October 5, 2024

ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಬೆಂಗಳೂರಿನಲ್ಲಿ ನಡೆದ ಮೂರನೆ ಟಿ20 ಪಂದ್ಯ ಟೈ ಮೇಲೇ ಟೈ ಆಗುವ ಮೂಲಕ ಹೊಸ ಇತಿಹಾಸ ರಚಿಸಿದೆ.

ಮೊದಲು ಬ್ಯಾಟ್ ಮಾಡಿ ಭಾರತ ನೀಡಿದ 212 ರನ್ ಬೃಹತ್ ಮೊತ್ತ ಚೇಸ್ ಮಾಡಿದ ಆಫ್ಘಾನಿಸ್ತಾನ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿ  ಪಂದ್ಯವನ್ನು ರೋಚಕ ಟೈ ಮಾಡಿಕೊಂಡಿತು. ಮೊದಲೆರಡು ಪಂದ್ಯಗಳನ್ನು ಸುಲಭವಾಗಿ ಗೆದ್ದು ಬೀಗಿದ್ದ ಭಾರತಕ್ಕೆ ಮೂರನೇ ಪಂದ್ಯದಲ್ಲಿ ಅಪ್ಘಾನ್ ಭರ್ಜರಿಯಾಗಿ ತಿರುಗೇಟು ನೀಡಿತ್ತು. ಪಂದ್ಯ ಟೈ ಆದ ಕಾರಣ ಸೂಪರ್ ಓವರ್ ಆಡಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ 16 ರನ್ ಗಳಿಸಿತು. ಗುತಿ ಬೆನ್ನಟ್ಟಿದ ಭಾರತವು ಸೂಪರ್ ಓವರ್ ಅಂತ್ಯಕ್ಕೆ 16 ಗಳಿಸಿತು. ಪಂದ್ಯ ಮತ್ತೆ ಟೈ ಆಯಿತು. ನಂತರ ಎರಡನೇ ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಒಂದು ಓವರ್ ನಲ್ಲಿ  11 ರನ್ ಸಿಡಿಸಿತು. ಈ ಗುರಿ ಬೆನ್ನಟ್ಟಲು ಆಫ್ಘಾನಿಸ್ತಾನಕ್ಕೆ ಸಾಧ್ಯವಾಗಲಿಲ್ಲ. ಮೂರು ಎಸೆತದಲ್ಲಿ ಆಫ್ಘಾನ್ 2 ವಿಕೆಟ್ ಕಳೆದುಕೊಂಡು ಸೋಲು ಕಂಡಿತು.

ಪಂದ್ಯ ಟೈ, ಸೂಪರ್ ಓವರ್ ಟೈ, ಎರಡನೇ ಸೂಪರ್ ಓವರ್‌ನಲ್ಲಿ ಭಾರತ ಗೆಲುವಿನ ಸಿಹಿ ಕಂಡಿತು. ಎರಡೆರಡು ಸೂಪರ್ ಓವರ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಅಭಿಮಾನಿಗಳಿಗೆ ಡಬಲ್ ಖುಷಿ ನೀಡಿತು. 2ನೇ ಸೂಪರ್ ಓವರ್‌ನಲ್ಲಿ ರೋಹಿತ್ ಶರ್ಮಾ ಬೌಂಡರಿ ಹಾಗೂ ಸಿಕ್ಸರ್ ಮೂಲಕ ಅಬ್ಬರಿಸಿದರು. ಆದರೆ ರಿಂಕು ವಿಕೆಟ್ ಹಾಗೂ ರೋಹಿತ್ ಶರ್ಮಾ ರನೌಟ್‌ನಿಂದ ಭಾರತದ ಆಟ ಅಂತ್ಯಗೊಂಡಿತು. ಕೇವಲ 11 ರನ್ ಸಿಡಿಸಿದ ಭಾರತ ತಂಡ ಆಫ್ಘಾನಿಸ್ತಾನಕ್ಕೆ ಸುಲಭ 12 ರನ್ ಟಾರ್ಗೆಟ್ ನೀಡಿತು.

ಸುಲಭ ಗುರಿ ಚೇಸ್ ಮಾಡಲು ಬಂದ ಅಫ್ಘಾನಿಸ್ತಾನ ಆರಂಭಿ 3 ಎಸೆತದಲ್ಲಿ 2 ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. ಆಫ್ಘಾನಿಸ್ತಾನ ಕೇವಲ 1 ರನ್ ಸಿಡಿಸಿ ಸೋಲೋಪ್ಪಿಕೊಂಡಿತು. ಆದರೆ ಎರಡೆರಡು ಸೂಪರ್ ಓವರ್ ಪಂದ್ಯದ ರೋಚಕತೆ ಮತ್ತಷ್ಟು ಹೆಚ್ಚಿಸಿತ್ತು. ಭಾರತ 3-0 ಅಂತರದಲ್ಲಿ ಸರಣಿ ಕೈವಶ ಮಾಡಿತು. ಅಂತಿಮ ಪಂದ್ಯದಲ್ಲಿ ಆಫ್ಘಾನಿಸ್ತಾನದ ದಿಟ್ಟ ಹೋರಾಟಕ್ಕೆ ಬಾರಿ ಮೆಚ್ಚುಗೆ ವ್ಯಕ್ತವಾಯಿತು.

ಸೂಪರ್ ಓವರ್ ಗಿಂತ ಮೊದಲು ಭಾರತ ತಂಡ 4 ವಿಕೆಟ್ ನಷ್ಟಕ್ಕೆ 212  ರನ್ ಗಳಿಸಿತು. ಮೊದಲೆರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಅಬ್ಬರಿಸಿದರು. ಕೇವಲ 69 ಎಸೆತಗಳಲ್ಲಿ ಅಜೇಯ 121 ರನ್ ಗಳಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ಉದಯೋನ್ಮುಖ ಆಟಗಾರ ರಿಂಕು ಸಿಂಗ್ 39 ಎಸೆತಗಳಲ್ಲಿ 69 ರನ್ ಗಳಿಸಿ ಅಜೇಯರಾಗಿ ಉಳಿದರು. ಉಳಿದಂತೆ ಆರಂಭಿಕ ಯಶಸ್ವಿ ಜೈಸ್ವಾಲ್ 4, ವಿರಾಟ್ ಕೊಹ್ಲಿ 0, ಶಿವಂ ದುಬೆ 1, ಸಂಜು ಸಾಮ್ಸನ್ ಸೊನ್ನೆಗೆ ಔಟಾಗುವ ಮೂಲಕ ಕಳಪೆ ಪ್ರದರ್ಶನ ತೋರಿದರು.

ಇದಕ್ಕುತ್ತರವಾಗಿ ಉತ್ತಮ ಆರಂಭ ಪಡೆದ ಅಫ್ಘಾನ್ ತಂಡದ ಆರಂಭಿಕ ಮೂವರು ಆಟಗಾರರು ಅರ್ಧಶತಕ ಸಿಡಿಸುವ ಮೂಲಕ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿ ಪಂದ್ಯವನ್ನು ರೋಚಕ ಟೈ ಮಾಡುವಲ್ಲಿ ಯಶಸ್ವಿಯಾಗಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ