October 5, 2024

ತೇಜಸ್ವಿ ಅವರು ತಮ್ಮ ಕೃತಿಗಳಲ್ಲಿ ಕಾಲಘಟ್ಟಗಳ ದರ್ಶನವನ್ನು ಮಾಡಿಸಿ ಜೀವನದ ಅಸಂಬಂಧತೆಯನ್ನು ಶೋಧಿಸುತ್ತಾರೆ ಎಂದು ಸಾಹಿತಿ ನಾಗರಾಜರಾವ್ ಕಲ್ಕಟ್ಟೆ ಹೇಳಿದರು.

ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಶೃಂಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಕಾಲೇಜಿನಲ್ಲಿ ನಡೆದ ತೇಜಸ್ವಿ ಸಾಹಿತ್ಯ ಯಾನ ಯುವ ಸ್ಪಂದನ ಕಾರ್ಯಕ್ರಮದಲ್ಲಿ ಅಬಚೂರಿನ ಪೋಸ್ಟಾಫೀಸು ಕೃತಿಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಅಬಚೂರಿನ ಪೋಸ್ಟಾಫೀಸು ಕತೆಯಲ್ಲಿ ಗ್ರಾಮ್ಯಜೀವನದ ನಿರೂಪಣೆ ಮನಮುಟ್ಟುವಂತೇ ಮೂಡಿ ಬಂದಿದೆ. ಹಳ್ಳಿಯ ಮೇಲೆ ಆಧುನಿಕತೆಯ ಪ್ರಭಾವ ಹೇಗಿತ್ತು ಎಂಬುದನ್ನು ಈ ಕೃತಿ ವಿವರಿಸುತ್ತದೆ. ಆ ಕಾಲಘಟ್ಟದ ಸಾಂಸ್ಕೃತಿಕ ಪಲ್ಲಟಗಳು ಈ ಕೃತಿಯ ಕತೆಗಳಲ್ಲಿ ಕಾಣಸಿಗುತ್ತದೆ. ತೇಜಸ್ವಿ ಅವರ ಬದುಕು ಮತ್ತು ಬರಹ ಬೇರೆ ಬೇರೆ ಆಗಿರಲಿಲ್ಲ. ಅನುಭವದ ನೆಲೆಯಲ್ಲಿ ಬದುಕನ್ನು ಗ್ರಹಿಸಿದವರು ಮತ್ತು ತಮ್ಮ ಅನುಭವಗಳನ್ನು ಅಕ್ಷರವಾಗಿಸಿದವರು ತೇಜಸ್ವಿ. ಸಾಮಾನ್ಯರಂತೇ ಬದುಕಿ ಸಾಮಾನ್ಯರ ಬಗ್ಗೆ ಬರೆಯುತ್ತಾ ಸಾಹಿತ್ಯದಲ್ಲಿ ನಿಖರತೆಯನ್ನು ಹೊಂದಿದವರು ತೇಜಸ್ವಿ ಎಂದರು.

ಶೃAಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಭಾರತಿ ಅವರು ಮಾತನಾಡಿ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನವೂ ಯುವಕರಲ್ಲಿ ವಿದ್ಯಾರ್ಥಿಗಳಲ್ಲಿ ತೇಜಸ್ವಿ ಅವರ ಕೃತಿಗಳ ಓದಿನ ಅಭಿರುಚಿಯನ್ನು ಮೂಡಿಸಲು ಮತ್ತು ತೇಜಸ್ವಿ ಅವರ ಬದುಕು ಬರಹ ಚಿಂತನೆಗಳನ್ನು ತಲುಪಿಸಲು ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಕನ್ನಡ ಉಪನ್ಯಾಸಕರಾದ ಮರಿಸ್ವಾಮಿ ಅವರು ಮಾತನಾಡಿ, ಕುತೂಹಲದಿಂದ ತನ್ನ ಸುತ್ತಲಿನ ಪರಿಸರವನ್ನು ಗ್ರಹಿಸುತ್ತಿದ್ದ ತೇಜಸ್ವಿ ಅವರು ನಿತ್ಯ ಬದುಕಿನ ಸಾಮಾನ್ಯ ಸಂಗತಿಗಳ ವಿಶಿಷ್ಟ ವಿವರಗಳನ್ನು ತಮ್ಮ ಕೃತಿಗಳಲ್ಲಿ ತಂದರು ಎಂದರು.

ತೇಜಸ್ವಿ ಕೃತಿಗಳ ಕುರಿತು ಸಂವಾದ ಮತ್ತು ಸಾಕ್ಷö್ಯಚಿತ್ರ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಸರಸ್ವತಿ ಹೆಗ್ಗಡೆ, ಆಶಾ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಂಯೋಜಕರಾದ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿಗಳಾದ ಸತೀಶ್, ಸಂಗೀತಾ ಮುಂತಾದವರು ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ