October 5, 2024

ನಮ್ಮ ದೇಶದ ಮುಂದಿನ ಪ್ರಜೆಗಳಾಗುವ ಮಕ್ಕಳಿಗೆ ಎಲ್ಲಾ ತರದ ಮೂಲ ಸೌಕರ್ಯ ಸಿಗಬೇಕು. ಅದಕ್ಕಾಗಿ ಸರಕಾರದ ಜತೆಗೆ ಉದ್ಯಮಿಗಳು, ಸಂಘ ಸಂಸ್ಥೆಗಳು ಹೆಚ್ಚಾಗಿ ಸಹಕಾರ ನೀಡಬೇಕಿದೆ ಎಂದು ಎನ್‍ಕೆ.ಜಿ ಇಂಡಿಯಾದ ಸಿಇಒ ಎಸ್.ಸುಧೀಂದ್ರ ಹೇಳಿದರು.

ಅವರು ಇತ್ತೀಚೆಗೆ ಮೂಡಿಗೆರೆ ತಾಲೂಕಿನ ಬಿಳಗುಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಡಿಯಾ ಕಮ್ಯುನಿಟಿ ಪ್ರಾಜೆಕ್ಟ್-ಮೆಲಿಟ್ಟಾ ಅಭಿವೃದ್ಧಿಪಡಿಸಿದ ಪರಿಕಲ್ಪನೆ ಅಭಿವೃದ್ಧಿ ಕಾಮಗಾರಿಗಳ ಅಧಿಕೃತ ಹಸ್ತಾಂತರ ಕಾರ್ಯಕ್ರಮದಲ್ಲಿ ಅಡುಗೆ ಕೋಣೆ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಉತ್ತಮ ವಾತಾವರಣ ಹಾಗೂ ಗುಣಮಟ್ಟದ ಶಿಕ್ಷಣ ದೊರಕಿದರೆ ದೇಶ ಅಭಿವೃದ್ಧಿ ಪತದಲ್ಲಿ ಸಾಗಲು ಸಾಧ್ಯವಿದೆ. ಹಾಗಾಗಿ ನಮ್ಮ ಕಂಪನಿ ಕಳೆದ 3 ವರ್ಷದಿಂದ ಪತ್ರಿ ವರ್ಷವೂ ಕಾಫಿ ಬೆಳೆಯುವ ಪ್ರದೇಶದಲ್ಲಿ ಮೂಲ ಸೌಕರ್ಯವಿಲ್ಲದ 2 ಸರಕಾರಿ ಶಾಲೆ ಗುರುತಿಸಿ ಅಗತ್ಯ ಪರಿಕರ ಒದಗಿಸುವ ಕೆಲಸ ಮಾಡುತ್ತಿದೆ. ಇದರ ಸದುಪಯೋಗ ಮಕ್ಕಳು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಬಿಇಒ ಸಿ.ಹೇಮಂತಚಂದ್ರ ಮಾತನಾಡಿ, ಮಕ್ಕಳಿಗೆ ಅನುಕೂಲವಾಗಲು ಸರಕಾರ ವಿವಿಧ ಯೋಜನೆ ಜಾರಿಗೊಳಿಸಿ ಗುಣಮಟ್ಟದ ಶಿಕ್ಷಣ ಒದಗಿಸಲು ಅನುದಾನ ನೀಡುತ್ತಿವೆ. ಇದರ ಜತೆಗೆ ಶಾಲೆಗಳಲ್ಲಿ ಎಸ್‍ಡಿಎಂಸಿ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸಿದಾಗ ಸರಕಾರಿ ಶಾಲೆ ಇನ್ನಷ್ಟು ಅಭಿವೃದ್ಧಿಯಾಗಲು ಸಾಧ್ಯವಿದೆ. ಕೊಡುವ ಮನಸ್ಸು ಹಾಗೂ ಉತ್ತಮ ಆಲೋಚನೆ ಎಲ್ಲರಲ್ಲೂ ಇರುವುದಿಲ್ಲ. ಕಂಪನಿ ಸಹಕಾರದಿಂದ ಎಲ್ಲರೂ ಈ ಶಾಲೆ ತಿರುಗಿ ನೋಡುವಂತಾಗಿದೆ. ಈ ಸೌಲಭ್ಯವನ್ನು ಸದುಪಯೋಗ ಪಡಿಸಕೊಳ್ಳುವ ಜತೆಗೆ ನಿರ್ವಹಣೆ ಮಾಡಿಕೊಂಡು ಮುಂದಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶಿಕ್ಷಕರು ಕಾಪಾಡಿಕೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮವನ್ನು ಎಸ್‍ಡಿಎಂಸಿ ಅಧ್ಯಕ್ಷ ಚಂದ್ರು ಒಡೆಯರ್ ಉದ್ಘಾಟಿಸಿದರು. ಎನ್‍ಕೆ.ಜಿ ಇಂಡಿಯಾ ಅಧಿಕಾರಿ ವೆಂಕಟಕೃಷ್ಣ ಆಂಗ್ಲಮಾಧ್ಯಮ ಪೀಠೋಪಕರಣ, ಹೆಸಗಲ್ ಗ್ರಾ.ಪಂ. ಪಿಡಿಒ ಸೌಮ್ಯ ನಲಿಕಲಿ ಪೀಠೋಪಕರಣ ಉದ್ಘಾಟಿಸಿದರು. ಹೆಸಗಲ್ ಗ್ರಾ.ಪಂ. ಸದಸ್ಯರಾದ ಸುಧಾ ಮಂಜುನಾಥ್, ಅರವಿಂದ್, ರೋಟರಿ ಅಧ್ಯಕ್ಷ ಕೆ.ಎಲ್.ಎಸ್. ತೇಜಸ್ವಿ, ಶಾಲೆ ಮುಖ್ಯ ಶಿಕ್ಷಕಿ ಚೂಡಾಮಣಿ, ಪತ್ರಕರ್ತ ಎಂ.ಹೆಚ್. ಅಮರ್ ನಾಥ್, ಜಾನಪದ ಕಲಾವಿದ ಬಕ್ಕಿ ಮಂಜು ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ