ಮಾಡಿ ಕೊಳ್ಳಬೇಕೆಂದು ಸಲಹೆ ಮಾಡಿದರು.

ಸುದ್ದಿಗೋಷ್ಠಿ ಕಾಂಗ್ರೆಸ್ ಮುಖಂಡ ರಾದ ಹಿರೇಮಗಳೂರು ರಾಮಚಂದ್ರ, ಕೆ.ಮುಹಮ್ಮದ್, ಜಯರಾಜ್ ಅರಸ್, ಡಿ.ಸಿ.ಪುಟ್ಟೇಗೌಡ, ರಮೇಶ್ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ