October 5, 2024

ಇತ್ತೀಚೆಗೆ ನಿಧನರಾದ ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡರುಗಳಾದ ಬಿ.ಎ.ಜಯರಾಂಗೌಡ ಬೆಳಗೋಡು ಮತ್ತು ನಾರ್ಬಾಟ್ ಸಾಲ್ದಾನ ಕುಂದೂರು ಇವರುಗಳಿಗೆ ಮೂಡಿಗೆರೆ ಬ್ಲಾಕ್ ಕಾಂಗ್ರೇಸ್ ವತಿಯಿಂದ ನುಡಿನಮನ ಸಲ್ಲಿಸಲಾಯಿತು.

ಅಗಲಿದ ನಾಯಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಅವರ ಸೇವೆ ಮತ್ತು ಸಾಧನೆಯ ಬಗ್ಗೆ ಮುಖಂಡರು ಮಾತನಾಡಿದರು.

ಮೂಡಿಗೆರೆ ಕಾಂಗ್ರೇಸ್ ಭವನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಸಚಿವೆ ಮೋಟಮ್ಮ ಮಾತನಾಡುತ್ತಾ ಅಗಲಿದ ಇಬ್ಬರು ಸಜ್ಜನ ನಾಯಕರನ್ನು ನೆನೆದು ಕಂಬನಿ ಮಿಡಿದರು ; ಬಿ.ಎ. ಜಯರಾಂಗೌಡ ಮತ್ತು ನಾರ್ಬಾಟ್ ಸಾಲ್ದಾನ ಅವರುಗಳು ಎಲೆಮರೆಯ ಕಾಯಿಯಂತೆ ಪಕ್ಷ ಸಂಘಟನೆ ಮತ್ತು ಸಮಾಜದ ಏಳಿಗೆಗಾಗಿ ದುಡಿದಿದ್ದರು. ಅವರು ಯಾವ ಹುದ್ದೆಗಳನ್ನು ಅಪೇಕ್ಷಿಸದೇ ನಿಸ್ವಾರ್ಥ ಮನೋಭಾವನೆಯಿಂದ ತಮ್ಮನ್ನು ಸಮಾಜಕ್ಕಾಗಿ ಅರ್ಪಿಸಿಕೊಂಡಿದ್ದರು. ಇಬ್ಬರು ಕೊಡುಗೈ ದಾನಿಗಳಾಗಿದ್ದರು. ಅನೇಕ ಸಮಾಜಮುಖಿ ಕಾರ್ಯಗಳಿಗೆ ಭೂಮಿ ದಾನ ಮತ್ತು ಆರ್ಥಿಕ ನೆರವನ್ನು ನೀಡಿದ್ದಾರೆ. ಅವರ ಆದರ್ಶ ಗುಣಗಳು ನಮಗೆಲ್ಲಾ ಮಾದರಿಯಾಗಿವೆ ಎಂದರು.

ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹೆಚ್.ಜಿ. ಸುರೇಂದ್ರ ಮಾತನಾಡಿ ಜಯರಾಂಗೌಡ ಮತ್ತು ನಾರ್ಬಾಟ್ ಸಾಲ್ದಾನ ಅವರು ಮೂಡಿಗೆರೆ ಬ್ಲಾಕ್ ಸಮಿತಿ ಮತ್ತು ಬಣಕಲ್ ಹೋಬಳಿ ಕಾಂಗ್ರೇಸ್ ಸಮಿತಿಗಳಲ್ಲಿ ಸಕ್ರಿಯರಾಗಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಅವರಿಬ್ಬರು ಪಕ್ಷಕ್ಕೆ ಹಿರಿಯ ಮಾರ್ಗದರ್ಶಿಗಳಾಗಿದ್ದರು. ಅವರ ಅಗಲಿಕೆ ಪಕ್ಷಕ್ಕೆ ಮತ್ತು ಸಮಾಜಕ್ಕೆ ದೊಡ್ಡ ನಷ್ಟವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಬಿ. ನಿಂಗಯ್ಯ,  ಮುಖಂಡರಾದ ಬಿ.ಎಸ್. ಜಯರಾಂ, ಎ.ಜಿ. ಸುಬ್ರಾಯಗೌಡರು. ಸುಬ್ರಮಣ್ಯ ತ್ರಿಪುರ. ಕೆ.ಆರ್. ಸುಂದ್ರೇಶ್ ಕುಂದೂರು. ನಿಶಾಂತ್ ಪಟೇಲ್. ಶಿವಕುಮಾರ್ ಕೆ.ಪಿ, ಬ್ಯಾರಿ ಒಕ್ಕೂಟದ ಅಧ್ಯಕ್ಷರಾದ ಮಹಮ್ಮದ್ ಮುಂತಾದವರು ಉಪಸ್ಥಿತರಿದ್ದು ಅಗಲಿದ ನಾಯಕರಿಗೆ ನುಡಿನಮನ ಸಲ್ಲಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ