October 5, 2024

ಐ ಎ ಎಸ್ ಅಧಿಕಾರಿ ಶ್ರೀಮತಿ ಅನಿತಾ ಕೌಲ್ ಸ್ಮರಣಾರ್ಥ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಘಟಕ, ಬೆಂಗಳೂರು ಇವರು ಕೊಡಮಾಡುವ *ರಾಜ್ಯಮಟ್ಟದ ಅತ್ಯುತ್ತಮ ಅನಿತಾ ಕೌಲ್ ಶಿಕ್ಷಕ/ಕಿ ಪ್ರಶಸ್ತಿಗೆ*, ಪ್ರಾಥಮಿಕಶಾಲಾ, ಪ್ರೌಢಶಾಲಾ, ಪದವಿಪೂರ್ವ ಕಾಲೇಜು ಮತ್ತು ಎಸ್ ಡಿ ಎಂ ಸಿ ಈ ನಾಲ್ಕು ಹಂತದಲ್ಲಿ ರಾಜ್ಯದಾದ್ಯಂತ 2023-24 ರಲ್ಲಿ ಒಟ್ಟು 49 ಜನ ಭಾಜನರಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಿಂದ ಒಟ್ಟು ಮಂದಿ ಆಯ್ಕೆಯಾಗಿದ್ದಾರೆ.  ಪ್ರೌಢಶಾಲಾ ಹಂತದಲ್ಲಿ ಒಬ್ಬರು ಸಂದೇಶ್ ಕೆ.ಎಲ್. ಕಳಸ ತಾಲ್ಲೂಕು, ಪ್ರಾಥಮಿಕ ಶಾಲಾ ಹಂತದಿಂದ ಏಳು ಜನ, ಪೂರ್ಣೆಶ್ ವಿ.ಪಿ. ಚಿಕ್ಕಮಗಳೂರು ತಾಲ್ಲೂಕು, ಸುರೇಶ್ ಗೌಡ ಕೆ.ವಿ. ಮತ್ತು  ಜೀಟಾ  ವಿ. ಲೋಬೋ ಮೂಡಿಗೆರೆ ತಾಲ್ಲೂಕು, ರಾಧಾಮಣಿ ಮತ್ತು ಗವಿರಂಗಪ್ಪ, ಎನ್. ಆರ್. ಪುರ ತಾಲ್ಲೂಕು, ಪರಮೇಶ್ವರಪ್ಪ ಕಡೂರು ತಾಲ್ಲೂಕು, ಸೌಭಾಗ್ಯ ತರೀಕೆರೆ   ಅನಿತಾ ಕೌಲ್ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ/ಶಿಕ್ಷಕಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಜನವರಿ 7ರಂದು  ಬೆಂಗಳೂರಿನ ಬಸವನಗುಡಿಯಲ್ಲಿರುವ ಡಾ.ಹೆಚ್ ನರಸಿಂಹಯ್ಯ ಮಲ್ಟಿ ಮೀಡಿಯಾ ಸಭಾಂಗಣದಲ್ಲಿ ಈ ನಾಡಿನ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮತ್ತು ಹೆಸರಾಂತ ಮನೋವೈದ್ಯ ಡಾ. ಸಿ. ಆರ್. ಚಂದ್ರಶೇಖರ್ ಮುಂತಾದವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಚಿಕ್ಕಮಗಳೂರು ಜಿಲ್ಲೆಯ ಶಿಕ್ಷಕರುಗಳಿಗೆ ಗೌರವಿಸುವ ಸಂದರ್ಭದಲ್ಲಿ  ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಮುಗಳಿಕಟ್ಟೆ ಲೋಕೇಶ್, ಕಾರ್ಯದರ್ಶಿ ಮಂಜುನಾಥ ಸ್ವಾಮಿ ಮತ್ತು ಪದಾಧಿಕಾರಿಗಳು ಮೂಡಿಗೆರೆಯ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ