October 5, 2024

ಚಿಕ್ಕಮಗಳೂರು ತಾಲ್ಲೂಕು ಬೆರಣುಗೋಡು ಗ್ರಾಮದ ದಿ.ನಾಗಪ್ಪಗೌಡ ಮತ್ತು ಕಸ್ತೂರಿ ಅವರ ಪುತ್ರಿ ಯುವಪ್ರತಿಭೆ ಬಿ.ಎನ್.ನಮನಾಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್‍ಡಿ ಪಡೆದಿದ್ದಾರೆ.

ಡಾ.ಕೆ.ಸಿ.ಶಿವಾರೆಡ್ಡಿ ಮಾರ್ಗದರ್ಶನದಲ್ಲಿ ‘ಆಧುನಿಕ ಕನ್ನಡಕಾವ್ಯ:ಅಸ್ಪೃರ್ಶತೆಯ ಪ್ರಶ್ನೆಗಳು’ ಕುರಿತಂತೆ ನಮನಾ ಸಲ್ಲಿಸಿದ ಸಂಶೋಧನಾ ಪ್ರಬಂಧವನ್ನು ಕನ್ನಡ ವಿ.ವಿ.ಪರಿಗಣಿಸಿ ಡಾಕ್ಟರೇಟ್ ಪದವಿ ನೀಡಿದೆ.

ಜನವರಿ 10ರಂದು ಹಂಪಿಯಲ್ಲಿ ನಡೆದ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಿಎಚ್‍ಡಿ ಪ್ರದಾನ ಮಾಡಲಾಗಿದೆ. ಶಿಕ್ಷಣ ಸಚಿವ ಡಾ. ಸುಧಾಕರ್ ಅವರ ಸಮ್ಮುಖದಲ್ಲಿ ನಮನ ಪಿಹೆಚ್ ಡಿ ಪದವಿ ಸ್ವೀಕರಿಸಿದ್ದಾರೆ.

ನಮನ ಸಾಧನೆಗೆ ಅವರಿಗೆ ಕಲ್ಕಟ್ಟೆಪುಸ್ತಕಮನೆಯ ನಾಗರಾಜರಾವ್ ಕಲ್ಕಟ್ಟೆ, ಆಶಾಕಿರಣದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ, ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.

ನಮನ ಪ್ರತಿಭಾವಂತ ಯುವ ಸಾಧಕಿಯಾಗಿದ್ದು, ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಾಧನೆ ತೋರುತ್ತಿದ್ದಾರೆ. ಉತ್ತಮ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಮಾಧ್ಯಮ ಅನೇಕ ಎಂಬ ಯು ಟ್ಯೂಬ್ ಚಾಲನ್ ನಲ್ಲಿ “web ಸಂಭಾಷಣೆ – ಬಿಚ್ಚಿಟ್ಟ ಬುತ್ತಿ” ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

ಸಾಹಿತ್ಯ, ಸಂಗೀತ, ರಂಗಭೂಮಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಬರೆದ ‘ನಡುವೆ ಸುಳಿವಾತ್ಮ’ ನಾಟಕವು ಕರ್ನಾಟಕ ನಾಟಕ ಅಕಾಡೆಮಿ ರೂಪಿಸಿದ್ದ ನಾಟಕ ರಚನಾ ಸ್ಪರ್ಧೆಯಲ್ಲಿ, ವಿದ್ಯಾರ್ಥಿ ವಿಭಾಗದ ಪ್ರಶಸ್ತಿ ಪಡೆದುಕೊಂಡಿತ್ತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ