October 5, 2024

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭಾರತೀಯ ನ್ಯಾಯ ಸಂಹಿತೆಯ ಹಿಟ್ & ರನ್ ಹೊಸ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಕರುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಹಾಗೂ ಜಿಲ್ಲಾ ಲಾರಿ ಮಾಲೀಕರ ಸಂಘದ ಮುಖಂಡರುಗಳು ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿದೆಡೆ ಪ್ರತಿಭಟನೆ ನಡೆಸಿದರು.

ವೇಳೆ ಮಾತನಾಡಿದ ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಜಿ.ಕೆ.ಶಿವಾನಂದ್ ಕೇಂದ್ರ ಸರ್ಕಾರ ಚಾಲಕರುಗಳಿಗೆ ಜಾರಿಗೆ ಮುಂದಾಗಿರುವ ಕಲಂ 106 ಉಪವಿಧಿ 1 ಮತ್ತು 2 ಹಿಟ್ & ರನ್ ಹೊಸ ಕಾಯ್ದೆ ಯಿಂದ ಹತ್ತುವರ್ಷ ಜೈಲುಶಿಕ್ಷೆ ಹಾಗೂ ಏಳು ಲಕ್ಷ ದಂಡವನ್ನು ವಿಧಿಸುವ ಕಾನೂನು ಚಾಲಕರಿಗೆ ನುಂಗಲಾರದ ತುತ್ತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಂದೊಮ್ಮೆ ಆಕಸ್ಮಿಕವಾಗಿ ಸಂಭವಿಸುವ ಅಪಘಾತಗಳಿಂದ ಸ್ಥಳದಲ್ಲಿ ಚಾಲಕರಿದ್ದರೆ ಸ್ಥಳೀಯ ಕುಟುಂಬಸ್ಥರು ಅಥವಾ ಸ್ನೇಹಿತರು ಚಾಲಕರಿಗೆ ಹಲ್ಲೆಗೆ ಮುಂದಾಗುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಇಂತಹ ಪ್ರಕರಣಗಳು ಬಹಳಷ್ಟು ನಡೆದಿವೆ. ಜೊತೆಗೆ ಲಕ್ಷಾಂತರ ರೂ.ಗಳ ದಂಡವನ್ನು ಹೊಂದಿಸುವ ಶಕ್ತಿ ಚಾಲಕರಿಗಿಲ್ಲದಿರುವ ಕಾರಣ ಕಾನೂನನ್ನು ಪರಿಶೀಲಿಸಿ ಹಿಂಪಡೆಯಬೇಕು ಎಂದರು.

ಟ್ರೇಡ್ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮ್ಶಂಕರ್ ಮಾತನಾಡಿ ಕೇಂದ್ರದ ಹೊಸ ಕಾನೂನು ಜಾರಿಗೊಂಡಲ್ಲಿ ಚಾಲಕರು ಸೇರಿದಂತೆ ಇಡೀ ಕುಟುಂಬವೇ ಬೀದಿ ಬೀಳುವ ಸ್ಥಿತಿಯಿದೆ. ಪ್ರತಿ ನಿತ್ಯವು ಕನಿಷ್ಟ ವೇತನದಲ್ಲಿ ಜೀವನ ನಡೆಸುವವರಿಗೆ ಏಕಾಏಕಿ ಲಕ್ಷಾಂತರ ರೂ. ದಂಡ ವಿಧಿಸಿದರೆ ಬದುಕುಲಾರದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು.

ಮುಂದಿನ ಏಪ್ರಿಲ್ನಲ್ಲಿ ಹೊಸ ಕಾನೂನನ್ನು ಜಾರಿಗೊಳಿಸುವ ಮಾಹಿತಿ ಹಿನ್ನೆಲೆಯಲ್ಲಿ ಇಂದು ಲಾರಿ, ಟೆಂ ಪೋ, ಆಟೋ ಚಾಲಕರು ಸೇರಿದಂತೆ ನೂರಾರು ಮಂದಿ ಪ್ರತಿಭಟನೆ ನಡೆಸಲಾಗುತ್ತಿದ್ದು ಒಂದು ವೇಳೆ ಕಾನೂನು ಜಾರಿಗೆ ಮುಂದಾದರೆ ದೇಶದ ಲಕ್ಷಗಟ್ಟಲೇ ಮಂದಿ ಚಾಲಕರ ಬದುಕು ದುಸ್ತರವಾಗಲಿರುವ ಕಾರಣ ಕೇಂದ್ರ ಸರ್ಕಾರ ಕಾಯ್ದೆ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಕಾಯ್ದೆ ಹಿಂಪಡೆಯುವಿಕೆ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿ ಕಾರಿಗಳ ಮುಖಾಂತರ ಕೇಂದ್ರ ಸರ್ಕಾರಕ್ಕೆ ಟ್ರೇಡ್ ಯೂನಿಯನ್ ಹಾಗೂ ಲಾರಿ ಸಂಘದ ಮುಖಂಡರುಗಳು ಮನವಿ ಸಲ್ಲಿಸಿದರು.

ಮೂಡಿಗೆರೆಯಲ್ಲಿ ಪ್ರತಿಭಟನೆ : ಮೂಡಿಗೆರೆ ಪಟ್ಟಣದ ಲಯನ್ಸ್ ವೃತ್ತ ಮತ್ತು ಹ್ಯಾಂಡ್ ಪೋಸ್ಟ್ ಸರ್ಕಲ್ ಗಳಲ್ಲಿ ಸಂಘದ ಸದಸ್ಯರು ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

https://youtu.be/dNx986l80n4?si=jXsW2xQXN_hGd-Ve

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ