October 5, 2024

ಮೂಡಿಗೆರೆ ತಾಲ್ಲೂಕಿನ ಬಣಕಲ್, ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ಸ್ವಾಗತಿಸಲಾಯಿತು. ಬಣಕಲ್ ಹಾಗೂ ಕೊಟ್ಟಿಗೆಹಾರದಲ್ಲಿ ಶಾಲಾ ಮಕ್ಕಳು ಅತ್ತಿಗೆರೆ, ಬಣಕಲ್ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಪೂರ್ಣ ಕುಂಭ ಸ್ವಾಗತ ನೀಡಿ ರಥವನ್ನು ಬರಮಾಡಿಕೊಂಡರು.

ತರುವೆ ಗ್ರಾ.ಪಂ.ಅಧ್ಯಕ್ಷ ಬಿ.ಎಂ.ಸತೀಶ್ ಮಾತನಾಡಿ ಸಂವಿಧಾನದಲ್ಲಿ ಏಕರೂಪ ನೀತಿಯಿಂದ ಸರ್ವರಿಗೂ ಸಮಪಾಲು ಹಾಗೂ ಸಮಬಾಳು ನೀತಿಯನ್ನು ಜಾರಿಗೆ ತಂದು ದೇಶದಲ್ಲಿ ಸಕಲ ಸೌಲಭ್ಯಗಳು ಸಿಗುವಂತಾಗಿದೆ ಎಂದರು.

ಗ್ರಾಮದ ಹಿರಿಯರಾದ ಟಿ.ಎ.ಖಾದರ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿಯಾಗಿದ್ದಾರೆ. ಇತರ ದೇಶಗಳಲ್ಲಿ ಇಲ್ಲದಿರುವ ಎಲ್ಲಾ ನಾಗರೀಕರಿಗೆ ಕೆಲವು ಮೌಲ್ಯಯುತ ಹಕ್ಕುಗಳನ್ನು ಸಂವಿಧಾನ ನೀಡುತ್ತದೆ.ಸಂವಿಧಾನ ರೂಪಿಸಲು ಅನೇಕರ ಶ್ರಮವಿದೆ.ಸಂವಿಧಾನವು ಯಾವುದೇ ಜಾತಿ ಮತ ಬೇದವಿಲ್ಲದೇ ಎಲ್ಲಾ ನಾಗರೀಕರ ಮೂಲಭೂತ ಹಕ್ಕುಗಳನ್ನು ಗೌರವಿಸಲು ಅವಕಾಶ ನೀಡಿದೆ.ಈ ಮೂಲ ಭೂತ ಹಕ್ಕುಗಳು ನಾಗರೀಕರ ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಆಧಾರವಾಗಿದೆ ಎಂದರು.

ಸಮಾಜ ಸೇವಕ ಸಂಜಯ್ ಗೌಡ ಹಾಗೂ ಪ್ರಭಾಕರ್ ಬಿನ್ನಡಿ ಸಂವಿಧಾನದ ಬಗ್ಗೆ ಮಾತನಾಡಿದರು. ಕೊಟ್ಟಿಗೆಹಾರ ವೃತ್ತದಲ್ಲಿ ಏಕಲವ್ಯ ಹಾಗೂ ಕೊಟ್ಟಿಗೆಹಾರ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸೋಮಶೇಖರ್, ಪಿಡಿಒ ಕೃಷ್ಣ,ಗ್ರಾ.ಪಂ ಸದಸ್ಯರಾದ ಎ.ಎನ್.ರಘು,ಸುಶೀಲ,ಗ್ರಾಮಸ್ಥರಾದ ಬಿನ್ನಡಿ ಪ್ರದೀಪ್,ಟಿ.ಎಂ.ಆದರ್ಶ್,ಬಕ್ಕಿ ಮಂಜುನಾಥ್,ರವಿ,ಮಗ್ಗಲಮಕ್ಕಿ ಗಣೇಶ್,ಸೋಮಯ್ಯ,ಪ್ರಾಂಶುಪಾಲ ಬಿ.ಟಿ.ವೆಂಕಟೇಶ್,ಎಎಸೈ ಟಿ.ಕೆ.ಶಶಿ,ಕಿರಣ್,ಹಾಗೂ ಶಾಲಾ ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಇದ್ದರು.

ಬಣಕಲ್ ನಲ್ಲಿ ಮುಖ್ಯ ರಸ್ತೆಯಲ್ಲಿ ಶಾಲಾ ಮಕ್ಕಳು ಹಾಗೂ ಗ್ರಾ.ಪಂ.ವತಿಯಿಂದ ಸಂವಿಧಾನ ಜಾಗೃತಿ ಜಾಥಾಕ್ಕೆ ಭವ್ಯ ಸ್ವಾಗತ ನೀಡಲಾಯಿತು.ಎಲ್ಲಾ ಶಾಲಾ ಮಕ್ಕಳು ಮೆರವಣಿಗೆ ನಡೆಸಿ ರಥಕ್ಕೆ ಗೌರವಿಸಿ ಸಂಭ್ರಮಿಸಿದರು.ಗ್ರಾ.ಪಂ.ಅಧ್ಯಕ್ಷೆ ಆತಿಕಾಭಾನು, ಉಪಾಧ್ಯಕ್ಷ ಅದಂ,ಸದಸ್ಯರಾದ ಇರ್ಪಾನ್, ಮಧುಕುಮಾರ್, ಸುಜಾತ, ಝರಿನಾ,ಸಿರಾಜ್, ಪಿಡಿಒ ಕೃಷ್ಣಪ್ಪ, ಗ್ರಾಮಸ್ಥರಾದ ಅಹ್ಮದ್ ಭಾವಾ, ಸಬ್ಲಿ ದೇವರಾಜ್ , ಶಾಮಣ್ಣಬಣಕಲ್,ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ಶಿಕ್ಷಕರು ಮಕ್ಕಳು ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ