October 5, 2024

ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಯತ್ನದ ಆರೋಪಿ ಪರಾರಿಯಾಗಿರುವ ಘಟನೆ ನಡೆದಿದೆ.

ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿ ಎಂ .ಕೆ ಪೂರ್ಣೇಶ್  ನನ್ನು ಚಿಕ್ಕಮಗಳೂರು ನಗರದ ಮಲ್ಲೇಗೌಡ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ಬಾಳೆಹೊನ್ನೂರು ಪೊಲೀಸ್ ಠಾಣಾ ಸರಹದ್ದಿನ ಮಾಗಲು ಗ್ರಾಮದ ವಾಸಿ ಎಂ ಕೆ ಪೂರ್ಣೇಶ್ ಬಿನ್ ಕೆಂಚೇಗೌಡ ಪ್ರಾಯ 31 ವರ್ಷ ಈತನ ವಿರುದ್ದ ದಿ :16/09/2023 ರಂದು ಠಾಣೆಯಲ್ಲಿ ದಾಖಲಾಗಿದ್ದ 112/2023 ಐಪಿಸಿ 504,326,307 ಪ್ರಕರಣದಡಿಯಲ್ಲಿ ಸುಮಾರು ಒಂದೂವರೆ ತಿಂಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವ ಸಲುವಾಗಿ ಇದ್ದ ಖಚಿತ ಮಾಹಿತಿ ಮೇರೆಗೆ ನಾಲ್ಕು ಜನ ಸಿಬ್ಬಂದಿಯವರೊಂದಿಗೆ ಪಿಎಸ್ಐ ಬಾಳೆಹೊನ್ನೂರು ಠಾಣೆ ರವರು ದಿ:30/10/2023 ಇಂದು ಬೆಳಗಿನ ಜಾವ ಆರೋಪಿಯು ಬಚ್ಚಿಟ್ಟುಕೊಂಡಿದ್ದ ಸ್ಥಳಕ್ಕೆ ಧಾವಿಸಿ ಮನೆಯನ್ನು ಸುತ್ತುವರೆದು ಆರೋಪಿಗೆ ಎಚ್ಚರಿಕೆ ನೀಡಿ ಶರಣಾಗಲು ತಿಳಿಸಿದ ಸಮಯದಲ್ಲಿ ಸದರಿ ಆರೋಪಿಯು ಅಲ್ಲಿಂದ ಪರಾರಿಯಾಗಲೆತ್ನಿಸಿ ಸಿಪಿಸಿ ಮಂಜುನಾಥ್ ಇವರಿಗೆ ಚಾಕುವಿನಿಂದ ಇರಿದು ಎಡಗೈ ಭುಜದ ಹತ್ತಿರ ರಕ್ತಗಾಯ ವನ್ನುಂಟುಮಾಡಿ ಇತರರ ಮೇಲೆ ಆಕ್ರಮಣಕ್ಕೆ ಮುಂದಾಗಿದ್ದ. ಈ ಸಂದರ್ಭದಲ್ಲಿ ಬಾಳೆಹೊನ್ನೂರು ಪಿ.ಎಸ್.ಐ. ದಿಲೀಪ್ ಕುಮಾರ್ ಆರೋಪಿಯ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ದರು.

ಬಲಗಾಲಿಗೆ ಗಾಯವಾಗಿದ್ದು ಸೂಕ್ತ ಚಿಕಿತ್ಸೆಗೆ ದಾಖಲಿಸಿದ್ದ  ಆರೋಪೀ ಶನಿವಾರ ಬೆಳಗಿನ ಜಾವ ಆಸ್ಪತ್ರೆಯಿಂದ ಪರಾರಿಯಾಗಿರುತ್ತಾನೆ.

ಆರೋಪಿ  ಕುಂಟುತ್ತಾ ನಡೆಯುತ್ತಿದ್ದು ಈತನು ಕಂಡುಬಂದಲ್ಲಿ ಅಥವಾ ಈತನ ಇರುವಿಕೆ ಬಗ್ಗೆ ಸುಳಿವು ಸಿಕ್ಕಲ್ಲಿ ಕೂಡಲೇ ಜಿಲ್ಲಾ ನಿಯಂತ್ರಣ ಕೊಠಡಿಗೆ ತಿಳಿಸುವಂತೆ ಜಿಲ್ಲಾ ರಕ್ಷಣಾಧಿಕಾರಿಗಳು ಮನವಿ ಮಾಡಿದ್ದಾರೆ.

ಮಾಹಿತಿ ಸಂಖ್ಯೆ: ಚಿಕ್ಕಮಗಳೂರು 9480805100, 8277991000, 08262-230540 08262-235608 ಅಥವಾ  ಪಿಎಸ್ಐ  ಬಾಳೆಹೊನ್ನೂರು ಠಾಣೆ 9480805158, 08266-250666

ರೌಡಿಶೀಟರ್ ಕಾಲಿಗೆ ಗುಂಡೇಟು ಹೊಡೆದು ಬಂಧನ ; ಪೊಲೀಸರಿಗೆ ಚಾಕುಹಾಕಿ ಪರಾರಿಯಾಗಲು ಯತ್ನಿಸಿದ್ದ ರೌಡಿಶೀಟರ್ ಪೂರ್ಣೇಶ್ ಗೌಡ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ