October 5, 2024

ನಗುವಿಗಿಂತ ಮಿಗಿಲಾದ ಆಭರಣವಿಲ್ಲ. ಮುಖದಲ್ಲಿ ನಗುವಿದ್ದರೆ ಅದಕ್ಕಿಂತ ದೊಡ್ಡ ಸೌಂದರ್ಯ ಮತ್ತೊಂದಿಲ್ಲ, ಎಷ್ಟೇ ಸಮಸ್ಯೆಗಳಿದ್ದರು ಅದನ್ನು ನಗುನಗುತಾ ಎದುರಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ಖ್ಯಾತ ನಿರೂಪಕಿ ದಿವ್ಯ ಆಲೂರು ಹೇಳಿದರು.

ಅವರು ಮಂಗಳವಾರ ಮೂಡಿಗೆರೆ ತಾಲ್ಲೂಕಿನ ಬಣಕಲ್ ಗ್ರಾಮದಲ್ಲಿ ಜೇಸಿಐ ಬಣಕಲ್ ವಿಸ್ಮಯ ಘಟಕದ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.  ನಾವು ಸದಾ ಸಕಾರಾತ್ಮಕ ಮನೋಭಾವನೆ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ಪ್ರತಿಯೊಂದರಲ್ಲೂ ತಪ್ಪುಗಳನ್ನು ಹುಡುಕುವುದು ಬಿಡಬೇಕು. ವಿಭಿನ್ನವಾಗಿರುವ ಜಗತ್ತಿನಲ್ಲಿ ವಿಭಿನ್ನವಾದ ಜನಗಳಿರುತ್ತಾರೆ. ಹಾಗಾಗಿ ಯಾರೊಬ್ಬರನ್ನು ಅವರ ವರ್ತನೆ ಮತ್ತು ಮಾತಿಗೆ ಟೀಕೆ ಮಾಡುವುದನ್ನು ಬಿಡಬೇಕು.

ಇಂದಿನ ಸಾಮಾಜಿಕ ಮಾಧ್ಯಮಗಳ ಭರಾಟೆಯ ಯುಗದಲ್ಲಿ ಉತ್ತಮ ವಿಚಾರಗಳಿಗೆ ಹೆಚ್ಚಿನ ಮನ್ನಣೆ ದೊರಕಬೇಕು ಆದರೆ ಇಂದು ಅಶ್ಲೀಲ ಮತ್ತು ಗಿಮಿಕ್ ವಿಚಾರಗಳಿಗೆ ಜನರು ತೋರುತ್ತಿರುವ ಆಸಕ್ತಿಯನ್ನು ಉತ್ತಮ ವಿಚಾರಗಳಿಗೆ ತೋರದೇ ಇರುವುದು ವಿಷಾದನೀಯ ಈ ಮನೋಭಾವನೆ ಬದಲಾಗಬೇಕು ಎಂದರು. ಈ ನಿಟ್ಟಿನಲ್ಲಿ ಜೇಸಿಐ ಅಂತಹ ಸಂಸ್ಥೆಗಳು ಯುವಜನರಲ್ಲಿ ಸಕರಾತ್ಮಕ ಬದಲಾವಣೆಗೆ ಕೈಗೊಳ್ಳುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಬಣಕಲ್ ಜೇಸಿಐ  ಅಧ್ಯಕ್ಷರಾಗಿ ಮದನ್ ಹೆಗಡೆ

ಮೂಡಿಗೆರೆ ತಾಲ್ಲೂಕು ಬಣಕಲ್ ವಿಸ್ಮಯ ಜೇಸಿಐ ಘಟಕದ ನೂತನ ಅಧ್ಯಕ್ಷರಾಗಿ ಮದನ್ ಹೆಗಡೆ ದೇವರಮನೆ ಇವರು ಅಧಿಕಾರ ವಹಿಸಿಕೊಂಡಿದ್ದಾರೆ.
ಮಂಗಳವಾರ ಬಣಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು.

ಘಟಕದ ನೂತನ ಕಾರ್ಯದರ್ಶಿಯಾಗಿ ಅರವಿಂದ ಕೋಳೂರು, ಉಪಾಧ್ಯಕ್ಷರಾಗಿ ಗಣೇಶ್ ಸಾರಗೋಡು, ಹೆಚ್.ಟಿ. ಪ್ರಸನ್ನ ಬಿ.ಹೊಸಳ್ಳಿ, ಗಗನ್ ಕೋಳೂರು, ರಂಜಿತ್ ಕನ್ನಗೆರೆ, ಸರ್ವೇಶ್ ಹಳಿಕೆ, ಸಹಕಾರ್ಯದರ್ಶಿಯಾಗಿ ಶ್ರೀನಾಥ್ ಬಗ್ಗಸಗೋಡು, ಖಜಾಂಚಿಯಾಗಿ ಅಶ್ವಿನ್ ಬಣಕಲ್, ಜೇಸಿರೇಟ್ ಅಧ್ಯಕ್ಷೆಯಾಗಿ ಅಕ್ಷತಾ ಮದನ್, ಕಾರ್ಯದರ್ಶಿಯಾಗಿ ತೀರ್ಥ ಅರವಿಂದ, ಜೂನಿಯರ್ ಜೇಸಿ ಅಧ್ಯಕ್ಷರಾಗಿ ಗೌರವ್ ಹೆಗಡೆ, ಕಾರ್ಯದರ್ಶಿಯಾಗಿ ಆನ್ಯ ರವಿಶಂಕರ್ ಅಧಿಕಾರ ವಹಿಸಿಕೊಂಡಿದ್ದಾರೆ.

ಪದಗ್ರಹಣ ಸಮಾರಂಭದ ಅಧ್ಯಕ್ಷತೆಯನ್ನು 2023ನೇ ಸಾಲಿನ ಅಧ್ಯಕ್ಷರಾದ ಕೃಷ್ಣೇಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೇಸಿಐ ವಲಯ ಅಧ್ಯಕ್ಷೆ ಆಶಾ ಜೈನ್, ವಲಯ ಉಪಾಧ್ಯಕ್ಷರಾದ ಸುಜನ್, ಕಾಫಿಬೆಳೆಗಾರರಾದ ಹೆಚ್.ಆರ್. ಅಶೋಕ್ ಗೌಡ ಹೆಸಗೋಡು ಭಾಗವಹಿಸಿದ್ದರು. ಬಣಕಲ್ ಜೇಸಿಐ ಸಂಸ್ಥಾಪಕ ಅಧ್ಯಕ್ಷರಾದ ಸುರೇಶ್ ಎಸ್.ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ಶರತ್ ಪಲ್ಗುಣಿ, ಜೇಸಿರೇಟ್ ಅಧ್ಯಕ್ಷೆ ನಾಟ್ಯ ರಂಜಿತ್, ಜೆಜೆಸಿ ಅಧ್ಯಕ್ಷ ದರ್ಶ್ ಶ್ರೀನಾಥ್ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ